ರೈತ ಅನುವುಗಾರರ ನೇಮಕಕ್ಕೆ ಮನವಿ
Team Udayavani, Jun 12, 2020, 7:19 AM IST
ಜೇವರ್ಗಿ: ರೈತ ಅನುವುಗಾರರನ್ನು ಕೃಷಿ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಅನುವುಗಾರರ ಸಂಘ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಸಿದರಾಯ ಭೋಸಗಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲಕುಮಾರ ಜವಳಗಿ ಮೂಲಕ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೃಷಿ ಇಲಾಖೆಯಲ್ಲಿ ಕಳೆದ 10-12 ವರ್ಷಗಳಿಂದ ರೈತ ಅನುವುಗಾರರು ಭೂ ಚೇತನ ಯೋಜನೆ, ರೈತ ಕ್ಷೇತ್ರ ಪಾಠ ಶಾಲೆ, ಮಣ್ಣು ಪರೀಕ್ಷೆ, ಬೆಳೆ ಸಮೀಕ್ಷೆ, ಬೆಳೆ ಕಟಾವು ಸಮೀಕ್ಷೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಹಾಗೂ ಇಲಾಖೆಯಲ್ಲಿನ ವಿವಿಧ ಪರಿಕರಗಳ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ನೀಡಲಾಗುತ್ತಿದೆ. ಕಾರಣ ಈಗ ಕೃಷಿ ಇಲಾಖೆಯಲ್ಲಿ ಹೊಸದಾಗಿ ರೈತ ಮಿತ್ರ ಎಂದು ನಾಮಕರಣ ಮಾಡಿ ಇಲಾಖೆಯು ಹೊಸ ಪ್ರಕ್ರಿಯೆ ನಡೆಸುತ್ತಿದ್ದು, ರೈತ ಮಿತ್ರ ನೇಮಕಾತಿಗೆ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರೈತ ಅನುವುಗಾರರ ಕುಟುಂಬ ಬೀದಿಗೆ ಬರಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಪದ್ಧತಿ ಕೈಬಿಟ್ಟು ಕಳೆದ 10-12 ವರ್ಷಗಳಿಂದ ಅನುಭವ ಹೊಂದಿರುವ ಹಾಗೂ ಪ್ರತಿ ವರ್ಷ ಕೃಷಿಗೆ ಸಂಬಂಧಿ ಸಿದ ತರಬೇತಿ ಪಡೆದ ಅನುವುಗಾರರನ್ನು ನೇಮಕ ಮಾಡಬೇಕೆಂದು ಮನವಿ ಮಾಡಲಾಗಿದೆ.
ರೈತ ಅನುವುಗಾರರಾದ ದೇವಿಂದ್ರ ಬನ್ನೆಟ್ಟಿ, ಸೈದಪ್ಪ ಗುತ್ತೇದಾರ, ಸಿದ್ರಾಮಪ್ಪ ಪೂಜಾರಿ ಹಾಲಗಡ್ಲಾ, ಮಲ್ಲಣ್ಣ ಮ್ಯಾಗೇರಿ ನರಿಬೋಳ, ದೇವಿಂದ್ರ ಗಜಾಕೋಶ, ಸಂತೋಷ ಹಾಲಕಾಯಿ, ಹುಸೇನಿಬಾಷಾ ಕಣ್ಣಿ, ಸಾಯಬಣ್ಣ ಹೊನ್ನಾಳಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.