ಕಲಬುರಗಿ ಉಪವಿಭಾಗದಲಿ ಕಾಳಗಿ ಸೇರಿಸಲು ಮನವಿ
Team Udayavani, Oct 17, 2017, 10:17 AM IST
ಕಾಳಗಿ: ಸುಮಾರು ವರ್ಷಗಳ ಹೋರಾಟದ ಫಲವಾಗಿ ಕಾಳಗಿ ನೂತನ ತಾಲೂಕು ಕೇಂದ್ರವಾಗಿ ರಚನೆಯಾಗಿದೆ. ಅದೇ ರೀತಿ ಈ ಭಾಗದ ಜನರ ಶಾಶ್ವತ ಸಮಸ್ಯೆ ನಿವಾರಣೆಗಾಗಿ ಕಾಳಗಿ ತಾಲೂಕನ್ನು ಕಲಬುರಗಿ ಉಪವಿಭಾಗದಲ್ಲಿ ಸೇರಿಸಬೇಕು. ಇದು ಎಲ್ಲ ಜನರ ಬೇಡಿಕೆಯೂ ಆಗಿದೆ ಎಂದು ತಾಲೂಕಿನ ಎಲ್ಲ ಮಠಾಧೀಶರ ನೇತೃತ್ವದಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಕಾಳಗಿ ತಾಲೂಕಿನ ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರ ಒಕ್ಕೂಟ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಭರತನೂರಿನ ಶ್ರೀ ಗುರುನಂಜೇಶ್ವರ ಮಹಾಸ್ವಾಮಿಗಳು, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಾಳಗಿ ತಾಲೂಕು ಕೇಂದ್ರವಾಗಿರುವುದು ಸಂತಸದಾಯಕವಾಗಿದೆ. ಆದರೆ ಈ ಭಾಗದ ರೈತರು, ಜನಸಾಮಾನ್ಯರ ಹಿತದೃಷ್ಟಿಯಿಂದ ಕಾಳಗಿಯನ್ನು ಸೇಡಂ ಅಥವಾ ಇನ್ನಾವುದೇ ಉಪವಿಭಾಗಕ್ಕೆ ಸೇರಿಸದೆ ಕಲಬುರಗಿ ಉಪವಿಭಾಗಕ್ಕೆ ಮಾತ್ರ ಸೇರಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕಾಳಗಿ-ಗುಂಡಗುರ್ತಿ-ಕೋಡ್ಲಿ ಹೋಬಳಿಯ ಶೇ. 80ರಷ್ಟು ಗ್ರಾಮಗಳು ಚಿತ್ತಾಪುರ ಅಥವಾ ಸೇಡಂಗೆ 80ರಿಂದ 100 ಕಿಮೀ ದೂರದಲ್ಲಿವೆ. ಆದರೆ ಈ ಎಲ್ಲ ಗ್ರಾಮಗಳು ಕಲಬುರಗಿ ಜಿಲ್ಲೆಗೆ ಕೇವಲ 10ರಿಂದ 15 ಕಿಮೀ ಅಂತರದಲ್ಲಿವೆ. ಕಾಳಗಿ ತಾಲೂಕಿನ ರೈತರು, ಜನಸಾಮಾನ್ಯರು ಸಮೀಪದ ಕಲಬುರಗಿ ಜಿಲ್ಲೆ ಮಾರುಕಟ್ಟೆ ಮೇಲೆ ಕೃಷಿ ಸಾಮಗ್ರಿ ಖರೀದಿ ಮಾರಾಟ ಹಾಗೂ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳಿಗಾಗಿ ಅವಲಂಬಿತರಾಗಿದ್ದಾರೆ. ಅದರಿಂದ ಕಾಳಗಿಯನ್ನು ಕಲಬುರಗಿ ಉಪವಿಭಾಗದಲ್ಲಿ ಸೇರಿಸುವುದರಿಂದ ಜನರಿಗೆ ಹೆಚ್ಚಿನ ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಶಿವಬಸವೇಶ್ವರ ಹಿರೇಮಠ ದಿಂದ ಪ್ರಾರಂಭವಾದ ಮಠಾಧೀಶರ ಬೃಹತ್ ಪ್ರತಿಭಟನಾ ರ್ಯಾಲಿ ಮುಖ್ಯ ಬಜಾರ ಮೂಲಕ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು. ಮುಗುಳನಾಗಾಂವ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಟೆಂಗಳಿಯ ಶ್ರೀ ಡಾ| ಶಾಂತಸೋಮನಾಥ ಶಿವಾಚಾರ್ಯರು, ಕಾಳಗಿಯ ಶ್ರೀ ಶಿವಬಸವ ಶಿವಾಚಾರ್ಯರು, ಪೇಠಶಿರೂರನ ಜೇಮಸಿಂಗ್ ಮಹಾರಾಜರು ಮಾತನಾಡಿದರು.
ಹೊಸಳ್ಳಿಯ ಶ್ರೀ ಸಿದ್ಧಲಿಂಗ ಶಿವಚಾರ್ಯರು, ಬಣಮಗಿ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಕಬ್ಬಣಗುತ್ತಿ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು, ರಟಕಲ್‌ನ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಶ್ರೀ ರೇವಣಸಿದ್ದ ಶಿವಾಚಾರ್ಯರು, ಕೊಡ್ಲಿ ಶ್ರೀ ಬಸವಲಿಂಗ ಶಿವಾಚಾರ್ಯರು, ಪೇಠಶಿರೂರ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಡೊಣ್ಣೂರ ಶ್ರೀ ಪ್ರಶಾಂತ ದೇವರು, ಬೆಳಗುಂಪ ಶ್ರೀ ಶಿವಗಂಗಾಧರ ಸ್ವಾಮಿಗಳು, ರೈತರಾದ ಶಿವರಾಯ ಬೊಮ್ಮಣ್ಣಿ, ಸೋಮಶೇಖರ
ಮಕಪನೊರ, ಮಲ್ಲಣ್ಣ ಕುಡ್ಡಳ್ಳಿ, ಶೇಖರ ಪಾಟೀಲ, ಬಸವಾಜ ಚಿಟ್ಟಾ, ವೀರೇಶ ಪಾಟೀಲ, ಕಾಳಶೆಟ್ಟಿ ಸುಂಠಾಣ, ಕಾಳಪ್ಪ ಚಿಮ್ಮನಚೊಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.