ಜಮೀನು-ಮನೆ ನೀಡಿ ತಾಂಡಾ ಸ §ಳಾಂತರಿಸಲು ಮನವಿ
Team Udayavani, Jul 8, 2018, 10:58 AM IST
ಚಿಂಚೋಳಿ: ಅನೇಕ ತಲೆಮಾರಿನಿಂದ ನಾವು ಇಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ, ಜಮೀನು ಬಿಟ್ಟು ಅರಣ್ಯಪ್ರದೇಶದಿಂದ ಹೊರಗೆ ಹೋಗಲು ಆಗುವುದಿಲ್ಲ. ನಮ್ಮ ಆಸ್ತಿಗೆ ಸೂಕ್ತ ಪರಿಹಾರ ನೀಡಿ, ಸರಕಾರದಿಂದ ಜಮೀನು, ವಾಸಿಸಲು ಮನೆ ಕಟ್ಟಿಸಿಕೊಟ್ಟರೆ ಸ್ಥಳಾಂತರಗೊಳ್ಳುತ್ತೇವೆ ಎಂದು ಸೇರಿಭಿಕನಳ್ಳಿ ತಾಂಡಾದ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಸೇರಿಭಿಕನಳ್ಳಿ ತಾಂಡಾದಲ್ಲಿ ಶನಿವಾರ ವನ್ಯಜೀವಿ ಧಾಮ ಅರಣ್ಯ ಇಲಾಖೆಯಿಂದ ಏರ್ಪಡಿಸಿದ ಸೇರಿಭಿಕನಳ್ಳಿ ತಾಂಡಾ ಸ್ಥಳಾಂತರ ಕುರಿತು ಶಾಸಕ ಡಾ| ಉಮೇಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ತಾಂಡಾದ ಮುಖ್ಯಸ್ಥ ಧನಸಿಂಗ ರಾಠೊಡ ಮಾತನಾಡಿ, ತಾಂಡಾದಲ್ಲಿ ಒಟ್ಟು 68.16 ಎಕರೆ ಗುಂಟೆ ಪಟ್ಟಾ ಜಮೀನಿದೆ. 55 ಮನೆಗಳು, 260 ಜನಸಂಖ್ಯೆಯಿದೆ. 55 ಕುಟುಂಬಗಳು ಆಹಾರ ಪಡಿತರ ಚೀಟಿಯನ್ನು ಪಡೆದುಕೊಂಡಿವೆ. ಪ್ರತಿಯೊಂದು ಕುಟುಂಬಕ್ಕೆ ವಿಶೇಷ ಪ್ಯಾಕೇಜ್‌ನಡಿ 15ಲಕ್ಷ ರೂ. ನೀಡಬೇಕು. ಜಮೀನು ಇಲ್ಲದವರಿಗೆ ಜಮೀನು ಸರಕಾರದಿಂದ ಕೊಡಿಸಬೇಕು. ಪ್ರತಿ ಎಕರೆಗೆ 7ಲಕ್ಷ ರೂ.ನೀಡಬೇಕು. ವಾಸಿಸುವುದಕ್ಕಾಗಿ ಮನೆ ನಿರ್ಮಿಸಿಕೊಡಬೇಕು. ಜಮೀನುಗಳಲ್ಲಿ ಬೋರವೆಲ್ ಕೊರೆಯಿಸಿ ವಿದ್ಯುತ್ ಸಂಪರ್ಕ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಶಾಸಕ ಡಾ| ಉಮೇಶ ಜಾಧವ ತಾಂಡಾ ಜನರ ಅಭಿಪ್ರಾಯ ಆಲಿಸಿ, ಬೇಕಾಗುವ ಸೌಲಭ್ಯ, ಬೇಡಿಕೆ, ಆಸ್ತಿಪಾಸ್ತಿ ಬಗ್ಗೆ ಪರಿಹಾರ ನಿಗದಿಪಡಿಸಿ ಒಮ್ಮತದಿಂದ ಎಲ್ಲರೂ ತಿಳಿಸಿದರೆ ನಾನು ಸರಕಾರದ ಗಮನ ಸೆಳೆದು ಹೆಚ್ಚಿನ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಜಮೀನು ಕಳೆದುಕೊಂಡವರಿಗೆ ಚಿಮ್ಮಾಇದಲಾಯಿ, ಐನೋಳಿ, ಭೋಗಾಲಿಂಗದಳ್ಳಿ ಗ್ರಾಮಗಳ ಸುತ್ತಮುತ್ತ ಜಮೀನು ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅರಣ್ಯ ಇಲಾಖೆ ತೆಗೆದುಕೊಳ್ಳುವ ನಿಯಮಗಳಿಗೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.
ತಾಂಡಾದ ಮುಖ್ಯಸ್ಥರಾದ ಗೋಪಾಲ ಜಾಧವ, ಮನ್ನುಸಿಂಗ್ ರಾಠೊಡ, ರಾಮಶೆಟ್ಟಿ ರಾಠೊಡ, ಶಂಕರ,ಲಿಂಬಾಜಿ, ಅಶೋಕ ಚವ್ಹಾಣ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಡಿಎಫ್‌ಒ ಶಿವಶಂಕರ, ಎಸಿಎಫ್ ರಾಮಕೃಷ್ಣ ಯಾದವ್, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ,ಆರ್‌ಎಫ್‌ಒ ಸುನೀಲ ಚವ್ಹಾಣ, ತಹಶೀಲ್ದಾರ್ ಪಂಡಿತರಾವ್ ಬಿರಾದಾರ, ತಾಪಂ ಅಧಿಕಾರಿ ಮಹಮ್ಮದ ಮೈನೋದ್ದೀನ್ ಪಟಲಿಕರ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಸಂಜೀವ ಚವ್ಹಾಣ ಇನ್ನಿತರರು ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಸಿದ್ದಾರೂಢ ವಂದಿಸಿದರು. ತಾಂಡಾದ ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.