ಪ್ರವಾಸವಾಗದಿರಲಿ ಸಂಶೋಧನೆ
Team Udayavani, Jan 28, 2019, 8:57 AM IST
ವಾಡಿ: ಇತಿಹಾಸ ಸಂಶೋಧನೆ ಎನ್ನುವುದು ವಿವಿ ವಿದ್ಯಾರ್ಥಿಗಳ ಪಾಲಿಗೆ ಕೇವಲ ಪ್ರವಾಸ ಪರ್ಯಟನೆ ಆಗಬಾರದು. ಅದೊಂದು ಸತ್ಯದ ಹುಡುಕಾಟವಾಗಿ, ಮುಚ್ಚಿದ ಇತಿಹಾಸ ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ| ಎಸ್.ಆರ್. ನಿರಂಜನ ಹೇಳಿದರು.
ಸನ್ನತಿ ಬೌದ್ಧಸ್ತೂಪ ಸ್ಥಳಕ್ಕೆ ಭೇಟಿ ನೀಡಿದ ಗುಲಬರ್ಗಾ, ತುಮಕೂರು ಹಾಗೂ ಶಿವಮೊಗ್ಗಾದ ಕುವೆಂಪು ವಿಶ್ವವಿದ್ಯಾಲಯಗಳ ಇತಿಹಾಸ ಸಂಶೋಧನಾ ಕೇಂದ್ರಗಳ ನೂರಾರು ವಿದ್ಯಾರ್ಥಿಗಳಿಗೆ ಸನ್ನತಿ ಬೌದ್ಧ ಶಿಲಾಶಾಸನ ಅಧ್ಯಯನ ಪ್ರವಾಸ ಉದ್ದೇಶಿಸಿ ಅವರು ಮಾತನಾಡಿದರು. ಸೈನ್ಸ್ ಮತ್ತು ಇಂಜಿನಿಯರಿಂಗ್ ಪ್ರವೇಶ ವಂಚಿತರಾಗಿ ಕಲಾ (ಆರ್ಟ್ಸ್)ವಿಷಯ ಅಧ್ಯಯನಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಮನದಲ್ಲಿ ಯಾವುದೇ ರೀತಿಯ ಮಾನಸಿಕ ಕೊರಗು ಕಾಡಬಾರದು. ಸಿಕ್ಕ ಅವಕಾಶಗಳನ್ನು ಆಸಕ್ತಿಯಿಂದ ಬಳಕೆಮಾಡಿಕೊಳ್ಳಬೇಕು. ಇತಿಹಾಸ ಸಂಶೋಧನಾ ಅಧ್ಯಯನದಲ್ಲೂ ಸಾಧನೆ ಮಾಡಲು ಹೆಚ್ಚು ಅವಕಾಶಗಳಿವೆ ಎಂದರು.
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಡಾ| ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಪ್ರತಿಯೊಬ್ಬ ವಿವಿ ವಿದ್ಯಾರ್ಥಿಯೂ ಸ್ಫೂರ್ತಿಯಾಗಿ ಸ್ವೀಕರಿಸಬೇಕು. ಆಕ್ರಮಣಕಾರಿ ಧೊರಣೆಗಳಿಂದ ಮುಚ್ಚಿಹೋದ ಘತಕಾಲದ ಇತಿಹಾಸಗಳನ್ನು ಮತ್ತೆ ಬಿಚ್ಚಿಡುವ ಸಾಹಸ ತೋರಬೇಕು ಎಂದರು.
ಸನ್ನತಿ ಸಮೀಪದ ಭೀಮಾನದಿ ದಡದಲ್ಲಿರುವ ಕನಗನಹಳ್ಳಿ ಗ್ರಾಮದ ಪರಿಸರದಲ್ಲಿ ಉತVನನ ಮೂಲಕ ಭಗ್ನಾವಶೇಷಗಳ ರೂಪದಲ್ಲಿ ದೊರೆತಿರುವ ಬೌದ್ಧ ಶಿಲಾಶಾಸನಗಳು, ಬುದ್ಧನ ಮೂರ್ತಿಗಳು ಹಾಗೂ ಇಲ್ಲಿನ ಬೌದ್ಧ ಸ್ತೂಪ ಸಾಮ್ರಾಟ್ ಅಶೋಕ ಚಕ್ರವರ್ತಿ ಕಾಲಘಟ್ಟದ ಇತಿಹಾಸ ಹೇಳುತ್ತಿವೆ. ಪ್ರತಿಯೊಂದು ಶಿಲಾಮೂರ್ತಿ ಬೌದ್ಧ ಧಮ್ಮದ ಕಥೆ ಹೇಳುತ್ತಿವೆ. ಇವುಗಳನ್ನು ಸರಿಯಾಗಿ ಅಧ್ಯಯನ ಮಾಡಿ, ಪ್ರಬಂಧ ಮಂಡಿಸಿ ಬೆಳಕು ಚೆಲ್ಲಬೇಕು ಎಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಂಗಳೂರು ಮಹಾಬೋ ಸೊಸೈಟಿಯ ಬೌದ್ಧ ಭಿಕ್ಷು ಬುದ್ಧದತ್ತಾ ಸಾನ್ನಿಧ್ಯ, ವಾಡಿ ನವಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ರಿಜಿಸ್ಟಾರ್ ಪ್ರೊ| ಭೋಜ್ಯಾ ನಾಯಕ್, ತುಮಕೂರು ವಿವಿಯ ಪ್ರೊ| ಕೆ.ಎನ್. ಗಂಗಾನಾಯಕ, ಕಾರ್ಯಾಗಾರ ಆಯೋಜಕರಾದ ಪ್ರೊ| ಜಿ. ಸರ್ವಮಂಗಳ, ಪ್ರೊ| ಮಂಜುಳಾ ಬಿ.ಚಿಂಚೋಳಿ, ಇಂಗಳಗಿ ಗ್ರಾಪಂ ಸದಸ್ಯ ಸುಭಾಷ ಯಾಮೇರ, ಮನೋಜಕುಮಾರ ಹಿರೋಳಿ, ಉದಯಕುಮಾರ ಯಾದಗಿರಿ ಹಾಗೂ ಗುಲಬರ್ಗಾ, ತುಮಕೂರು, ಶಿವಮೊಗ್ಗಾ ವಿವಿಗಳ ಪಿಎಚ್‌ಡಿ ಮತ್ತು ಎಂ.ಎ ಅಧ್ಯಯನದ 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರೊ| ಉದಯರವಿ ಮೂರ್ತಿ ನಿರೂಪಿಸಿ, ವಂದಿಸಿದರು. ಛಾಯಾಚಿತ್ರಗಳ ಸಮೇತ ವಿದ್ಯಾರ್ಥಿಗಳು ಸನ್ನತಿ ಬೌದ್ಧ ಶಿಲೆಗಳು ಮತ್ತು ಶಾಸನಗಳ ಪರಿಶೀಲನೆ ಮಾಡುವ ಮೂಲಕ ಮಾಹಿತಿ ಕಲೆಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.