ಪತ್ರಿಕೆ ಹಂಚುವ ಹುಡುಗರನ್ನು ಗೌರವಿಸಿ
Team Udayavani, Jan 14, 2021, 1:54 PM IST
ವಾಡಿ: ದಿನಪತ್ರಿಕೆ ರೂಪದಲ್ಲಿ ಪ್ರಪಂಚದ ಜ್ಞಾನವನ್ನು ಹೊತ್ತು ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬರುವ ಹುಡುಗರನ್ನು ಓದುಗರು ಗೌರವದಿಂದ ಕಾಣಬೇಕು ಎಂದು ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅವರ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ದಿನಪತ್ರಿಕೆಗಳ ವಿತರಕರಿಗೆ ಸ್ವೆಟರ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಅನೇಕ ಮಹಾನ್ ವ್ಯಕ್ತಿಗಳು ಬಾಲ್ಯದ ದಿನಗಳಲ್ಲಿ ಹಾಲು, ದಿನಪತ್ರಿಕೆ ವಿತರಿಸಿ ಎತ್ತರಕ್ಕೆ ಬೆಳೆದವರಿದ್ದಾರೆ. ಒಂದು ದಿನಪತ್ರಿಕೆ ಮುದ್ರಣಗೊಂಡು ಓದುಗರ ಕೈ ಸೇರುವ ಪ್ರಸಂಗದ ಹಿಂದೆ ನೂರಾರು ಜನರ ಪರಿಶ್ರಮವಿರುತ್ತದೆ. ಮುದ್ರಣಗೊಂಡ ಪತ್ರಿಕೆಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ಪಡಬಾರದ ಕಷ್ಟಪಟ್ಟಿರುತ್ತಾರೆ ಎಂಬುದನ್ನು ಓದುಗರು ಮರೆಯಬಾರದು ಎಂದರು.
ಇದನ್ನೂ ಓದಿ:ಆನೆಕಾಲು ರೋಗ ನಿಯಂತ್ರಣಕ್ಕೆ ಔಷಧಿ ನೀಡಿಕೆ
ಪುರಸಭೆ ಸದಸ್ಯ ದೇವೇಂದ್ ಕರದಳ್ಳಿ ಮಾತನಾಡಿ, ವರದಿಗಾರನಿಂದ ಸಿದ್ಧವಾಗುವ ಒಂದು ಸುದ್ದಿ ಸಂಪಾದಕರಿಂದ ಮಾನ್ಯತೆ ಪಡೆದು ಮುದ್ರಣವಾಗಿ ನಮ್ಮ ಕೈ ಸೇರುವುದರ ಹಿಂದೆ ವಿತರಕರ ಸೇವೆ ದೊಡ್ಡದಿದೆ. ದಿನಪತ್ರಿಕೆ ಓದದೆ ನಮಗೆ ದಿನವೇ ಹೋಗುವುದಿಲ್ಲ. ಕಡಿಮೆ ಕಾಸಿಗಾಗಿ ದುಡಿಯುವ ದಿನಪತ್ರಿಕೆಗಳ ವಿತರಕರು ಚಳಿಗಾಲ ಮತ್ತ ಮಳೆಗಾಲಗಳಲ್ಲಿ ಆರೋಗ್ಯ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಹ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನಾ ಧಿಕಾರಿ ಚಂದ್ರಕಾಂತ ಪಾಟೀಲ, ಕಾಶಿನಾಥ ಧನ್ನಿ, ಕೆ.ವಿರೂಪಾಕ್ಷಿ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ವಿಶಾಲ ನಂದೂರಕರ, ಮುಖಂಡರಾದ ತುಕಾರಾಮ ರಾಠೊಡ, ವಿಜಯಕುಮಾರ ಸಿಂಗೆ, ಅಶ್ರಫ್‌ಖಾನ್, ಪರಶುರಾಮ ಕಟ್ಟಿಮನಿ, ಶರಣಪ್ಪ ವಾಡೇಕರ, ಅಬ್ರಾಹಂ ರಾಜಣ್ಣ ಪಾಲ್ಗೊಂಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.