ಮೋದಿಯಿಂದ ಕ್ರಾಂತಿಕಾರಿ ಯೋಜನೆ ಜಾರಿ: ರೂಪಾಲ್
Team Udayavani, Feb 23, 2019, 4:34 AM IST
ಕಲಬುರಗಿ: ದೇಶದ ಅರ್ಧ ಜನಸಂಖ್ಯೆ (ಸುಮಾರು 50 ಕೋಟಿ) ಗೂ ಅನುಕೂಲವಾಗುವ ಆಯುಷ್ಮಾನ ಭಾರತ ಆರೋಗ್ಯ ಯೋಜನೆ, 6 ಕೋಟಿ ಕುಟುಂಬಗಳಿಗೆ ಅನಿಲ ಸಂಪರ್ಕ, ಗ್ರಾಪಂಗಳಿಗೆ 2 ಲಕ್ಷ ಕೋಟಿ ರೂ. ನೇರ ಅನುದಾನ, ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ ಸೇರಿದಂತೆ ಹಲವು ಕ್ರಾಂತಿಕಾರಿ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿವೆ ಅಲ್ಲದೇ ಅಭಿವೃದ್ಧಿಗೆ ನಾಂದಿ ಹಾಡಿವೆ ಎಂದು ಕೇಂದ್ರ ಪಂಚಾಯತ್‌ರಾಜ್ ಹಾಗೂ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರೂಪಾಲ್ ಹೇಳಿದರು.
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಪ್ರಬುದ್ಧರ ಗೋಷ್ಠಿ ಉದ್ಘಾಟಿಸಿ ತದನಂತರ ರೈತರ-ಉದ್ಯಮಿಗಳ ಹಾಗೂ ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆಯುಷ್ಮಾನ ಭಾರತ ಆರೋಗ್ಯ ಯೋಜನೆಯಡಿ ನೂರಕ್ಕೆ ನೂರಷ್ಟು ಕೇಂದ್ರ ಸರ್ಕಾರವೇ ವೆಚ್ಚ ಭರಿಸುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರ ಇದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕಾಗಿದೆ.
ಅದೇ ರೀತಿ ಈ ಹಿಂದೆ ಸಂಸದರಾದವರು 25 ಗ್ಯಾಸ್ ಸಂಪರ್ಕ ಕೊಡಿಸಲು ಅಧಿಕಾರವಿತ್ತು. ಆದರೆ ಈಗ 6 ಕೋಟಿ ಅನಿಲ ಸಂಪರ್ಕ ದೊರಕಿರುವುದು, ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಅದರಲ್ಲೂ ರಸ್ತೆ, ನೀರು ಹಾಗೂ ಸ್ವತ್ಛತೆ ಸಲುವಾಗಿ ಗ್ರಾಪಂಗಳಿಗೆ ನೇರವಾಗಿ 2 ಲಕ್ಷ ಕೋಟಿ ರೂ. ಅನುದಾನ ನೀಡಿರುವುದು ಹಾಗೂ ಜಿಎಸ್‌ಟಿ ಜಾರಿಗೆ ಕಟಿಬದ್ಧವಾಗಿರುವುದು ದೇಶದ ಇತಿಹಾಸವೇ ಬದಲದತ್ತ ಸಾಗಿದೆ ಎಂದು ವಿವರಿಸಿದರು.
ಮಾಜಿ ಪ್ರಧಾನಿ ರಾಜೀವಗಾಂಧಿ ಅವರು ಒಂದು ರೂ. ಕೇಂದ್ರದಿಂದ ಬಿಡುಗಡೆಯಾದರೆ ಕೊನೆಗೆ 15 ಪೈಸೆ ಹೋಗಿ ತಲುಪುತ್ತಿದೆ ಎಂದು ಹೇಳಿದ್ದರು. ದೇಶವನ್ನು ಆಳಿದವರೇ ಹೀಗೆ ಹೇಳಿದ್ದನ್ನು ನೋಡಿದರೆ ಪರಿಸ್ಥಿತಿ ಅವಲೋಕಿಸಬಹುದಾಗಿದೆ. ಆದರೆ ಪ್ರಧಾನಿ ಮೋದಿ ಅವರು ಇದೆಲ್ಲದಕ್ಕೆ ಒಂದು ಹಂತ ತಲುಪಿಸಿದ್ದಾರೆ ಎಂದು ಹೇಳಿದರು.
ಪ್ರಶ್ನೆಗೆ ನೇರ ಉತ್ತರ ನೀಡಿದ ಸಚಿವರು, ಕೃಷಿ ಪರಿಕಗಳು ಹಾಗೂ ಕೀಟನಾಶಕಗಳ ಮೇಲೆ ಜಿಎಸ್‌ಟಿ ಕಡಿಮೆಗೊಳಿಸುವ ಇಲ್ಲವೇ ತೆಗೆದು ಹಾಕುವುದನ್ನು ಕೇಂದ್ರದ ಗಮನಕ್ಕೆ ತರಲಾಗುವುದು. ಆಯುಷ್ಮಾನ ಭಾರತ ಪರಿಣಾಮಕಾರಿ ಜಾರಿಗೆ ಮತ್ತಷ್ಟು ಒತ್ತು ನೀಡಲಾಗುವುದು. ಭಾವಾಂತರ ಯೋಜನೆ ಜಾರಿ ಕುರಿತಾಗಿ ಪ್ರಧಾನಿ ಗಮನಕ್ಕೆ ತರಲಾಗುವುದು ಎಂದು ಸಚಿವ ರೂಪಾಲ್ ಹೇಳಿದರು.
ಬೀದರಗೆ 150 ಕೋಟಿ ರೂ. ಬೆಳೆವಿಮೆ ಮಂಜೂರು: ಸಂಸದ ಭಗವಂತ ಖೂಬಾ ಮಾತನಾಡಿ, ಬೆಳೆವಿಮೆ ಯೋಜನೆ ಚೆನ್ನಾಗಿದೆ. ಮೋದಿ ಸರ್ಕಾರ ಬಂದ ಬಳಿಕ ರೈತರ ಪ್ರಿಮಿಯಂ ಶೇ. 14 ಪ್ರತಿಶತ ಇದ್ದಿರುವುದನ್ನು ಮುಂಗಾರಿ ಬೆಳೆಗೆ ಶೇ. 2 ಹಾಗೂ ಹಿಂಗಾರಿ ಬೆಳೆಗೆ 1.5ರಷ್ಟು ಮಾತ್ರ
ಪ್ರಿಮಿಯಂ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷದ ಹಿಂದೆ ಬೀದರ ಜಿಲ್ಲೆಗೆ 120 ಕೋಟಿ ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಇದಕ್ಕೆ ಬೆಳೆಹಾನಿ ವರದಿ ಪರಿಣಾಮಕಾರಿ ಮಾಡಿರುವುದೇ ಕಾರಣವಾಗಿದೆ. ಈಗ 2018-19ನೇ ಸಾಲಿನ ಮುಂಗಾರು ಹಂಗಾಮು ತೊಗರಿ ಹಾನಿಗೆ ಬೀದರ ಜಿಲ್ಲೆಗೆ 150 ಕೋಟಿ ರೂ. ಬೆಳೆವಿಮೆ ಮಂಜೂರಾಗಲಿದೆ. ಕೆಲವೇ ದಿನಗಳಲ್ಲಿ ಮಂಜೂರಾತಿ ಆದೇಶ ಹೊರ ಬೀಳಲಿದೆ ಎಂದು ಹೇಳಿದರು.
ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಮುಖಂಡರಾದ ಎಸ್.ಎಸ್. ಪಾಟೀಲ ಕಡಗಂಚಿ, ರಾಜೇಂದ್ರ ಕರೆಕಲ್, ಚನ್ನಾರೆಡ್ಡಿ ಗೋಸಬಾಳ, ಚಂದ್ರಶೇಖರ ತಳ್ಳಳ್ಳಿ, ಶ್ರೀಮಂತ ಉದನೂರ, ಸಚಿನ್ ಶಹಾ ಮುಂತಾದವರು ಪ್ರಶ್ನೆ ಕೇಳಿದರು. ಶಾಸಕ ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಶಾಸಕ ಶಶೀಲ ನಮೋಶಿ ಇದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ಚಂದು ಪಾಟೀಲ ಸ್ವಾಗತಿಸಿ, ಸಚಿವರ ಪರಿಚಯ ಮಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಸ್ವಾಗತಿಸಿದರು. ಸಿದ್ಧಾಜಿ ಪಾಟೀಲ ನಿರೂಪಿಸಿದರು.
ನಿಯಮ ಪಾಲಿಸದೆ ರೈಲ್ವೆ ವಿಭಾಗ ಘೋಷಣೆ ಪ್ರಬುದ್ಧ ಗೋಷ್ಠಿಯಲ್ಲಿ ಮಾತನಾಡಿದ ಬೀದರ ಸಂಸದ ಭಗವಂತ ಖೂಬಾ, 2014ರ ಮಾರ್ಚ್‌ನಲ್ಲಿ ಆಗ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ 5 ಪೈಸೆ ಇಡದೇ ಬಹು ಮುಖ್ಯವಾಗಿ ಯಾವುದೇ ನಿಯಮಾವಳಿ ಪಾಲನೆ ಮಾಡದೇ ಘೋಷಣೆ ಮಾಡಿದ್ದಾರೆ. ಅಂದರೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ದೃಷ್ಟಿಯಿಂದ ರೈಲ್ವೆ ವಿಭಾಗೀಯ ಕಚೇರಿ ಬಗ್ಗೆ ಸುಳ್ಳು ಹೇಳಿದ್ದಾರೆ.
ವಾಸ್ತವವಾಗಿ ರೈಲ್ವೆ ವಿಭಾಗೀಯ ಕಚೇರಿ ಕ್ರಮಬದ್ಧವಾಗಿ ಇಲಾಖೆ ನಿಯಮದಡಿ ಘೋಷಣೆ ಮಾಡಿಲ್ಲ, ಹೀಗಾಗಿ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಇಲ್ಲ. ಅದೇ ರೀತಿ ಇಎಸ್‌ಐಸಿ ಆಸ್ಪತ್ರೆ ಪೂರ್ಣಗೊಳ್ಳದಿದ್ದರೂ ತಮ್ಮ ಪಕ್ಷದ ನಾಯಕಿಯನ್ನು ಕರೆಯಿಸಿ ಗಡಿಬಿಡಿಯಲ್ಲಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ತುಮಕೂರು ಹಾಗೂ ಕಲಬುರಗಿಯಲ್ಲಿ ವಿಶೇಷ ಆರ್ಥಿಕ ವಲಯ (ನಿಮ್l) ಸ್ಥಾಪನೆಗೆ ಹಿಂದಿನ ಯುಪಿಎ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಆದರೆ ತುಮಕೂರಿನಲ್ಲಿ ವಲಯ ಸ್ಥಾಪನೆಯಾಯಿತು. ಆದರೆ ಕಲಬುರಗಿಯಲ್ಲಿ ಆಗಲಿಲ್ಲ. ಏಕೆಂದರೆ ಇಲ್ಲಿ ಅಗತ್ಯ ಭೂಮಿ ಕೊಡಲಿಲ್ಲ. ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಯಾರು ಎಂದು ಬೊಟ್ಟು ಮಾಡುವ ಅವಶ್ಯಕತೆ ಇಲ್ಲ. ಏನಿಸುತ್ತದೆ. ಅದೇ ರೀತಿ ಕಲಬುರಗಿ ವಿಮಾನ ನಿಲ್ದಾಣಕ್ಕೆ 2008ರಲ್ಲಿಯೇ ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಅಡಿಗಲ್ಲು ಹಾಕಿದರು.
ಮರುವರ್ಷ ಖರ್ಗೆ ಅವರು ಕೇಂದ್ರದಲ್ಲಿ ಸಚಿವರಾದವರು. ತದನಂತರ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ ವಿಮಾನ ನಿಲ್ದಾಣ ಕಾಮಗಾರಿ ವೇಗ ಹೆಚ್ಚಾಗಲಿಲ್ಲ. ಈಗಷ್ಟೇ ವಿಮಾನ ಹಾರಾಟ ಅನುಮತಿಗಾಗಿ ರಾಜ್ಯ ಸರ್ಕಾರ ಪತ್ರ ಬರೆದಿದೆ. ಎರಡು ವರ್ಷಗಳ ಹಿಂದೆಯೇ ಪತ್ರ ಬರೆಯಬೇಕಿತ್ತು. ಒಟ್ಟಾರೆ ಲೋಕಸಭಾ ಚುನಾವಣೆ ನಂತರ ವಿಮಾನ ಹಾರಾಟ ಶುರುವಾಗುತ್ತೇ ಎಂದು ಖೂಬಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.