![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 24, 2022, 5:45 PM IST
ಮಾದನಹಿಪ್ಪರಗಿ: ವಲಯದ ವಿವಿಧ ಹಳ್ಳಿಗಳ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಗ್ರಾಮಸ್ಥರು ಬುಧವಾರ ರಸ್ತೆ ತಡೆ ನಡೆಸಿದರು. ಮಾದನಹಿಪ್ಪರಗಿಯಿಂದ ನಿಂಬಾಳ, ಆಳಂದ, ಮೈಂದರಗಿ, ದುಧನಿ, ಝಳಕಿ, ಖೇಡುಮರಗಾ, ನಿಂಗದಳ್ಳಿ, ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
ದರ್ಗಾಶಿರೂರದಿಂದ ಕೇರೂರ ನಿಂಗದಳ್ಳಿ, ರಸ್ತೆಗಳು ಕೆಟ್ಟಿರುವ ಕಾರಣ ವಾಹನಗಳು ಓಡಾಡುತ್ತಿಲ್ಲ. ರೈತರು ಬಳಸುವ ಪಂಪ್‌ಸೆಟ್‌ಗಳಿಗೆ 6 ಗಂಟೆ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮಾದನಹಿಪ್ಪರಗಿ, ನಿಂಬಾಳ, ಹಡಲಗಿ, ಯಳಸಂಗಿ, ಮಾಡ್ಯಾಳ ಮುಖಾಂತರ ಆಳಂದ ಕಡೆ ಹೋಗುವ ಮಿನಿ ಬಸ್ಸುಗಳನ್ನು ಪುನಃ ಆರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಮಾತನಾಡಿ, ರೈತರ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿ, ಬೀದರ, ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ಮಾತನಾಡಿ, ನಿಂಬಾಳ ಮತ್ತು ಚಲಗೇರಾ ಗ್ರಾಮಗಳಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾದನಹಿಪ್ಪರಗಿಗೆ ವಿದ್ಯಾಭ್ಯಾಸಕ್ಕಾಗಿ 8ಕಿಮೀ ದೂರವನ್ನು ಕಾಲ್ನಡಿಗೆಯಲ್ಲಿ ಹೋಗಿ ಬರುವಂತಾಗಿದೆ. ಈ ಕುರಿತು ಡಿಪೋ ಮ್ಯಾನೇಜರ್‌ಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. 15 ದಿನಗಳೊಳಗೆ ಬೇಡಿಕೆ ಈಡೇರಿಸದೇ ಇದ್ದರೆ ಕಲಬರಗಿ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು. ಲೋಕೋಪಯೋಗಿ ಎಇಇ ಶಶಿಧರ ಪಾಟೀಲ, ಮನವಿ ಪತ್ರ ಸ್ವೀಕರಿಸಿದರು.
ಉಪ ತಹಶೀಲ್ದಾರ್ ರವೀಂಧ್ರ ಶೇರಿಕಾರ, ಪಿಎಸ್‌ಐ ದಿನೇಶ, ಜೆಇ ಶರಣಯ್ಯ ಹಿರೇಮಠ, ಜೆಸ್ಕಾಂ ಜೆಇ ಪರಮೇಶ್ವರ ಬಡಿಗೇರಾ ಇದ್ದರು. ಸುಮಾರು ಮೂರು ಗಂಟೆಗಳ ಕಾಲ ಸೊಲ್ಲಾಪುರ, ಆಳಂದ, ಅಪಜಲಪುರ, ಕಲಬರಗಿ ಕಡೆ ಹೋಗುವ ಎಲ್ಲ ಮಾರ್ಗಗಳು ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಪ್ರತಿಭಟನೆಯಲ್ಲಿ ಚಂದ್ರಕಾಂತ ನಿಂಗದಳ್ಳಿ, ಮಲ್ಲಿನಾಥ ಪಾಟೀಲ, ಲಕ್ಷ್ಮಣ ತಳಕೇರಿ, ಹಿರಗಪ್ಪ ದೊಡಮನಿ, ಬಿ.ಜಿ.ಪಾಟೀಲ, ರಾಹುಲ ಪಾಟೀಲ, ಸಿದ್ಧರಾಮ ಅರಳಿಮಾರ, ನಿಲೇಶ ತೋಳನೂರ, ಶಿವಲಿಂಗಪ್ಪ ಇಂಗಳೆ, ಪ್ರಕಾಶ ಮಾನೆ ಮಾತನಾಡಿದರು. ಮಾದನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಡಿತ ಕದರಗಿ, ಮುಖಂಡರಾದ ಮಲ್ಲಯ್ಯ ಸ್ವಾಮಿ, ಬೀರಣ್ಣ ಕಡಗಂಚಿ, ಮಹಿಬೂಬ್ ಫಣಿಬಂದ್, ಸಿದ್ಧು ವೇದಶೆಟ್ಟಿ, ಸತೀಶ ಬನಸೆಟ್ಟಿ, ಸಂತೋಷ ಪಾಟೀಲ, ಶರಣಬಸಪ್ಪ ವಾN, ಮಹಾಂತೇಶ ಪಾಟೀಲ, ಮಲ್ಲಿನಾಥ ಯಳಮೇಲಿ, ಜಳಕಿ, ಮದಗುಣಕಿ, ಚಲಗೇರಾ, ನಿಂಬಾಳ ಹಡಲಗಿ, ಖೇಡಉಮರಗಾ, ದರ್ಗಾಶಿರೂರ, ನಿಂಗದಳ್ಳಿ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.