Kalaburagi: ಗೂಡ್ಸ್ ವಾಹನ – ಕಾರು ನಡುವೆ ಭೀಕರ ಅಪಘಾತ… ನಾಲ್ವರು ಸ್ಥಳದಲ್ಲೇ ಮೃತ್ಯು
Team Udayavani, Nov 9, 2024, 8:44 AM IST
ಕಲಬುರಗಿ: ಮಹಿಂದ್ರಾ ಪಿಕಪ್ ಗೂಡ್ಸ್ ವಾಹನ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ (ನ.9) ಬೆಳಗಿನ ಜಾವ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ನಡೆದಿದೆ.
ದುರ್ಘನೆಯಲ್ಲಿ ಹೈದರಾಬಾದ್ ಮೂಲದ ಭಾರ್ಗವ್ ಕೃಷ್ಣ (55) ಅವರ ಪತ್ನಿ ಸಂಗೀತ (45) ಪುತ್ರ ಉತ್ತಮ್ ರಾಘವನ್ (28) ಮೃತಪಟ್ಟವರು ಎಂದು ತಿಳಿದು ಬಂದಿದೆ. ಆದರೆ, ಕಾರು ಚಾಲಕನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಅಫಜಲಪುರ ತಾಲೂಕಿನ ಗಾಣಗಾಪುರ್ ದತ್ತನ ದರ್ಶನಕ್ಕೆ ತೆರಳುತ್ತಿದ್ದರು. ಬೆಳಕಿನ ಕೊರತೆಯೋ ಅಥವಾ ನಿದ್ದೆಯ ಮಂಪರಿನಲ್ಲಿ ಗೂಡ್ಸ್ ವಾಹನಕ್ಕೆ ಕಾರು ಢಿಕ್ಕಿ ಹೊಡೆದಿರಬಹುದು ಎಂದು ಕಮಲಾಪುರ ಠಾಣೆಯ ಪೊಲೀಸರು ಅನುಮಾನಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶಿವಶಂಕರ್ ಸಾಹು, ಪಿಎಸ್‌ಐ ಆಶಾ ರಾಥೋಡ್, ಸಿಬ್ಬಂದಿ ಕಿಶನ್, ಕುಪೇಂದ್ರ ಮತ್ತಿತರರು ಸೇರಿ ಮೃತರನ್ನು ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appeal: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿ: ಎಚ್.ಡಿ.ದೇವೇಗೌಡ
BJP Rift: ನಾವು ಕೂಡ ದಿಲ್ಲಿಗೆ ಹೋಗಲು ಸಿದ್ಧ, ನಮಗೇನು ದಾರಿ ಗೊತ್ತಿಲ್ವಾ?: ರೇಣುಕಾಚಾರ್ಯ
Bellary: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು
Koppala: ಕುಂಭಮೇಳಕ್ಕೆ ತೆರಳಿದ್ದ ಕಾರಟಗಿಯ ಯುವಕ ಸಾವು
Congress: ಡಿಕೆಶಿ ಮುಂದಿನ ಸಿಎಂ ಎಂದು ಘೋಷಣೆ ಕೂಗುವುದರಲ್ಲಿ ತಪ್ಪಿಲ್ಲ: ಸತೀಶ ಜಾರಕಿಹೊಳಿ