ಜೇವರ್ಗಿ ತಾಲೂಕಿನಲ್ಲಿ 1500 ಕೋಟಿ ರೂ. ಅಭಿವೃದ್ಧಿ ಕಾಮಗಾರಿ
Team Udayavani, Feb 12, 2018, 10:11 AM IST
ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಪ್ರಮುಖವಾಗಿ ನಾಲ್ಕು ಸೇತುವೆಗಳ ನಿರ್ಮಾಣದ ಜತೆಗೆ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಜೇವರ್ಗಿ ಶಾಸಕ ಡಾ| ಅಜಯಸಿಂಗ್ ತಿಳಿಸಿದರು. ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಕೋನಹಿಪ್ಪರಗಾ-ಸರಡಗಿ ಸೇತುವೆ ಪೂರ್ಣಗೊಂಡಿರುವುದು ಹಾಗೂ ನರಿಬೋಳ ಚಾಮನಾಳ ಸೇತುವೆಗೆ ಚಾಲನೆ ನೀಡಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ತಿಳಿಸಿದರು.
ಜೇವರ್ಗಿಯಲ್ಲಿ ಈಗಾಗಲೇ ಅತ್ಯಂತ ಎತ್ತರದ ರಾಷ್ಟ್ರಧ್ವಜ ಸ್ಥಂಭ ನಿರ್ಮಿಸಲಾಗಿದೆ. ಯಡ್ರಾಮಿ ಹೊಸ ತಾಲೂಕು ರಚನೆ ಪ್ರಗತಿಯಲ್ಲಿದೆ. 10 ಕೋಟಿ ರೂ. ಒದಗಿಸಲಾಗಿದೆ. ಜೇವರ್ಗಿ ಪಟ್ಟಣದಲ್ಲಿ 2.94 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣ ಕೈಗೊಳ್ಳಲಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ತಿಂಗಳಲ್ಲಿ ಕಾಮಗಾರಿ ರ್ಣಗೊಳ್ಳಲಿದೆ ಎಂದು ತಿಳಿಸಿದರು. ಜೇವರ್ಗಿ ಪಟ್ಟಣಕ್ಕೆ ಸೋಮವಾರ ಮಧ್ಯಾಹ್ನ 3:20ಕ್ಕೆ ರಾಹುಲ್‌ಗಾಂಧಿ ಅವರು ಆಗಮಿಸುವರು. ಒಂದು ತಾಸು ಅಲ್ಲಿಯೇ ಕಳೆದು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಸುಮಾರು 40, 000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಜೇವರ್ಗಿ ಪಟ್ಟಣದ ರಸ್ತೆ ವಿಭಜಕದಲ್ಲಿ ಸಿದ್ಧಪಡಿಸಿದ ಮರಗಳನ್ನು ಧರ್ಮಸಿಂಗ್ ಫೌಂಡೇಷನ್‌ನಡಿ ಹಚ್ಚಲಾಗಿದೆ.
ಇದು ಸರ್ಕಾರದಿಂದ ಹಾಗೂ ನನ್ನ ಶಾಸಕರ ಅನುದಾನದಿಂದ ಆಗಲಿ ಅಲ್ಲ ಎಂದು ಸ್ಪಷ್ಠಪಡಿಸಿದರು. ಜೇವರ್ಗಿ ಪಟ್ಟಣವು ಮರಗಳಿಂದಾಗಿ ಸಿಂಗಾರಗೊಂಡಿದೆ. ಇಂತಹ ಗಿಡಗಳನ್ನು ನಾನು ಬೆಂಗಳೂರಿನ ವಿಧಾನಸೌಧದ ಮುಂದೆ ನೋಡಿದ್ದೆ. ಅದೇ ರೀತಿಯ ಗಿಡಗಳನ್ನು ಇಲ್ಲಿ ವೈಯಕ್ತಿಕವಾಗಿ ಬೆಳೆಸಿದ್ದೇನೆ. ಅವುಗಳ ನಿರ್ವಹಣೆಯನ್ನೂ ಫೌಂಡೇಶನ್ ಮಾಡಲಿದೆ. ವಿಧಾನಸೌಧದ ಮುಂದಿನ ಗಿಡಗಳಿಗೆ ಇರುವ ಲೈಟಿಂಗ್ ವ್ಯವಸ್ಥೆಯನ್ನೂ ರಸ್ತೆ ವಿಭಜಕದ ಗಿಡಗಳಿಗೂ ಮಾಡಲಾಗುವುದು. ಈ ಕುರಿತಾದ 1.8 ಕೋಟಿ ರೂ. ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಯಡ್ರಾಮಿಯಲ್ಲಿಯೂ ಇಂತಹ ಗಿಡಗಳನ್ನು ಬೆಳೆಸಲಾಗಿದೆ. ಆರಂಭದಲ್ಲಿ ಅವು ಒಣಗಿದಂತೆ ಕಂಡು ಬಂದರು ನಂತರ ಅವು ಚಿಗುರೊಡೆಯುತ್ತವೆ ಎಂದು ಅವರು ತಿಳಿಸಿದರು. ಮಾಜಿ ಪ್ರಧಾನಿ ದಿ| ಇಂದಿರಾಗಾಂಧಿ ಅವರು ಕಳೆದ 40 ವರ್ಷಗಳ ಹಿಂದೆ ಭೇಟಿ ನೀಡಿದ ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಸೋಮವಾರ ಆಗಮಿಸುತ್ತಿರುವುದು ಕ್ಷೇತ್ರದ ಸೌಭಾಗ್ಯವಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋ ಧಿ, ಮುಖಂಡರಾದ ಭೀಮರಾವ ಟಿ.ಟಿ. ದೇವೆಂದ್ರಪ್ಪ ಮರತೂರ, ಶೌಕತ್ ಅಲಿ ಆಲೂರ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.