ನಾಡಿಗೆ ಬೆಳಕು ನೀಡಿದ ಸಂತ
Team Udayavani, Feb 16, 2018, 10:23 AM IST
ಕಲಬುರಗಿ: ಸಂತ ಸೇವಾಲಾಲ ಮಹಾರಾಜರು ಅನೇಕ ಪವಾಡಗಳನ್ನು ಮಾಡಿ ತಾಯಿ ಭವಾನಿಯನ್ನು ಗೆದ್ದು, ಇಡೀ ನಾಡಿಗೆ ಬೆಳಕನ್ನು ನೀಡಿದ ಸಂತ ಶ್ರೇಷ್ಠರಾಗಿದ್ದಾರೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ತಿಳಿಸಿದರು.
ಅವರು ಗುರುವಾರ ಕಲಬುರಗಿ ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂತ ಸೇವಾಲಾಲರವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಲಂಬಾಣಿ ಸಮುದಾಯದ ಜನರು ಶ್ರಮ ಜೀವಿಗಳು, ಕಷ್ಟಪಟ್ಟು ದುಡಿಯುತ್ತಾರೆ. ಸಮುದಾಯದ ಚಟುವಟಿಕೆಗಾಗಿ ಅನೇಕ ತಾಂಡಾಗಳಲ್ಲಿ ಬಂಜಾರಾ ಸಮುದಾಯ ಭವನ ಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕುಗಳಲ್ಲಿಯು ಸೇವಾಲಾಲ ಭವನವನ್ನು ನಿರ್ಮಾಣ ಮಾಡುವ ಮೂಲಕ ತಾಂಡಾಗಳ ಅಭಿವೃದ್ಧಿಗೆ ಸರ್ಕಾರವು ಸಾಕಷ್ಟು ಅನುದಾನ ನೀಡಬೇಕು ಎಂದು ಹೇಳಿದರು.
ಸಾಹಿತಿ ಬಾಬು ಎಂ. ಜಾಧವ ವಿಶೇಷ ಉಪನ್ಯಾಸ ನೀಡಿ, 279 ವರ್ಷಗಳ ಹಿಂದೆ ಬಾಲ ಬ್ರಹ್ಮಚಾರಿಯಾಗಿದ್ದ ಸಂತ ಸೇವಾಲಾಲ ಮಹಾರಾಜರು ಮಣ್ಣಿನಿಂದ ಮುಷ್ಠಾನವನ್ನು ಮಾಡಿ ಗಂಡನ್ನು ಹೆಣ್ಣಾಗಿಸಿ ಬಂಜೆಗೆ ತಾಯಿ ಭಾಗ್ಯವನ್ನು ನೀಡಿದ ಮಹಾನ್ ಸಂತರಾಗಿದ್ದಾರೆ. ಬಂಜಾರ ಜನಾಂಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾತ್ಮರು ಒಬ್ಬ ವ್ಯಕ್ತಿಯಲ್ಲಾ ಸಮುದಾಯದ ಶಕ್ತಿಯಾಗಿರುವ ಮಹಾನ್ ಗುರುಗಳಾಗಿದ್ದಾರೆ ಎಂದರು.
ಗೊಬ್ಬೂರವಾಡಿ ಬಿಳಿರಾಮ ಮಹಾರಾಜರ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಸಂತ ಸೇವಾಲಾಲ ಸಮಾಜ ಜಿಲ್ಲಾಧ್ಯಕ್ಷ ರೇವು ನಾಯಕ್ ಬೆಳಮಗಿ, ಮಹಾನಗರ ಪಾಲಿಕೆ ಸದಸ್ಯ ವಿಠ್ಠಲ ಜಾಧವ, ಲಲಿತಾ ರವಿ ರಾಠೊಡ, ರಾಘವೇಂದ್ರ ಕುಲಕರ್ಣಿ, ಅರವಿಂದ ಚವ್ಹಾಣ, ವಿಜಯಕುಮಾರ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಇದಕ್ಕೂ ಮುನ್ನ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಂತ ಸೇವಾಲಾಲ ಅವರ ಭಾವಚಿತ್ರದ ಮೆರವಣಿಗೆ ನಗರದ ಸರದಾರ ವಲ್ಲಭಬಾಯಿ ಪಟೇಲ ವೃತ್ತದಿಂದ ಡಾ| ಎಸ್. ಎಂ.ಪಂಡಿತ ರಂಗಮಂದಿರದವರೆಗೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.