ಮರಳು ಅಕ್ರಮ ಸಾಗಾಟ: ಲಾರಿ ವಶಕ್ಕೆ
Team Udayavani, Feb 12, 2018, 11:04 AM IST
ಚಿಂಚೋಳಿ: ಮುಲ್ಲಾಮಾರಿ-ಕಾಗಿಣಾ ನದಿಯಿಂದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಹಲಕೋಡ ಗ್ರಾಮಸ್ಥರು ತಡೆದು ಸುಲೇಪೇಟ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಗ್ರಾಮದ ಮುಖಂಡ ಅಮೃತರಾವ ಗುತ್ತೇದಾರ ತಿಳಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳ ಆದೇಶ ಮೇರೆಗೆ ಲಾರಿ ಜಪ್ತಿ ಮಾಡಲಾಗಿದೆ ಎಂದು ಸುಲೇಪೇಟ ಠಾಣೆ ಪಿಎಸ್‌ಐ ಎ.ಎಸ್. ಪಟೇಲ್ ತಿಳಿಸಿದ್ದಾರೆ.
ಹಲಕೋಡ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ-ಕಾಗಿಣಾ ನದಿಯಲ್ಲಿ ದೊರೆಯುವ ಉಸುಕು ಮಾರಾಟಕ್ಕಾಗಿ ಸೇಡಂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರ ಮನೋಜ ಜಾಧವ ಎಂಬುವವರ ಹೆಸರಿಗೆ ಟೆಂಡರ್ ನೀಡಲಾಗಿದೆ. ಆದರೆ ಸರಕಾರದ ಆದೇಶ ಉಲ್ಲಂಘಿಸಿ ಒಂದೇ ರಾಯಲ್ಟಿ ಮೇಲೆ ದಿನವಿಡೀ ಲಾರಿಗಳಲ್ಲಿ ಅಧಿಕ ಮರಳು ತುಂಬಿ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಉಸುಕು ಮಾರಾಟ ಮಾಡುವ ಲಾರಿಗಳ ಓಡಾಟದಿಂದಾಗಿ ನಮ್ಮ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ದೂರಿದ್ದಾರೆ. ಹಲಕೋಡ, ಪೋತಂಗಲ, ಜಟ್ಟೂರ ಗ್ರಾಮದಲ್ಲಿ ಅಪಾರವಾಗಿ ಕೆಂಪು ಉಸುಕು ದೊರೆಯುತ್ತಿದೆ.
ಇದರಿಂದ ಕೆಲವು ಪ್ರಭಾವಿ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದರಿಂದ ಮರಳು ವ್ಯಾಪಾರ ರಾಜಾರೋಷವಾಗಿ ನಡೆಯುತ್ತಿದೆ. ಜೆಸಿಬಿಯಿಂದ ಮರಳು ತೆಗೆದು ಲಾರಿಗಳ ಮೂಲಕ ಹುಮನಾಬಾದ, ಸೇಡಂ, ಚಿಟಗುಪ್ಪ, ಬಸವಕಲ್ಯಾಣ, ಮನ್ನಾಎಕ್ಕೆಳ್ಳಿ, ಚಿಂಚೋಳಿ, ಸುಲೇಪೇಟ, ನಿಡಗುಂದಾ, ರಟಕಲ್, ಕೋಡ್ಲಿ ಗ್ರಾಮಗಳಿಗೆ ಸಾಗಿಸಲಾಗುತ್ತಿದೆ ಎಂದು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.