ಸಂಘ-ಸಂಸ್ಥೆ ಮಾಹಿತಿ ಹಕ್ಕು ಅರ್ಜಿಗಿಲ್ಲಾ ಮಾನ್ಯತೆ
Team Udayavani, Jul 17, 2018, 4:03 PM IST
ಕಲಬುರಗಿ: ಸಂಘ-ಸಂಸ್ಥೆ ಹೆಸರಿನಡಿ ಮಾಹಿತಿ ಕೋರಿ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದರೆ ಮಾಹಿತಿ ನೀಡುವಂತಿಲ್ಲ. ಜತೆಗೆ ಅರ್ಜಿಯನ್ನು ಅಧಿಕಾರಿಗಳು ಸಾರಾಸಗಟವಾಗಿ ತಿರಸ್ಕೃರಿಸಬಹುದಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ| ಸುಚೇತನ ಸ್ವರೂಪ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಹಕ್ಕು ಮೇಲ್ಮನವಿ ಪ್ರಾಧಿಕಾರದಲ್ಲಿ ಬಾಕಿಯಿರುವ ಪ್ರಕರಣಗಳ ವಿಚಾರಣೆ ನಡೆಸಿದ ಅವರು, ಸಂಘ-ಸಂಸ್ಥೆಯಡಿ ಇಲ್ಲದೇ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿ ಹಕ್ಕುಕಾಯ್ದೆ ಅಡಿ ಅರ್ಜಿ ಸಲ್ಲಿಸುವರು ಪ್ರಮುಖವಾಗಿ ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು. ಬೇರೆ ಯಾವುದೇ ದೃಷ್ಟಿ ಹೊಂದಿರಬಾರದು. ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಬಾರದು. ಜತೆಗೆ ಅಧಿಕಾರಿಯ ವೈಯಕ್ತಿಕ ಮಾಹಿತಿ, ಜಾತಿ ಹಾಗೂ ಶೈಕ್ಷಣಿಕ ಅರ್ಹತೆ ಕೇಳುವುದನ್ನು ಹೊಂದಿರಬಾರದು ಎಂದರು.
ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವರು ದುರ್ಬಳಕೆ ಹಾಗೂ ಯಾವುದೇ ಬಲವಾದ ಉದ್ದೇಶವಿಟ್ಟುಕೊಂಡು ಕೇಳುತ್ತಿರುವುದರಿಂದ ಅಧಿಕಾರಿಗಳು ಮೊದಲಿನ ಹಾಗೆ ಮಾಹಿತಿ ಕೊಡಲು ಮುಂದಾಗದೇ ದಂಡ ತುಂಬುತ್ತಿದ್ದಾರೆ. ಹೀಗಾಗಬಾರದು. ಮಾಹಿತಿ ಹಕ್ಕು ಕಾಯ್ದೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಗಂಭೀರ ರೀತಿಯಲ್ಲಿ ಪರಿಗಣಿಸಿ ಮಾಹಿತಿ ನೀಡುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು. ಮಾಹಿತಿ ಹಕ್ಕಿನಡಿ ಒದಗಿಸುವ ಮಾಹಿತಿಯನ್ನು ಬೇರೆ ಸ್ಥಳಗಳಿಗೆ ರವಾನಿಸಬೇಕಾದಲ್ಲಿ ಕಡ್ಡಾಯವಾಗಿ ನೋಂದಾಯಿತ ಅಂಚೆ ಮೂಲಕ ರವಾನಿಸಿ ಇಟ್ಟುಕೊಳ್ಳಬೇಕು. ಮುಖ್ಯವಾಗಿ ಅರ್ಜಿಯನ್ನು 150 ಪದಗಳಲ್ಲಿ ಮಾತ್ರ ಸಲ್ಲಿಸಬೇಕು. ಕೇಂದ್ರ ಸರ್ಕಾರ ರೂಪಿಸಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿ ಮಾಡಲು ಬರುವುದಿಲ್ಲ. ಒಂದು ಅರ್ಜಿಯಲ್ಲಿ ಹಲವು ಮಾಹಿತಿಗಳನ್ನು ಕೇಳಬಾರದು ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ 40 ಸಾವಿರ ಪ್ರಕರಣಗಳು ಬಾಕಿ ಇದ್ದವು. ಮಾಹಿತಿ ಆಯುಕ್ತರೆಲ್ಲರೂ ಏಕಕಾಲದಲ್ಲಿ ವಿಚಾರಣೆ ನಡೆಸಿ ಶೇ. 90ರಷ್ಟು ಇತ್ಯರ್ಥಪಡಿಸಲಾಗಿದೆ. ಮಾಹಿತಿ ಹಕ್ಕು ದುರುಪಯೋಗಪಡಿಸಿಕೊಂಡವರು ಹಾಗೂ ಅನ್ಯಾಯವಾಗಿ ನಡೆದುಕೊಂಡವರು ಸಲ್ಲಿಸಿರುವ ಅರ್ಜಿಗಳನ್ನು ಸುಮಾರು 5 ನ್ಯಾಯಾಧೀಶರ ಪೂರ್ಣ ಪೀಠಕ್ಕೆ ಒಳಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಹೆಚ್ಚಿನ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಗಳು ಸಲ್ಲಿಕೆಯಾದರೆ ನಂತರ ಶೇ. 50ರಷ್ಟು ಮಾಹಿತಿಗಳು ಕಂದಾಯ ಇಲಾಖೆಗೆ ಬಂಧಿಸಿದ್ದಾಗಿರುತ್ತವೆ. ಬೆಂಗಳೂರು ಬಿಟ್ಟರೆ ಬೆಳಗಾವಿ, ರಾಯಚೂರು ಹಾಗೂ ಕಲಬುರಗಿಯಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದರು.
ಕಲಬುರಗಿಯಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ 102 ಅರ್ಜಿಗಳ ಅರ್ಜಿಗಳ ಪೈಕಿ 60ಅರ್ಜಿಗಳನ್ನುಇತ್ಯರ್ಥಪಡಿಸಲಾಯಿತು. ತಹಶೀಲ್ದಾರ್ ದಯಾನಂದ ಪಾಟೀಲ, ಆಯೋಗದ ತೀರ್ಪು ಬರಹಗಾರ ಅಪ್ಪಾಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ದೂರುದಾರರು ಹಾಜರಿದ್ದರು.
ಮಾಹಿತಿ ಹಕ್ಕು ಕಾಯ್ದೆ ಉತ್ತಮವಾಗಿದೆ. ಇದು ದುರ್ಬಳಕೆ ಆಗಬಾರದು ಎನ್ನುವುದು ಆಯೋಗದ ಆಶಯ. ಅಧಿಕಾರಿಗಳು ಅರ್ಜಿಗೆ ಸಕಾಲದಲ್ಲಿ ಸಮರ್ಪಕ ಮಾಹಿತಿ ನೀಡಬೇಕು. ಕೆಲವು ಅರ್ಜಿಗಳು ಕ್ರಮಬದ್ಧವಾಗಿರದ ಕಾರಣ ಸಮರ್ಪಕ ಉತ್ತರ ಸಿಗುತ್ತಿಲ್ಲ. ದುರ್ಬಳಕೆ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ಮಾಹಿತಿ ನೀಡದೇ ದಂಡ ತುಂಬುತ್ತಿದ್ದಾರೆ. ಹೀಗಾಗಬಾರದು. ಡಾ| ಸುಚೇತನ ಸ್ವರೂಪ, ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.