ಸಂಸ್ಕಾರವೇ ಧರ್ಮದ ಧ್ಯೇಯ: ಶ್ರೀಶೈಲ ಶ್ರೀ
Team Udayavani, Jul 18, 2017, 12:43 PM IST
ಕಲಬುರಗಿ: ಸಂಸ್ಕಾರವಿಲ್ಲದ ಜೀವನದ ಅಧೋಗತಿಗೆ ಹೋಗುವುದರಿಂದ ಬದುಕನ್ನು ಉನ್ನತಗೊಳಿಸಬೇಕಾದರೆ ಬದುಕಿಗೆ ಸಂಸ್ಕಾರ ಅಗತ್ಯವಾಗಿದ್ದು, ಬದುಕಿಗೆ ಸಂಸ್ಕಾರ ನೀಡುವುದೇ ಧರ್ಮದ ಗುರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಾಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಪ್ರತಿಯೊಬ್ಬರು ಮನಸ್ಸಿನಲ್ಲಿ ಅದ್ಭುತವಾದ ಶಕ್ತಿಯಿರುವುದರಿಂದ ಇದಕ್ಕೆ ಸರಿಯಾದ ತರಬೇತಿ ನೀಡಬೇಕು ಎಂದರು.
ನೀರು ಕೆಳಮುಖವಾಗಿ ಹರಿಯುವಂತೆ ಮನಸ್ಸು ಯಾವಾಗಲೂ ವಿಷಯಗಳತ್ತ ಮುಖಮಾಡಿ ಅಧೋಗತಿಯತ್ತ ಸಾಗುತ್ತಿರುತ್ತದೆ. ನೀರಿಗೆ ಉಷ್ಣತೆಕೊಟ್ಟು ಆವಿಯಾಗಿ ಮೇಲ್ಮುಖವಾಗಿ ಹೋಗುವಂತೆ ಮಾಡಲು ಸಾಧ್ಯವಾಗುವಂತೆ ಮನಸ್ಸಿಗೆ ಧರ್ಮದ ಸಂಸ್ಕಾರ ನೀಡುವ ಮೂಲಕ ಭಗವಂತನೆಡೆಗೆ ಸಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಚಿಮ್ಮಾಇದ್ಲಾಯಿ ಶ್ರೀಗಳು, ರಾಯಚೂರ ಶ್ರೀಗಳು, ಪಂಪಾವತಿ ದೇವಸು ಸುಲೆಪೇಟ್, ವೀರಣ್ಣ ಮಂಗಾಣಿ, ಬಸವರಾಜ ಪಾಟೀಲ್ ಗೋಳಾ, ಸೋಮಶೇಖರ ಮಠಪತಿ, ಸಿದ್ದಣಗೌಡ ಪಾಟೀಲ್
ಕಡಣಿ, ಕರಿಸಿದ್ದಪ್ಪ ಪಾಟೀಲ್ ಹರಸೂರ, ಸಿದ್ರಾಮಪ್ಪ ಆಲಗೂಡಕರ್, ವೀರಣ್ಣ ಧುತ್ತರಗಾಂವ, ಬಸವರಾಜ ಶೀಲವಂತ ಅಂಬಲಗಿ, ಶಿವಾನಂದ ಮಠಪತಿ, ಸಂಗಮನಾಥ ಬಿರಾದಾರ ಇದ್ದರು.
ಇದಕ್ಕೂ ಗಂಜ ಹನುಮಾನ ಮಂದಿರದಿಂದ ಸಾರೋಟಿಯಲ್ಲಿ ಶ್ರೀಶೈಲ ಜಗದ್ಗುರುಗಳ ಭವ್ಯವಾದ ಮೆರವಣಿಗೆಯಲ್ಲಿ ಸುಮಂಗಲಿಯರು ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ಆನೆಯ ಮೇಲೆ ಅಂಬಾರಿ ಆರತಿ, ಪುರವಂತರು ಒಂಟೆ, ಕುದುರೆ
ಮೂಲಕ ಶ್ರೀಶಾಂತಲಿಂಗೇಶ್ವರ ಕಲ್ಯಾಣ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು. ಶರಣಯ್ಯ ಬೀದಿಮನಿ ಅವರಿಂದ ಸಂಗೀತ ಜರುಗಿತು. ಶಿವಶರಣಪ್ಪ ಸರಸಂಬಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.