ಮಂಗಳಮುಖೀಯರಿಗೆ ಸೀರೆ ವಿತರಣ
Team Udayavani, Oct 22, 2017, 10:23 AM IST
ಕಲಬುರಗಿ: ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ. ಅವುಗಳನ್ನು ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಮಹತ್ವಾಕಾಂಕ್ಷೆ ಆಗಬೇಕು ಎಂದು ಗುಲಬರ್ಗಾ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಾಸುದೇವ ಸೇಡಂ ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿರುವ ಸ್ನೇಹ ಸೊಸೈಟಿ ಆವರಣದಲ್ಲಿ ಮಹಿಳಾ ಸಮಾಜ ಕಾರ್ಯಕರ್ತೆ ಸರ್ವಮಂಗಳಾ ಹಿರೇಮಠ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಂಗಳಮುಖೀಯರಿಗೆ ಸೀರೆ, ಕುಪ್ಪಸ ವಿತರಿಸಿ ಮಾತನಾಡಿ, ಮಂಗಳಾಮುಖೀಯರು ಸ್ವಾಭಿಮಾನದ ಬದುಕು ನಡೆಸಲು ಸಹಕಾರಿಯಾಗಲು ಹೊಲಿಗೆ ಯಂತ್ರವನ್ನು ದೇಣಿಗೆಯಾಗಿ ನೀಡಿದರು.
ಸಂಘಟಕಿ ಸರ್ವಮಂಗಳಾ ಹಿರೇಮಠ ಮಾತನಾಡಿ, ಮಹಿಳೆಗೆ ಅನುಕಂಪಕ್ಕಿಂತ ಅವಕಾಶ ನೀಡುವ ಕಾರ್ಯವಾಗಬೇಕು. ಮಹಿಳೆಯ ಆಶೋತ್ತರಗಳಿಗೆ ಸ್ಪಂದಿಸಿ ಮುಖ್ಯ ವೇದಿಕೆಗೆ ತರುವ ಕಾರ್ಯವನ್ನು ಸರ್ವರೂ ಮಾಡಬೇಕಾಗಿದೆ ಎಂದು ಹೇಳಿದರು.
ವಿಜಯಕಮಾರ ತೇಗಲತಿಪ್ಪಿ ಮಾತನಾಡಿ, ಸಮಾಜಕ್ಕೆ ಆದಷ್ಟು ಉಚಿತ ಕೊಡುಗೆ ನೀಡುವ ಮೂಲಕ ನಿರ್ಗತಿಕ ಜನರ ಬಾಳಿಗೆ ಧ್ವನಿಯಾಗಬೇಕು. ಇಂತಹ ಕಾರ್ಯಗಳನ್ನು ಹೆಚ್ಚು ಮಾಡಬೇಕು ಎಂದರು. ಸ್ನೇಹ ಸೊಸೈಟಿ ಅಧ್ಯಕ್ಷೆ ಮನಿಶಾ ಅಧ್ಯಕ್ಷತೆ ವಹಿಸಿದ್ದರು. ಎಎಸ್‌ಐ ಯಶೋಧಾ ಕಟಕೆ, ಸಂಗೀತ ಕಲಾವಿದೆ ಗಿರಿಜಾ ಕರ್ಪೂರ, ಬೋ ಧಿವೃಕ್ಷ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಭಾಷ ಚಕ್ರವರ್ತಿ, ನಂದಾರಾಣಿ, ಮೌನೇಶ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.