ಅಳಿಯುವ ಮುನ್ನ ಕನ್ನಡ ಉಳಿಸಿ
Team Udayavani, Dec 30, 2017, 11:14 AM IST
ಅಫಜಲಪುರ: ಕನ್ನಡ ಭಾಷೆ ಪುರಾತನವಾದುದ್ದು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ ನಮ್ಮ ಭಾಷೆಗೆ ನಾವೇ ಸರಿಯಾದ ಮನ್ನಣೆ ನೀಡುತ್ತಿಲ್ಲ, ಹೀಗಾಗಿ ಕನ್ನಡ ಭಾಷೆ ಅಳಿದು ಹೋಗುವ ಮುನ್ನ ಉಳಿಸಿ ಎಂದು ಕಸಾಪ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ವಿಜಯಕುಮಾರ ಸಾಲಿಮಠ ಹೇಳಿದರು.
ತಾಲೂಕಿನ ಮಣೂರ ಗ್ರಾಮದಲ್ಲಿ ಕರ್ಜಗಿ ಹೋಬಳಿ, ಮಣೂರ ವಲಯ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಹಾದೇವ ಬಯಲಾಟ ಸಂಘದ ಸಹಯೋಗದೊಂದಿಗೆ ಮಹಾದೇವ ಬಯಲಾಟ ರಂಗ ಮಂದಿರದಲ್ಲಿ ನಡೆದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಬಹಳಷ್ಟು ತೊಡಕುಗಳು ಬರುತ್ತಿವೆ. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಸರ್ಕಾರಗಳು ಕನ್ನಡ ಭಾಷೆ ಬೆಳವಣಿಗೆ ದೃಷ್ಟಿಯಿಂದ ಕನ್ನಡ ಶಾಲೆಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಜನಪದ ಸಾಹಿತ್ಯವನ್ನು ಹೆಚ್ಚು ಜನಪ್ರಿಯಗೊಳಿಸಬೇಕು. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕೆಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಮಣೂರ ಗ್ರಾಮದ ಜನ ಕನ್ನಡ ಭಾಷೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಮಣೂರನಲ್ಲಿ ಅನೇಕ ಜನ ಕಲಾವಿದರಿದ್ದಾರೆ. ಆದರೆ ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ, ಮಾಸಾಶನ ಸಿಗುತ್ತಿಲ್ಲ. ಕಲಾವಿದರು ಭಿಕ್ಷೆ ಬೇಡುತ್ತಿಲ್ಲ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಂಬಂಧಪಟ್ಟವರು ತಡ ಮಾಡದೇ ನೀಡಬೇಕು ಎಂದರು.
ಗಡಿ ಗ್ರಾಮದಲ್ಲಾಗಲಿ ಅಥವಾ ಎಲ್ಲೇ ಆಗಲಿ ಕನ್ನಡ ಭಾಷೆಯ ಬಗೆಗಿನ ಕಾರ್ಯಕ್ರಮ, ಸಾಹಿತ್ಯ ಸಮ್ಮೆಳನಗಳು ನಡೆಯುವಾಗ ಸರ್ಕಾರ ಮುತುವರ್ಜಿ ವಹಿಸಿ ಅನುದಾನ ನೀಡಿ ಕನ್ನಡದ ಕೆಲಸಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ವಿಕ್ರಂ ಭಟ್ ಪುಸ್ತಕ ಬಿಡುಗಡೆಗೊಳಿಸಿದರು. ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಡಿ.ಎಂ. ನದಾಫ, ಸ್ವಾಗತ ಸಮಿತಿ ಅಧ್ಯಕ್ಷ ಮಹಾದೇವಗೌಡ ಕೂರಟಿ, ಸಮ್ಮೇಳನ ಅಧ್ಯಕ್ಷರ ಶಂಕ್ರೇಪ್ಪ ಹಳಿಮನಿ, ಶಾಮರಾವ್ ಲಾಳಸಂಗಿ ಮಾತನಾಡಿದರು. ಗುರುಬಾಳಪ್ಪ ಜಕಾಪುರ, ನಾಗನಗೌಡ ಪಾಟೀಲ, ರಾಚಪ್ಪ ಕೊಪ್ಪ, ಪ್ರಭುಗೌಡ ಪಾಟೀಲ, ಮಹಿಬೂಬ ಡಾಂಗೆ, ಮಲ್ಲಿಕಾರ್ಜುನ ಚೌಡಿಹಾಳಿ, ಮಲ್ಲಿಕಾರ್ಜುನ ಯಂಕಂಚಿ, ಶರಣಯ್ಯ ಸ್ವಾಮಿ, ಸಂತೋಷ ಪಾಟೀಲ, ಮಹೇಶ ಮಠಪತಿ, ರಾಹುಲ್ ಸಿಂಪಿ, ಹುಸೇನ್ ಮುಜಾವರ, ಬಾಬುರಾವ್ ಮಾಶಾಳ ಹಾಗೂ ಇತರರು ಇದ್ದರು. ನಿಂಗಣ್ಣ ವಾಗರಿ ಸ್ವಾಗತಿಸಿದರು, ರಮೇಶ ಕಾಸರ ನಿರೂಪಿಸಿದರು, ವಿಶ್ವನಾಥ ಕರೂಟಿ ವಂದಿಸಿದರು
ಕಲಾವಿದೆಯಲ್ಲ..ಅಧಿಕಾರದ ಉಮಾಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕನ್ನಡಿಗರಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗೆ ಎಂತಹ ಸಚಿವರನ್ನು ಮಾಡಿದ್ದಿರಾ? ಕನ್ನಡ ಕಲಾವಿದರರಿಗೆ ಬಹಳ ಅನ್ಯಾಯ ಆಗುತ್ತಿದೆ. ಸರಿಯಾಗಿ ಮಾಸಾಶನ ಸಿಗುತ್ತಿಲ್ಲ. ಕೂಡಲೇ ನೀಡಿ. ನಾವೇನೂ ರಾಜಕೀಯ ಮಾಡುತ್ತಿಲ್ಲ. ಹಳ್ಳಿ , ಪಟ್ಟಣವೆನ್ನದೇ ಕನ್ನಡದ ಕಲೆ ಪಸರಿಸುತ್ತಿದ್ದೇವೆ. ಆದರೂ ಯಾಕೆ ಮಾಸಾಶನ ನೀಡುತ್ತಿಲ್ಲ. ಆಗಿನ ಉಮಾಶ್ರೀ ಈಗಿಲ್ಲ, ಆಗಿನ ಉಮಾಶ್ರೀ ಕಲಾವಿದೆ ಆಗಿದ್ದರು. ಈಗಿನ ಉಮಾಶ್ರೀ ಅಧಿಕಾರದ ಉಮಾಶ್ರೀ ಆಗಿದ್ದಾರೆ. ವೀರಭದ್ರ ಸಿಂಪಿ, ಕಸಾಪ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.