ಶರಣಬಸವ ವಿವಿ ವಿಶ್ವದಲ್ಲೇ ವಿಶಿಷ್ಠ ಸ್ಥಾನ ಪಡೆಯಲಿ
Team Udayavani, Jul 30, 2018, 11:20 AM IST
ಕಲಬುರಗಿ: ಕಲ್ಯಾಣ ಕರ್ನಾಟಕದ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿ ಕಳೆದ ವರ್ಷ ಆರಂಭವಾಗಿರುವ ಶರಣಬಸವ ವಿಶ್ವವಿದ್ಯಾಲಯ ವಿಶ್ವದ ಯಶಸ್ವಿ ಟಾಪ್ 100 ವಿವಿಯೊಳಗೆ ಸ್ಥಾನ ಪಡೆದು ಹೊರಹೊಮ್ಮಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಆಶಯ ವ್ಯಕ್ತಪಡಿಸಿದರು.
ರವಿವಾರ ಶರಣಬಸವ ವಿಶ್ವವಿದ್ಯಾಲಯದ ಪ್ರಥಮ ಸಂಸ್ಥಾಪನಾ ಸಮಾರಂಭ ಉದ್ಘಾಟಿಸಿ, ವಿವಿಯ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಶರಣಬಸವ ಶಿಕ್ಷಣ ಸಂಸ್ಥೆ ಇಡೀ ವಿಶ್ವವೇ ನೋಡುವಂತೆ ಬೆಳೆದಿದೆ. ಇದರ ಹಿಂದೆ ಸಂಸ್ಥೆಯ ಅಧ್ಯಕ್ಷರೂ ವಿವಿಯ ಕುಲಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅವರ ಪರಿಶ್ರಮವೇ ಅಡಗಿದೆ. ಅಲ್ಲದೇ ಶೈಕ್ಷಣಿಕ ಕ್ರಾಂತಿಗಾಗಿಯೇ ಪಣ ತೊಟ್ಟಿರುವುದು ನಿರೂಪಿಸುತ್ತದೆ ಎಂದು ಹೇಳಿದರು.
ಇಂದು ಶಿಕ್ಷಣವೂ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಶಿಕ್ಷಣ ಹೊಂದಿರದಿದ್ದರೆ ಯಾವುದಕ್ಕೂ ಬಾರದಂತಾಗುತ್ತದೆ. ಶಿಕ್ಷಣ ಹೊಂದಿದ್ದರೆ ದೇಶ-ವಿದೇಶಗಳಲ್ಲಿ ಸಾಧನೆ ತೋರಬಹುದಾಗಿದೆ. ಸಚಿವನಾಗಿ ಮೊದಲ
ಸಮಾರಂಭವಾಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ತರುತ್ತಿದೆ ಎಂದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ| ಎಸ್.ಆರ್. ನಿರಂಜನ್ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶ್ವವಿದ್ಯಾಲಯವು ಸಂಶೋಧನೆ, ಕಲಿಕೆ ಹಾಗೂ ಬೋಧನೆಯನ್ನು ಪ್ರಮುಖವಾಗಿ ಅಳವಡಿಸಿಕೊಳ್ಳಬೇಕು. ಖಾಸಗಿ ವಿವಿಗಳಿಗೆ ಅನುದಾನ ಹೆಚ್ಚು ಅವಶ್ಯಕವಾಗಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಬಾನೆತ್ತರಕ್ಕೆ ಬೆಳೆಯಲು ಅಪ್ಪಾಜಿ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ| ಎಚ್.ಎಂ ಮಹೇಶ್ವರಯ್ಯ ಮಾತನಾಡಿ, ಶೈಕ್ಷಣಿಕವಾಗಿ ಇನ್ನು ತಾಂತ್ರಿಕತೆ ಹೊಂದುವುದು ಬಹಳ ಅಗತ್ಯವಿದೆ. ಶರಣಬಸವ ವಿವಿ ಬೆಳವಣಿಗೆ ನಿಟ್ಟಿನಲ್ಲಿ ಕೇಂದ್ರೀಯ ವಿವಿಯಿಂದ ಯಾವುದೇ ಸಲಹೆ, ಸಹಕಾರ ಬೇಕಿದ್ದಲ್ಲಿ ನೀಡಲು ಸದಾ ಸಿದ್ಧವಿರುವುದಾಗಿ ಪ್ರಕಟಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್ ನಿಷ್ಠಿ ಅಧ್ಯಕ್ಷತೆ ವಹಿಸಿ, ವಿವಿಯಲ್ಲಿ ಪೂಜ್ಯ ಡಾ| ಅಪ್ಪ ಅವರ
ಆಶಯಗನುಗುಣವಾಗಿ ಗುಣಮಟ್ಟದ ಶಿಕ್ಷಣ ಮೊದಲ ಮಹತ್ವ ನೀಡಲಾಗುವುದು. ವರ್ಷದೊಳಗೆ ನಿರೀಕ್ಷೆಯಂತೆ
ವಿವಿ ದಾಪುಗಾಲು ಹಾಕುತ್ತಿದೆಯಾದರೂ ಇನ್ನೂ ಹಲವು ಕಾರ್ಯಗಳತ್ತ ದೃಢ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರು ಸಾನ್ನಿಧ್ಯ ವಹಿಸಿ, ಶೈಕ್ಷಣಿಕವಾಗಿ ನಮ್ಮ ಭಾಗ ಹಿಂದುಳಿದಿಲ್ಲ. ಇದಕ್ಕೆ ಕಲಬುರಗಿಯಲ್ಲಿರುವ ವೈದ್ಯಕೀಯ ಕಾಲೇಜುಗಳು ಹಾಗೂ ನಾಲ್ಕು ವಿಶ್ವವಿದ್ಯಾಲಯಗಳೇ ಸಾಕ್ಷಿ ಎಂದು ಹೇಳಿದರು.
ದೂರದೃಷಿಯತ್ತ ವಿವಿ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
ಕೃತಿಗಳ ಬಿಡುಗಡೆ: ವಿವಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದಿಂದ ಪ್ರಥಮ ಸಂಶೋಧನಾ ಜರ್ನಲ್ ಆಗಿ ಪ್ರಕಟಗೊಳ್ಳುತ್ತಿರುವ ಇಂಟರ್ ನ್ಯಾಷನಲ್ ಮಲ್ಟಿ ಡಿಸಿಪ್ಲೇನರಿ ರಿಸರ್ಚ್ ಜರ್ನಲ್ ಹಾಗೂ
ಡಾ| ಶಿವರಾಜ ಶಾಸ್ತ್ರೀ ಹೇರೂರ, ಡಾ| ಸಾರಿಕಾದೇವಿ ಕಾಳಗಿ ಮತ್ತು ನಾನಾಸಾಹೇಬ ಸಂಪಾದಕತ್ವದಲ್ಲಿ ರಚನೆಯಾಗಿರುವ ಶರಣಬಸವೇಶ್ವರ ಮಹಾದಾಸೋಹ ಸಂಪದ ಕೃತಿಗಳನ್ನು ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ದತ್ತಾತ್ರೇಯ ಪಾಟೀಲ್ ರೇವೂರ, ಎಂ.ವೈ. ಪಾಟೀಲ, ಡಾ| ಉಮೇಶ ಜಾಧವ್, ಸುಭಾಷ ಆರ್. ಗುತ್ತೇದಾರ, ಖನೀಜ್ ಫಾತೀಮಾ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಸಚಿವರು ವಿವಿಯ ಪ್ರಾಸ್ಪೆಕ್ಟ್‌ನು ಬಿಡುಗಡೆಗೊಳಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ಎಸ್. ದೇಶಮುಖ ಅವರ 53ನೇ ಜನ್ಮ ದಿನವನ್ನು ಸಮಾರಂಭದ ವೇದಿಕೆ ಮೇಲೆ ಆಚರಿಸಲಾಯಿತು. ಎಸ್. ಎಸ್. ಪಾಟೀಲ, ರೇವಣಸಿದ್ದಪ್ಪ ಪಾಟೀಲ, ಶಾಂತಲಾ ನಿಷ್ಠಿ, ಡಾ| ವಿ.ಡಿ. ಮೈತ್ರಿ, ಪ್ರೊ.ಎನ್.ಎಸ್.ದೇವರಕಲ್, ಡಾ| ಶಿವದತ್ತ ಹೊನ್ನಳ್ಳಿ ಹಾಜರಿದ್ದರು. ಡಾ| ಅನೀಲಕುಮಾರ ಬಿಡವೆ ಸ್ವಾಗತಿಸಿದರು. ಡಾ| ಲಿಂಗರಾಜ ಶಾಸ್ತ್ರೀ ನಿರೂಪಿಸಿದರು.
ಬೀದರನಲ್ಲಿ ಬಸವೇಶ್ವರ ವಿವಿ ಸ್ಥಾಪನೆಯಾಗಲಿ ಬೀದರ್ ಜಿಲ್ಲೆಯಲ್ಲಿ ಮಹಾತ್ಮಾ ಬಸವೇಶ್ವರ ವಿಶ್ವವಿದ್ಯಾಲಯ ಸ್ಥಾಪನೆ
ಮಾಡಲು ಆ ಜಿಲ್ಲೆಯವರು ಮನಸ್ಸು ಮಾಡಬೇಕು. ಒಂದು ವೇಳೆ ಜಿಲ್ಲೆಯವರು ಮುಂದಾಗದಿದ್ದಲ್ಲಿ ತಾವೇ
ಆ ನಿಟ್ಟಿನಲ್ಲಿ ಹೆಜ್ಜೆ ಇಡಲು ಹಿಂದೇಟು ಹಾಕುವುದಿಲ್ಲ. ಕಲ್ಯಾಣ ಕರ್ನಾಟಕ ಇನ್ನೂ ಶೈಕ್ಷಣಿಕವಾಗಿ ಶ್ರೀಮಂತಗೊಳ್ಳಬೇಕಿದೆ.
ಡಾ| ಶರಣಬಸವಪ್ಪ ಅಪ್ಪ, ಕುಲಪತಿಗಳು, ಶರಣಬಸವ ವಿಶ್ವವಿದ್ಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.