ಭಕ್ತರಿಗಾಗಿ ಬಾಗಿಲು ತೆರೆದ ಶರಣಬಸವೇಶ್ವರ ಮಂದಿರ
Team Udayavani, Jun 9, 2020, 7:19 AM IST
ಕಲಬುರಗಿ: ಕೋವಿಡ್ ಲಾಕ್‌ಡೌನ್‌ನಿಂದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಜಿಲ್ಲೆಯ ಬಹುತೇಕ ಮಂದಿರಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳ ಬಾಗಿಲುಗಳು ಸಕಲ ಸಿದ್ಧತೆಗಳೊಂದಿಗೆ ಸೋಮವಾರ ತೆರೆದಿದ್ದವು.
ನಗರದ ಪ್ರಸಿದ್ಧ ಶರಣಬಸವೇಶ್ವರ ದೇವಾಲಯ, ಕೋರಂಟಿ ಹನುಮಾನ ಮಂದಿರ, ರಾಮ ಮಂದಿರ, ಕೃಷ್ಣ ಮಂದಿರ, ವೈಷ್ಣೋದೇವಿ ಮಂದಿರಗಳಲ್ಲಿ ಭಕ್ತರು ಬೆಳಗ್ಗೆಯೇ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯ್ದು ನಿಂತಿದ್ದರು. ಹಾಗೆ, ನಗರದ ಪ್ರಮುಖ ಮಸೀದಿಗಳು, ಚರ್ಚ್ ಗಳು ಹಾಗೂ ಗುರುದ್ವಾರಗಳಿಗೂ ಭಕ್ತರು ತೆರಳಿ ಪ್ರಾರ್ಥನೆ ಸಲ್ಲಿಸಿದರು.
ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸುರಕ್ಷಿತೆಗಾಗಿ ದೇಗುಲಗಳ ಪ್ರವೇಶದ್ವಾರದಲ್ಲೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತಕ ಕಾಪಾಡಲು ಚೌಕ ಮತ್ತು ವೃತ್ತಾಕದಲ್ಲಿ ಬಣ್ಣ ಬಳಿದು ಒಬ್ಬೊಬ್ಬರಾಗಿ ಸಾಲಿನಲ್ಲಿ ಬರುವಂತೆ ಸೂಚಿಸಲಾಯಿತು. ಹೆಚ್ಚಿನ ಜನ ಸೇರಿದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭಕ್ತರು ಮಾಸ್ಕ್ ಧರಿಸಿ ಬರುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಅಪ್ಪನ ಗುಡಿಗೆ ಭಕ್ತರ ದಂಡು: ಶರಣಬಸವೇಶ್ವರ ದೇವಸ್ಥಾನದ ಬಾಗಿಲು ತೆರೆಯಲ್ಪಟ್ಟ ಕಾರಣ ಮೊದಲ ದಿನವೇ ಭಕ್ತರು ದಂಡು ಹರಿದುಬಂತು. ದೇವರ ದರ್ಶನ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿತ್ತು. ಪ್ರಥಮವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ದೇವರ ದರ್ಶನ ಪಡೆದರು. ತದನಂತರ ಭಕ್ತಾದಿಗಳು ಸರದಿ ರೀತಿಯಲ್ಲಿ ಒಬ್ಬೊಬ್ಬರಾಗಿ ದರ್ಶನ ಪಡೆಯಲು ಆಗಮಿಸಿದರು.
ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ ಒಡೆಯುವುದು ಮತ್ತು ಅಭಿಷàಕ, ಪ್ರಸಾದ ವಿತರಣೆಗೆ ಅವಕಾಶ ಇರಲಿಲ್ಲ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಭಕ್ತರು ದೇವಸ್ಥಾನದ ಆವರಣಕ್ಕೆ ಆಗಮಿಸುತ್ತಿದ್ದಂತೆ ದೇಗುಲದ ಸಿಬ್ಬಂದಿ ಭಕ್ತಾದಿಗಳ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿದರು. ಅದಾದ ನಂತರ ದೇವಸ್ಥಾನದ ಮುಖ್ಯದ್ವಾರಕ್ಕೆ ಸೋಂಕು ನಿವಾರಕ ಯಂತ್ರದ ಮುಖಾಂತರವೇ ಆಗಮಿಸುವ ವ್ಯವಸ್ಥೆ ಮಾಡಲಾಗಿತ್ತು. ದೇವರ ದರ್ಶನ ಪಡೆಯುವ ಸ್ಥಳದಲ್ಲಿಯೂ ಮತ್ತೆ ಸ್ಯಾನಿಟೈಸರ್ ಮಾಡಲಾಯಿತು. ಮಾರಕ ರೋಗ ಭಕ್ತರಿಗೆ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.