6 ರಂದು ಶರಣಬಸವೇಶ್ವರ 196ನೇ ಮಹಾರಥೋತ್ಸವ
Team Udayavani, Mar 2, 2018, 10:09 AM IST
ಕಲಬುರಗಿ: ಐತಿಹಾಸಿಕ ಮಹಾದಾಸೋಹಿ ಶ್ರೀಶರಣಬಸವೇಶ್ವರ 196ನೇ ಮಹಾ ರಥೋತ್ಸವ ಮಾರ್ಚ್ 6ರಂದು ಸಂಜೆ 6:00ಕ್ಕೆ ನಡೆಯಲಿದೆ. ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಡಾ| ಅಪ್ಪ ಅವರು 6ರಂದು ಸಂಜೆ 6:00ಕ್ಕೆ ಪರುಷ ಬಟ್ಟಲು ಪ್ರದರ್ಶನ ನಂತರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ. ಶರಣಬಸವೇಶ್ವರ ಜಾತ್ರೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿಯೇ ದೊಡ್ಡ ಜಾತ್ರೆಯಾಗಿದೆ. ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಯುಗಾದಿ ಹಬ್ಬದವರೆಗೂ ಜಾತ್ರೆ ನಡೆಯಲಿದೆ.
ಮಾರ್ಚ್ 5ರಂದು ಸಂಜೆ 6:00ಕ್ಕೆ ಉಚ್ಚಾಯಿ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಮಾ. 2ರಿಂದ 7ರವರೆಗೆ ಪ್ರತಿನಿತ್ಯ ಸಂಜೆ 5:00ರಿಂದ ರಾತ್ರಿ 8:00ರ ವರೆಗೆ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು ರಚಿಸಿರುವ ಮಹಾದಾಸೋಹ ಸೂತ್ರ ಆಧರಿಸಿ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ. ಮಾ. 2ರಂದು ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ| ನಿರಂಜನ್ ನಿಷ್ಠಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ| ಎಸ್.ಜಿ. ಡೊಳ್ಳೆಗೌಡ್ರು, ಡಾ| ಎಸ್.ಎಸ್. ಪಾಟೀಲ್, ಡಾ| ಶಿವರಾಜ ಶಾಸ್ತ್ರೀ ಉಪನ್ಯಾಸ ನೀಡುವರು. ಮಾ. 3ರಂದು ನಂದಿನಿ ನಿಷ್ಠಿ ಅವರ ಅಧ್ಯಕ್ಷತೆಯಲ್ಲಿ ಡಾ| ವಿಮಲಾ ಮಂಟೂರ, ಡಾ| ಸಿದ್ದಮ್ಮ ಗುಡೇದ, ಡಾ| ಸಾರಿಕಾದೇವಿ ಕಾಳಗಿ, ಪೊ| ಸಾವಿತ್ರಿ ಜಂಬಲದಿನ್ನಿ, ಮಾ. 4ರಂದು ಅನೀಲಕುಮಾರ ಬಿಡವೆ ಅವರ ಅಧ್ಯಕ್ಷತೆಯಲ್ಲಿ ಡಾ| ಪುಟ್ಟಮಣಿ, ದೇವಿದಾಸ್, ಡಾ| ಇಂದಿರಾ ಶೆಟಕಾರ್, ಡಾ| ನೀಲಾಂಬಿಕಾ ಪೊಲೀಸ್‌ಪಾಟೀಲ್, ಪ್ರೊ| ಶರಣಮ್ಮ ವಾರದ, ಮಾ. 5ರಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ಪ್ರೊ| ರೇಣುಕಾ ಕನಕೇರಿ, ಡಾ| ಸೋಮಶೇಖರ ವಿಶ್ವನಾಥಮಠ, ಪ್ರೊ| ದಯಾನಂದ ಹೊಡಲ್, ಮಾ. 5ರಂದು ಡಾ| ಲಿಂಗರಾಜ ಶಾಸ್ತ್ರೀ ಅವರ ಅಧ್ಯಕ್ಷತೆಯಲ್ಲಿ ಪ್ರೊ| ನಾನಾಸಾಹೇಬ ಹಚ್ಚಡದ, ಡಾ| ಟಿ. ಭಾಗ್ಯಮ್ಮ, ಜಗದೇವಿ ಗುಳೇದ ಹಾಗೂ ಮಾ. 7ರಂದು ಡಾ| ಮಲ್ಲಿಕಾರ್ಜುನ ನಿಷ್ಠಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ| ಸುರೇಶಕುಮಾರ ನಂದಗಾಂವ, ಪ್ರೊ| ಗೀತಾ ಹರವಾಳ, ಪ್ರೊ| ವೆಂಕಣ್ಣ ದೊಣ್ಣೆಗೌಡ್ರು ಉಪನ್ಯಾಸ ನೀಡುವರು. ರೇವಯ್ಯ ವಸ್ತ್ರದಮಠ, ಡಾ| ಸೀಮಾ ಪಾಟೀಲ, ಡಾ| ಕಲಾವತಿ ದೊರೆ, ಡಾ| ಛಾಯಾ ಭರತನೂರ, ಪ್ರೊ| ಎಂ.ಎಸ್. ಪಾಟೀಲ, ಅಂಬುಜಾ ಸೇರಿದಂತೆ ಮುಂತಾದವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.