ಶರಣಬಸವೇಶ್ವರ ಪಲ್ಲಕ್ಕಿ ಉತ್ಸವ
Team Udayavani, Aug 31, 2022, 12:52 PM IST
ಆಳಂದ: ಶ್ರಾವಣ ಮಾಸದ ಕೊನೆ ಸೋಮವಾರ ತಾಲೂಕಿನ ನಿಂಬರ್ಗಾ ಗ್ರಾಮದ ಸುಪ್ರಸಿದ್ಧ, ಐತಿಹಾಸಿಕ ಮಹಾದಾಸೋಹಿ ಕಲಬುರಗಿಯ ಶ್ರೀ ಶರಣ ಬಸವೇಶ್ವರರ ಪಲ್ಲಕ್ಕಿ ಉತ್ಸವ ಭಕ್ತರ ಜೈ ಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪ್ರತಿವರ್ಷದಂತೆ ಈ ವರ್ಷವೂ ಭಜನೆ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬೆಳಗಿನ ಜಾವ ಭಕ್ತಾದಿಗಳಿಂದ ಶ್ರೀ ಶರಣಬಸವೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಮುತ್ತೈದೆಯರು ಕುಂಭ, ಕಳಸದೊಂದಿಗೆ ಪಾಲ್ಗೊಂಡಿದ್ದರು. ಪ್ರಮುಖ ರಸ್ತೆ, ಬಡಾವಣೆಗಳ ಮೂಲಕ ಪಲ್ಲಕ್ಕಿ ಉತ್ಸವ ಸಾಗಿ ಭಕ್ತರಿಗೆ ದರ್ಶನ ಕಲ್ಪಿಸಲಾಯಿತು.ನಂತರ ದಾಸೋಹ ನೆರವೇರಿಸಲಾಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಬಾಬುರಾವ್ ಮಿಟೇಕಾರ, ಶ್ರೀಶೈಲ ಮಾಲಿಪಾಟೀಲ, ಗುರು ಹೊಸಮನಿ, ಅಣ್ಣಾರಾವ್ ದುಗೊಂಡ, ಹೊನ್ನಳ್ಳಿ ಗೌಡ, ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ಅಧ್ಯಕ್ಷ ಬಸವರಾಜ ಯಳಸಂಗಿ, ಮಹಾದೇವ ಮಿಟೇಕಾರ, ಪ್ರವೀಣ ಮಿಟೇಕಾರ, ಸಿದ್ಧರಾಮ ಬಣಗಾರ, ಸಾಗರ ದುರ್ಗದ, ವಿಶ್ವನಾಥ ಮಾಲಿಪಾಟೀಲ, ಕ್ಷೇಮಲಿಂಗ ಕಂಬಾರ, ಸುಭಾಷ ಹಳಮನಿ, ಅನಿಲ ನಾಗೂರ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.