ಶಿವನೇ ಜ್ಞಾನಕ್ಕೆ ಮೂಲ ಆಗರ: ಕಾಶಿಶ್ರೀ
Team Udayavani, Mar 12, 2019, 9:11 AM IST
ಸೊಲ್ಲಾಪುರ: ಶಿವನು ಜಗತ್ತಿನ ಆದಿ ಗುರು. ಶಿವನ ಪಂಚ ಮುಖಗಳಿಂದಲೇ ನಾಲ್ಕು ವೇದಗಳು ಹಾಗೂ 28 ಶಿವಾಗಮಗಳು ಪ್ರಕಟವಾಗಿವೆ. ಇಂತಹ ಅಪೂರ್ವವಾದ ಜ್ಞಾನ ಭಂಡಾರವನ್ನು ಜಗತ್ತಿಗೆ ಕೊಡಮಾಡಿರುವ ಶಿವನೇ ಜ್ಞಾನಕ್ಕೆ ಮೂಲ ಆಗರ ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಮಹಾಶಿವರಾತ್ರಿ ನಿಮಿತ್ತ ಕಾಶಿ ಜ್ಞಾನ ಪೀಠದಲ್ಲಿ ಹಮ್ಮಿಕೊಂಡಿದ್ದ ವಿದ್ವತ್ ಚಿಂತನೆ ಜ್ಞಾನ ಸಂಗಮ ಸಮಾರಂಭದಲ್ಲಿ ವಿವಿಧ ವಿದ್ವಾಂಸರಿಗೆ ಜ್ಞಾನ ಪುರಸ್ಕಾರ ಪ್ರದಾನ ಮಾಡಿ ಸ್ವಾಮೀಜಿ ಮಾತನಾಡಿದರು.
ವಿಶ್ವದಲ್ಲಿ ಜ್ಞಾನಕ್ಕಿಂತಲೂ ಪವಿತ್ರವಾದ ವಸ್ತು ಬೇರೊಂದಿಲ್ಲ. ಭಗವಂತನಿಂದ ಪ್ರಾಪ್ತವಾದ ವೇದಾಗಮ ಅಧ್ಯಯನ ಮಾಡಿಯೇ ಭಗವಂತನನ್ನು ಅರಿಯಬೇಕು. ಯಾರು ಅಂತಹ ಶ್ರೇಷ್ಠ ಜ್ಞಾನದಿಂದ ಭಗವಂತನನ್ನು ತಮ್ಮ ಆತ್ಮರೂಪವಾಗಿ ಅರಿತುಕೊಳ್ಳುವರೋ ಅವರೇ ಶ್ರೇಷ್ಠವಾದ ನಿಗಳೆನಿಸುತ್ತಾರೆ ಎಂದು ಹೇಳಿದರು.
ಜಗತ್ತೆಲ್ಲವೂ ಶಿವಸ್ವರೂಪವಾದುದು. ಶಿವನಿಗಿಂತಲೂ ಭಿನ್ನವಾದುದು ಬೇರೆ ಯಾವುದೂ ಇಲ್ಲ. ನಾನೂ ಕೂಡ ಶಿವಸ್ವರೂಪನೇ ಇದ್ದೇನೆ ಎನ್ನುವ ನಿಜವಾದ ತಿಳಿವಳಿಕೆಯೇ ಉತ್ಕೃಷ್ಟವಾದ ಜ್ಞಾನವಾಗಿದೆ ಎಂಬುದನ್ನು ವೀರಶೈವ ಧರ್ಮಗ್ರಂಥವಾದ ಸಿದ್ಧಾಂತ
ಶಿಖಾಮಣಿ ಹೇಳುತ್ತದೆ ಎಂದು ಅವರು ಹೇಳಿದರು.
ಪುರಸ್ಕಾರ ಪ್ರದಾನ: ಸಮಾರಂಭದಲ್ಲಿ ಕಾಶಿ ಜ್ಞಾನ ಪೀಠದಿಂದ ಮಹಾರಾಷ್ಟ್ರದ ಪಂಡಿತ ಶಿವಪ್ಪ ಖಕೆ ಅವರಿಗೆ ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪುರಸ್ಕಾರ, ವಾರಣಾಸಿಯ ಪಂಡಿತ ಗಾಯತ್ರಿ ಪ್ರಸಾದ ಪಾಂಡೇಯ ಅವರಿಗೆ ಆಚಾರ್ಯ ದ್ವಿವೇದಿ ಶೈವಭಾರತಿ ಪುರಸ್ಕಾರ, ಕಾಶಿ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ| ಸಿದ್ಧಿದಾತ್ರಿ
ಭಾರದ್ವಾಜ ಅವರಿಗೆ ಮಾತೃಶಕ್ತಿ ಪುರಸ್ಕಾರ ಹಾಗೂ ಹಮೀದ್‌ಪುರ ಮಹಾವಿದ್ಯಾಲಯದ ಪಂಡಿತ ವಿದ್ಯಾಶಂಕರ ತ್ರಿಪಾಠಿ ಅವರಿಗೆ ಕೋಡಿಮಠ ಸಾಹಿತ್ಯ ಪುರಸ್ಕಾರವನ್ನು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರದಾನ ಮಾಡಿದರು. ಕರ್ನಾಟಕ ಹಾಸನ ಜಿಲ್ಲೆ ಕೋಡಿಮಠದ ಡಾ| ಶಿವಾನಂದ ರಾಜೇಂದ್ರ ಸ್ವಾಮೀಜಿ ಹಾಗೂ ಉತ್ತರಪ್ರದೇಶ ಆವಾಸ ವಿಕಾಸ ಪರಿಷತ್ತಿನ ಅಧ್ಯಕ್ಷ ನಿತಿನ್ ಗೋಕರ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾಶಿ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ರಾಜಾರಾಮ ಶುಕ್ಲ ಅಧ್ಯಕ್ಷತೆ ವಹಿಸಿದ್ದರು.
ಕಾಶಿ ಹಿಂದೂ ವಿಶ್ವವಿದ್ಯಾಲಯ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯಗಳ ಸುಮಾರು 200ಕ್ಕೂ ಹೆಚ್ಚು ವಿವಿಧ ಪಾಂಡಿತ್ಯ ಹೊಂದಿದ ವಿದ್ವಾಂಸರು ಪಾಲ್ಗೊಂಡಿದ್ದರು. ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಡಾ| ವಿನೋದರಾವ್ ಪಾಠಕ ನಿರೂಪಿಸಿದರು. ಶ್ರೀಕಾಶಿ ಜ್ಞಾನ ಪೀಠದ ವೇದ ಪಾಠಶಾಲೆ ಅಧ್ಯಾಪಕ ಪಂ. ಮಲ್ಲಿಕಾರ್ಜುನಸ್ವಾಮಿ
ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.