ಶಿವಯೋಗಿ ಸಿದ್ಧರಾಮರು ಸರ್ವ ಜನಾಂಗದ ನಾಯಕ
Team Udayavani, Jan 16, 2018, 10:47 AM IST
ಆಳಂದ: ಹನ್ನರಡನೇ ಶತಮಾನದಲ್ಲಿ ಬಸವಣ್ಣನವರು, ಅಲ್ಲಮ ಪ್ರಭುಗಳಿಂದ ಪ್ರೇರಪಿತರಾಗಿ ಸತ್ಯ ಶುದ್ಧವಾದ ಕಾಯಕ, ನೀರಿಗಾಗಿ ಕೆರೆ, ಕಟ್ಟೆ ನಿರ್ಮಾಣ ಸೇರಿ ವಚನಗಳ ಮೂಲಕ ಸಾಮಾಜಿಕ ಸಂದೇಶ ನೀಡಿದ ಶಿವಯೋಗಿ ಸಿದ್ದರಾಮರು ಸರ್ವ ಜನಾಂಗಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಟಣದ ಗುರುಭವನ ಆವರಣದಲ್ಲಿ ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣ ಪರಂಪರೆಯಲ್ಲಿ ಸಿದ್ದರಾಮರು ಶಿವಯೋಗಿ ಎಂದು ಕರೆಯಿಸಿಕೊಂಡವರು. ಅವರು ಅನೇಕ ಸಮುದಾಯಗಳ ಆರಾಧ್ಯ ದೈವರಾಗಿದ್ದಾರೆ. ಅವರ ತತ್ವ ಮತ್ತು ವಚನಗಲು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಶರಣ, ಸಂತರ ಮಹಾನ್ ಪುರುಷರ ಜಯಂತಿ ಆಚರಣೆ ಮೂಲಕ ಎಲ್ಲ ಸಮುದಾಯಗಳಿಗೆ ಸರ್ಕಾರದಿಂದ ಗೌರವ ಕೊಡುವ ಕೆಲಸ ಮಾಡುತ್ತಿದ್ದಾರೆ ಹೊರತು ಜಾತಿಗಳ ಜನರ ತೃಪ್ತಿಪಡಿಸಲು ಎಂದು ಹೇಳಿದರು.
ಅಧುನಿಕ ಜೀವನದ ಜಂಜಾಟದ ಸಂದರ್ಭಧಲ್ಲಿ ಚರ್ಚೆ, ಚಿಂತನೆ, ಸಾಮರಸ್ಯಕ್ಕಾಗಿ ಜಯಂತಿಗಳು ಅವಕಾಶ ಮಾಡಿಕೊಡುತ್ತಿವೆ. ಈಗ ಜಾತಿ, ಧರ್ಮಗಳ ಮರೆತು ಒಗ್ಗಟ್ಟಾಗಿದ್ದರೆ ದೇಶ ಬಲಿಷ್ಠವಾಗಿರಲು ಸಾಧ್ಯವಿದೆ ಎಂದು ಹೇಳಿದರು. ಉಪನ್ಯಾಸಕ ರಮೇಶ ಮಾಡಿಯಾಳಕರ್, ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರು ಶಿವಯೋಗಿ ಸಿದ್ದರಾಮರ ಜೀವನ ಸಾಧನೆ ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿದೆ. ಆಚರಣೆಗೆ ತರಲು ಸರ್ವರ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಭೋವಿ ವಡ್ಡರ ಸಮಾಜದ ಜಿಲ್ಲಾ ಉಪಾಧ್ಯಕ್ಷ ತಾಯಪ್ಪ ಗುತ್ತೇದಾರ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ರೇವಣಸಿದ್ದಪ್ಪ ನಾಗೂರೆ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರಅಲಿ ಹವಾಲ್ದಾರ, ಸದಸ್ಯ ಮಲ್ಲಪ್ಪ ಹತ್ತರಕಿ, ವೈಹೀದ್ ಜರ್ದಿ, ಗ್ರೇಡ್-2 ತಹಶೀಲ್ದಾರ ಬಿ.ಜಿ. ಕುದರಿ, ತಾಪಂ ಸದಸ್ಯ ಶಿವಪ್ಪ ವಾರಿಕ, ಭೋವಿ
ವಡ್ಡರ ಸಮಾಜದ ಅಧ್ಯಕ್ಷ ಬಡೆಪ್ಪ ಜಿ. ದಂಡಗೂಳೆ, ಶೆಟ್ಟಪ್ಪ ಗುತ್ತೇದಾರ, ತಾಪಂ ಇಒ ಡಾ| ಸಂಜಯ ರೆಡ್ಡಿ, ಪಿಎಸ್‌ಐ ಸುರೇಶ ಬಾಬು, ಅಹ್ಮದ್ ಅಲಿ ಚುಲಬುಲ್, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೆಕ್ಕಿಕ ರಮೇಶ ಮಾಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.