ಸಿದ್ದರಾಮಯ್ಯ ಸರ್ವಾಧಿಕಾರಿ: ಬೊಮ್ಮಾಯಿ
Team Udayavani, Jul 15, 2017, 12:25 PM IST
ಲಿಂಗಸುಗೂರು: ವಿಪಕ್ಷದ ಶಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ಸೌಜನ್ಯವಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಾ ಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ತಮ್ಮ ಕ್ಷೇತ್ರದಲ್ಲಿ ಹಿಂದಿನ ಭಾಜಪ ಸರಕಾರದಲ್ಲಿ ಜಾರಿಗೆ ತಂದ ಹಲವಾರು ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಳೆದ 32
ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಗುರುವಾರವಷ್ಟೇ ಸಿದ್ದರಾಮಯ್ಯ ಅವರು ಲಿಂಗಸುಗೂರು ತಾಲೂಕಿಗೆ ಬಂದ ವೇಳೆಯಲ್ಲಿ ಶಾಸಕರ ಭೇಟಿಗೆ ಅವಕಾಶ ನೀಡಿಲ್ಲ. ಅವರ ಕರ್ತವ್ಯದ ಅರಿವು ಬಿಟ್ಟು ಸರ್ವಾ ಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ವರ್ಷಗಳ ಹಿಂದೆ ಸಾಲ ಮನ್ನಾ ಮಾಡಿದ್ದರೆ ಎಷ್ಟೋ ರೈತರ ಜೀವ ಉಳಿಸಬಹುದಾಗಿತ್ತು. ಸಾಲ ಮನ್ನಾ ಮಾಡಲು 14 ಷರತ್ತುಗಳನ್ನು ಹಾಕಿರುವುದು ಅತ್ಯಂತ ದುರಂತವಾಗಿದೆ. ಸಾಲ ಮನ್ನಾ ಮಾಡಿ ಎಂದು ಕೇಂದ್ರದತ್ತ ಬೊಟ್ಟು ಮಾಡುವ ಸಿದ್ದರಾಮಯ್ಯನವರು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವ ಬೆಳೆ ಪರಿಹಾರದ 2440 ಕೋಟಿ ರೂ. ಮೊತ್ತವನ್ನು ರೈತರಿಗೆ ಸಮರ್ಪಕವಾಗಿ ಹಂಚಿಕೆ ಮಾಡದೇ ಅನುದಾನ ಉಳಿಸಿಕೊಂಡಿದ್ದಾರೆ. ಮೇಲಾಗಿ ರಾಜ್ಯ
ಸರಕಾರವತಿಯಿಂದ ಇನ್ನೂವರಿಗೂ ಒಂದು ಪೈಸೆ ನೀಡಿಲ್ಲ ಎಂದು ಆರೋಪಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆ ಎ ಮತ್ತು ಬಿ ಸ್ಕೀಮ್‌ನಲ್ಲಿ ಇದ್ದಿಲ್ಲ. ಇದಕ್ಕೆ ನೀರಿನ ಹಂಚಿಕೆ ಕೂಡ ಇದ್ದಿಲ್ಲ. ಇದನ್ನು ಜಾರಿಗೊಳಿಸಿದರೆ ಲಿಂಗಸುಗೂರು ಹಾಗೂ ಮಾನ್ವಿ ತಾಲೂಕಿನ 90 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬುದು ಎಂಬುದನ್ನು ಮನಗಂಡು ಕಷ್ಟುಪಟ್ಟು ಗೋದಾವರಿಯಲ್ಲಿ ನಾಲ್ಕು ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಬಜೆಟ್‌ನಲ್ಲಿ ಘೋಷಿಸಿ ಟೆಂಡರ್ ಹಂತಕ್ಕೆ ತರಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದು ನಾಲ್ಕು ವರ್ಷದ ನಂತರ ಈ ಹಿಂದೆ ಜಾರಿಮಾಡಿದ್ದ ನಂದವಾಡಗಿ ಯೋಜನೆ ಪ್ರಾರಂಭಿಸಿದೆ. ಇದು ಕಾಂಗ್ರೆಸ್‌ಕ್ಕೆ ಇರುವ ನೀರಾವರಿ ಬದ್ಧತೆಯಾಗಿದೆ. ಕಳೆದ ಬಿಜೆಪಿ ಸರಕಾರ ಐದು ವರ್ಷದ ಅವ ಧಿಯಲ್ಲಿ
ನೀರಾವರಿ ಕ್ಷೇತ್ರಕ್ಕೆ 18 ಸಾವಿರ ಕೋಟಿ ರೂ. ಖರ್ಚು ಮಾಡಿ 7 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಕಾಂಗ್ರೆಸ್ ಸರಕಾರ 36 ಸಾವಿರ ಕೋಟಿ ರೂ. ಖರ್ಚು ಮಾಡಿ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಇದರಲ್ಲಿ ಬಿಜೆಪಿ ಸರಕಾರದ ಅವ ಧಿಯಲ್ಲಿನ ಯೋಜನೆಗಳು ಸೇರಿಕೊಂಡಿವೆ ವಿನಃ ಹೊಸ ಯೋಜನೆಗಳಿಲ್ಲ ಎಂದರು.
ಯುಕೆಪಿ ಮೂರನೇ ಹಂತಕ್ಕಾಗಿ 17,729 ಸಾವಿರ ಕೋಟಿ ರೂ. ಆಡಳಿತ್ಮಾಕ ಅನುಮೋದನೆ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಇಲ್ಲಿವರಿಗೂ ಒಂದು ಎಕರೆಗೂ ಕೂಡ ನೀರಾವರಿ ಸೌಲಭ್ಯ ಒದಗಿಸಿಲ್ಲ. ರಾಜ್ಯದಲ್ಲಿ ನೀರಾವರಿ ಕ್ಷೇತ್ರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದರು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮುಖಂಡರಾದ ಸಿದ್ದು ಬಂಡಿ, ಶಂಕರಗೌಡ ಅಮರಾವತಿ,
ವೆಂಕಟರಾವ ಜಾಹಗೀರದಾರ, ಚನ್ನುಕುಮಾರ, ವಿಶ್ವನಾಥ ಆನ್ವರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.