ವಚನದಿಂದ ಸಾಮಾಜಿಕ ಸಮಾನತೆ
Team Udayavani, Dec 7, 2018, 12:57 PM IST
ಕಲಬುರಗಿ: ಮಾನವೀಯ ಮೌಲ್ಯಗಳನ್ನು ಒಳಗೊಂಡ ವಚನ ಸಾಹಿತ್ಯ ಸಾಮಾಜಿಕ ಸಮಾನತೆ ಸಾರುತ್ತದೆ, ಜಾತಿಯ ಗಡಿ ಮೀರಿ ವಚನಗಳು ಬೆಳಗುತ್ತಿವೆ ಎಂದು ಸ್ಟೇಷನ್ ಬಜಾರ್ ಠಾಣೆ ಪಿಐ ಶಕೀಲ್ ಅಂಗಡಿ ಹೇಳಿದರು. ಲಿಂ. ಸುವರ್ಣಾ ಶಿವಾನಂದ ಸಜ್ಜನ ಹಾಗರಗುಂಡಗಿ
ಸ್ಮರಣಾರ್ಥ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಶಿವಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಚನದೊಳಗಿನ ಓಜ’ ಎನ್ನುವ ಕತ್ತಲು ಕರಗುವ ಪರಿ ಎನ್ನುವ ವಿಶೇಷ ವೈಚಾರಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಪನ್ಯಾಸ ನೀಡಿದ ಶರಣ ಸಾಹಿತಿ ವೆಂಕಟೇಶ ಜನಾದ್ರಿ, ಬಿಜ್ಜಳನ ಭಕ್ತಿ ಭಂಡಾರಿಯಾದ ವಿಶ್ವಗುರು ಬಸವಣ್ಣನವರು ಅಧಿಕಾರ, ದ್ರವ್ಯಗಳಿಗೆ ಆಸೆ ಪಡದೆ ಸಾಮಾಜಿಕ ಸಮಾನತೆ ಹಾಗೂ ವೈಚಾರಿಕ ಚಿಂತನೆ ಸಾರಿದರು. ಹನ್ನೆರಡನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿ ಮನೆ ಮಾಡಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ವೈಜ್ಞಾನಿಕ ಮನೋಭಾವನೆಯನ್ನು ಜನಮನದಲ್ಲಿ ಬಿತ್ತಿದ್ದಾರೆ ಎಂದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಹಂಚನಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ದಾನಮ್ಮ ಕೋರವಾರ, ಶಂಕರ ಸಜ್ಜನ ಹಾಗರಗುಂಡಗಿ ಮಾತನಾಡಿದರು.
ಅಕಾಡೆಮಿಯ ಡಾ| ಕೆ. ಗಿರಿಮಲ್ಲ, ಪರಮೇಶ್ವರ ಶಟಕಾರ, ಡಾ| ಅರುಣಕುಮಾರ ಲಗಶೆಟ್ಟಿ, ಜಗದೀಶ ಮರಪಳ್ಳಿ ಚಿಮ್ಮನಚೋಡ, ಶ್ರೀಕಾಂತ ಪಾಟೀಲ ತಿಳಗೂಳ, ಸತೀಶ ಸಜ್ಜನ, ಸುಭಾಶ್ಚಂದ್ರ ಸಜ್ಜನಶೆಟ್ಟಿ ಹೊನ್ನಕಿರಣಗಿ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ ಸೊಂತ,
ಕವಯತ್ರಿ ಗಾಯತ್ರಿ ಮಹಾಮುನಿ, ವಿರಾಜಕುಮಾರ ಕಲ್ಯಾಣ, ನಾಗರಾಜ ಕಾಮಾ, ಮರಲಿಂಗ ಯಾದಗಿರಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.