ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಪ್ರೊ| ನಿರಂಜನ್
Team Udayavani, Aug 16, 2017, 10:38 AM IST
ಕಲಬುರಗಿ: ಇವತ್ತು ಭಾರತ ಭೌತಿಕವಾಗಿ ಅಷ್ಟು ಸಾಧನೆ, ಇಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಆದರೆ, ನಿಜವಾಗಿಯೂ ಇನ್ನೂ ನಮಗೆ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಪರಿತಾಪ ಪಡುತ್ತಿದ್ದೇವೆ ಎಂದು ಗುವಿವಿ ಕುಲಪತಿ ಪ್ರೊ| ಎಸ್.ಆರ್.ನಿರಂಜನ್ ವಿಷಾದ ವ್ಯಕ್ತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ರಾಜಕೀಯ ಸ್ವಾತಂತ್ರ್ವಯನ್ನು ನಾವು ಹಾಗೋ ಹೀಗೋ ಗಳಿಸಿಕೊಂಡಿದ್ದೇವೆ. ಆದರೆ, ಸಾಮಾಜಿಕ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿಲ್ಲ. ಹಲವಾರು ಜಾತಿ-ಧರ್ಮ, ಮತ-ಪಂಥ, ಮೇಲು-ಕೀಳು, ಶ್ರೀಮಂತ-ಬಡವ ಹಾಗೂ ಇತರೆ ಒಳ ಹತೋಟಿಗಳಿಂದ ನಾವು ಹೊರ ಬಂದಿಲ್ಲ. ಇದೇ ನಮ್ಮ ಉತ್ತರೋತ್ತರ ಅಭಿವೃದ್ಧಿಗೆ, ಸಾಧನೆಗಳಿಗೆ, ಸಂಶೋಧನೆಗಳಿಗೆ, ನೆಮ್ಮದಿ ಬದುಕಿಗೆ ತೊಡಕಾಗಿದೆ ಎಂದರು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯವು
ಸಾಕಾರಗೊಂಡಿದೆಯೇ? ವಿನೋಭಾಜಿಯವರ ಸರ್ವೋದಯ ಸಾಧ್ಯವಾಗಿದೆಯೇ? ಇಂತಹ ಪ್ರಶ್ನೆಗಳಿಗೆ ನಮ್ಮ-ನಮ್ಮ ಆತ್ಮಗಳೇ ಉತ್ತರ ಕಂಡುಕೊಳ್ಳಬೇಕಾಗಿದೆ. ಸ್ವಾತಂತ್ರ್ಯವೆಂದರೆ ಸ್ವೆಚ್ಛಾಚಾರವಲ್ಲ. ದೇಶಕ್ಕೆ, ಸಮಾಜಕ್ಕೆ, ಜನಾಂಗಕ್ಕೆ ಹಿತವಾಗುವಂತೆ, ಸ್ವಯಂ ಪ್ರೇರಣೆಯಿಂದ ನಡೆದು ತೋರಿಸಬೇಕಾಗಿದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಸ್ವಾತಂತ್ರ್ಯ ಎಂಬುದಕ್ಕೆ ಮೌಲ್ಯ, ಪ್ರಜ್ಞೆಯಸ್ಥಾನ ನೀಡಿದ್ದಾರೆ ಎಂದರು.ವಿಜ್ಞಾನ ಕ್ಷೇತ್ರದಲ್ಲಿ ನಾವು ಅಪಾರವಾದ ಸಾಧನೆ ಮಾಡಿದ್ದೇವೆ. ಆದರೆ ಸಾಮಾಜಿಕವಾಗಿ ಅನೇಕ ಅಸಮಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು ವಿಪರ್ಯಾವಲ್ಲವೆ? ವಿಜ್ಞಾನ ಕ್ಷೇತ್ರ ಎಂದಾಗ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ದಿ| ಅಬ್ದುಲ್ ಕಲಾಂ ಅವರ ಆದರ್ಶಗಳು, ಕನಸುಗಳು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅನುಸರಿಸಿದಾಗ ಅವರು ಕಂಡ ಕನಸು ನನಸಾದೀತು. ವಿದ್ಯಾರ್ಥಿಗಳು, ಶಿಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಕುಲ ಸಚಿವ ಪ್ರೊ| ದಯಾನಂದ ಅಗಸರ, ಕುಲಸಚಿವ (ಮೌ)ಪ್ರೊ| ಸಿ.ಎಸ್ .ಪಾಟೀಲ, ವಿತ್ತಾಧಿಕಾರಿ ರಾಜನಾಳಕರ ಲಕ್ಷ್ಮಣ, ಈಶ್ವರ ಇಂಗಿನ, ಸಾಯಬಣ್ಣ ಕೆಂಗೂರಿ, ಸಿಂಡಿಕೇಟ್ ಸದಸ್ಯ ಸಂಗನಗೌಡ ಪೊಲೀಸ್ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ಸತೀಶ ಅಲ್ಲೋಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಸಿದ್ದಪ್ಪ ಹಾಗೂ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.