ಸಮಾಜ ಸುಧಾರಕ ಲಿಂ| ಡಾ| ಮಹಾಂತ ಅಪ್ಪಗಳು
Team Udayavani, Nov 20, 2018, 11:01 AM IST
ಕಲಬುರಗಿ: ಎಲ್ಲ ಜನಾಂಗದವರು ವಚನಗಳ ಅಧ್ಯಯನ ಮಾಡಬೇಕು. ವಚನಗಳಲ್ಲಿ ಬೆಳಕಿದೆ. ವಚನಗಳಲ್ಲಿ ಬದುಕು ಇದೆ. ನೊಂದವರಿಗೆ ಸಾಂತ್ವನವಿದೆ. ಹಸಿವು ತೃಷೆಗಳು ಮನುಷ್ಯನಿಗೆ ಹೇಗೆ ಅನಿವಾರ್ಯವೋ ಹಾಗೆಯೇ ಉತ್ತಮ ಜೀವನ ರೂಪಿಸಿಕೊಳ್ಳಲು ವಚನಗಳ ಅಧ್ಯಯನ ಅತ್ಯಗತ್ಯ ಎಂದು ಗುಳೇದಗುಡ್ಡ ಕಾಡಸಿದ್ಧೇಶ್ವರ ಮಠದ ಪೂಜ್ಯ ಗುರುಬಸವದೇವರು ಹೇಳಿದರು.
ನಗರದ ಬಸವ ಸಮಿತಿಯಲ್ಲಿ ಮಂಗಲ ಜ್ಯೋತಿ ಶರಣ ಗಾಣದ ಕಣ್ಣಪ್ಪಯ್ಯ ಸ್ಮರಣಾರ್ಥ ನಡೆದ ಅರಿವಿನ ಮನೆ 572ನೇ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿ, ಲಿಂ| ಡಾ| ಮಹಾಂತ ಅಪ್ಪಗಳು ಶರಣ ಸಂಸ್ಕೃತಿ ಪ್ರತೀಕವಾಗಿದ್ದರು. ಈ ನಾಡಿನಲ್ಲಿ ಹಲವು ಮಠ ಮಾನ್ಯಗಳು ಶರಣ ಸಂಸ್ಕೃತಿ ಉಳಿಸಲು ಬೆಳೆಸಲು ಗಣನೀಯ ಕಾರ್ಯಮಾಡಿವೆ.
ಅವರಲ್ಲಿ ಇಳಕಲ್ಲ ಮಹಾಂತ ಅಪ್ಪಗಳು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಇವರೊಂದಿಗೆ ಡಾ| ಎಂ.ಎಂ. ಕಲಬುರಗಿ ಅವರ ಸೇವೆ ಮರೆಯುವಂತಿಲ್ಲ.
ಲಿಂ| ಮಹಾಂತ ಅಪ್ಪಗಳು ಶ್ರೇಷ್ಠ ಸಂತರು. ನಿಜವಾದ ವಿರಕ್ತರು. ಪ್ರಭಾವಿ ಪ್ರವಚನಕಾರರಾಗಿ ಜನಮನವನ್ನು ಸೂರೆಗೊಂಡಂತಹ ಅಪ್ರತಿಮ ವಾಗ್ಮಿಗಳಾಗಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಪೂಜ್ಯ ಗಂಗಾಧರ ಮಹಾ ಸ್ವಾಮಿಗಳು ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠಕ್ಕೆ ಲಿಂ| ಮಹಾಂತ ಅಪ್ಪಗಳ ಹೆಸರನ್ನು ಸೂಚಿಸಿ ಅವರ ವ್ಯಕ್ತಿತ್ವಕ್ಕೆ ಮೆರುಗು ತುಂಬುತ್ತಾರೆ. ಬಸವ ತತ್ವಕ್ಕೆ ತಮ್ಮನ್ನೇ
ಅರ್ಪಿಸಿಕೊಂಡು ಸಮಾಜದಲ್ಲಿ ಅಡಗಿದ್ದ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ತಮ್ಮ ಕೊನೆಯುಸಿರು ಇರುವವರೆಗೂ ಮಹಂತ ಅಪ್ಪಗಳು ಶ್ರಮಿಸಿದ್ದಾರೆ. ಮಹಾಂತ ಜೋಳಿಗೆ ಹಿಡಿದು ಜನರಲ್ಲಿ ಅಡಗಿದ್ದ ದುಶ್ಚಟ, ವ್ಯಸನಗಳನ್ನು ಆ ಜೋಳಿಗೆಯಲಿ ಹಾಕಿಸಿಕೊಂಡು ಅವರಿಗೆ ಹೊಸ ಬದುಕುಕೊಟ್ಟವರು ಮಹಾಂತಪ್ಪಗಳು.
ತಮ್ಮ ಮಠದಲ್ಲಿ ನಡೆಯುತ್ತಿದ್ದ ರುದ್ರಾಭಿಷೇಕದಂತಹ ಅರ್ಥಹೀನ ಸಂಪ್ರದಾಯಯಗಳನ್ನು ನಿಲ್ಲಿಸಿದರು. ಶರಣ ಸಿದ್ಧಾಂತ ವಿದ್ಯಾಪೀಠ ಸ್ಥಾಪಿಸಿ ಇಡೀ ನಾಡಿನಲ್ಲಿ ಶರಣ ಸಂಸ್ಕೃತಿ ಸೌರಭ ಬೀರಿದರು. ಸಮಾಜದಲ್ಲಿ ಅಡಗಿದ್ದ ಮೌಡ್ಯ ದೂರ ಮಾಡಲು ತಮ್ಮ ಪ್ರತಿ ನುಡಿ-ನಡೆಯಲ್ಲಿ ತೋರಿಸಿದಂತಹ ಅಪರೂಪದ ವ್ಯಕ್ತಿ ಲಿಂ|ಮಹಾಂತಪ್ಪಗಳಾಗಿದ್ದರು ಎಂದು ಹೇಳಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷ ಡಾ| ವಿಲಾಸವತಿ ಖೂಬಾ, ಉಪಾಧ್ಯಕರಾದ ಡಾ| ಜಯಶ್ರೀ ದಂಡೆ. ಡಾ| ಬಿ.ಡಿ. ಜತ್ತಿ
ವಚನ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ| ವೀರಣ್ಣ ದಂಡೆ, ಜಿಲ್ಲಾ ಗಾಣಿಗರ ಸಮಾಜದ ಅಧ್ಯಕ್ಷ ಅಪ್ಪಾರಾವ ಪಾಟೀಲ ಅತನೂರ, ಕಾರ್ಯದರ್ಶಿಗಳಾದ ಡಾ| ಕೇಶವ ಕಾಬಾ, ಜಿಲ್ಲಾ ಗಾಣಿಗರ ನೌಕರರ ಸಂಘದ ಅಧ್ಯಕ್ಷ ಸಂಗನ ಗೌಡ ಪಾಟೀಲ ಹಾಗೂ ಜಿಲ್ಲಾ ಗಾಣಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸಜ್ಜನ ಇದ್ದರು. ಬಸವ ಸಮಿತಿ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.