ಸೌರ ಗೃಹ ಯೋಜನೆಯಡಿ 40% ಸಬ್ಸಿಡಿ
Team Udayavani, Aug 22, 2021, 4:17 PM IST
ಕಲಬುರಗಿ: ಕೇಂದ್ರ ಸರ್ಕಾರದ ಸೌರಗೃಹಯೋಜನೆಯಡಿ ಮನೆ ಛಾವಣಿ ಮೇಲೆಸೌರ ಶಕ್ತಿ ಫಲಕಗಳನ್ನು ಅಳವಡಿಸಿಕೊಳ್ಳುವವಿದ್ಯುತ್ ಗ್ರಾಹಕರಿಗೆ ಶೇ.40ರಷ್ಟು ಸಬ್ಸಿಡಿನೀಡಲಾಗುತ್ತದೆ. ಇದಕ್ಕೆ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದೆಎಂದು ಗುಲಬರ್ಗಾ ವಿದ್ಯುತ್‌ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಹುಲ್ ಪಾಂಡ್ವೆ ತಿಳಿಸಿದರು.
ನಗರದ ಜೆಸ್ಕಾಂ ಕಚೇರಿಯಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಸೌರ ಶಕ್ತಿ ಹಾಗೂ ವಿವಿಧ ವಿದ್ಯುತ್‌ಮೂಲಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿಹೊಸ ಮತ್ತು ನವೀಕರಿಸಬಹುದಾದ ಇಂಧನಸಚಿವಾಲಯ ಈ ಯೋಜನೆಯನ್ನು ಘೋಷಿಸಿದೆ.
ಒಂದು ವಸತಿ ಗೃಹ ಅಥವಾ ವಸತಿ ಸಂಕೀರ್ಣದಮೇಲೆ ಒಂದು ಕಿಲೋ ವ್ಯಾಟ್‌ನಿಂದ 500 ಕಿಲೋವ್ಯಾಟ್ ವರೆಗೂ ಸೌರ ವಿದ್ಯುತ್ ಉತ್ಪಾದನೆಗೆಅವಕಾಶ ಇರುತ್ತದೆ ಎಂದರು.ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ5,11,00ರೂ. ದರ ನಿಗದಿ ಮಾಡಲಾಗಿದೆ.
ಇದಕ್ಕೆ20ರಿಂದ 22 ಸಾವಿರ ರೂ. (ಶೇ.40) ಸಬ್ಸಿಡಿಸಿಗಲಿದೆ. ಇದೇ ಸಬ್ಸಿಡಿ 3 ಕಿಲೋ ವ್ಯಾಟ್ ವರೆಗೂಅನ್ವಯವಾಗುತ್ತದೆ. 10 ಕಿಲೋ ವ್ಯಾಟ್ ಘಟಕಸ್ಥಾಪಿಸಿದರೆ, 3 ಕಿಲೋ ವ್ಯಾಟ್ ವರೆಗೆ ಶೇ.40ಹಾಗೂ ನಂತರದ ಏಳು ಕಿಲೋ ವ್ಯಾಟ್ ವರೆಗೆಶೇ.20 ಸಬ್ಸಿಡಿ ಇರುತ್ತದೆ. ಅದೇ ರೀತಿ ಸಬ್ಸಿಡಿ500 ಕಿಲೋ ವ್ಯಾಟ್ ವರೆಗೆ ದೊರೆಯಲಿದ್ದು,ಪ್ರತಿ ಕಿಲೋ ವ್ಯಾಟ್‌ನ ಮೂಲ ದರವೂ ಕಡಿಮೆಆಗಲಿದೆ.
ಉದಾಹರಣೆಗೆ ಎರಡು ಕಿಲೋವ್ಯಾಟ್ ಘಟಕ ಸ್ಥಾಪಿಸಿದರೆ, ಪ್ರತಿ ಕಿಲೋ ವ್ಯಾಟ್‌ಗೆ 46,980ರೂ. ಆಗಲಿದೆ. 100ರಿಂದ 500ಕಿಲೋ ವ್ಯಾಟ್ ಘಟಕದ ಪ್ರತಿ ಕಿಲೋ ವ್ಯಾಟ್‌ಗೆ 39,080ರೂ. ಮೂಲ ದರ ಇರುತ್ತದೆ ಎಂದುವಿವರಿಸಿದರು.ಮಾರಾಟಕ್ಕೂ ಅವಕಾಶ: ಸೌರ ಗೃಹಯೋಜನೆಯಡಿ ನಿಗದಿತ ದರಕ್ಕೆ ಸೌರ ಫಲಕಗಳುಸೇರಿ ಇಡೀ ಘಟಕ ಸ್ಥಾಪನೆ ಮಾಡಿಕೊಡಲಾಗುತ್ತದೆ.
ಮನೆ ಬಳಕೆ ನಂತರ ಹೆಚ್ಚುವರಿ ಉತ್ಪಾದನೆಯಾದವಿದ್ಯುತ್ ಮಾರಾಟಕ್ಕೂ ಅವಕಾಶ ಇರುತ್ತದೆ.ಇದಕ್ಕೆ ಶೀಘ್ರದಲ್ಲೇ ಕರ್ನಾಟಕ ವಿದ್ಯುತ್ ನಿಗಮದರ ನಿಗದಿ ಪಡಿಸಲಿದೆ. ಆದರೆ, ಒಂದು ಮನೆಗೆಒಂದೇ ಘಟಕ ಅಳವಡಿಕೆಗೆ ಮಾತ್ರ ಅವಕಾಶಇರುತ್ತದೆ ಎಂದು ಸ್ಪಪ್ಟಪಡಿಸಿದರು.ಗುಣಮಟ್ಟದ ವಿದ್ಯುತ್: ವಿದ್ಯುತ್ ಸರಬರಾಜುಕಂಪನಿಗಳ ದಕ್ಷತೆ ಹೆಚ್ಚಿಸಲು ಕೇಂದ್ರ ಸರ್ಕಾರರಿವ್ಯಾಂಪ್ಡ್ ರಿಫಾಮ್ಡ್ì ಬೇಸ್ಡ್ ಮತ್ತು ರಿಸಲ್ಟ್ಲಿಂಕ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಯೋಜನೆ ರೂಪಿಸಿದೆ.ಇದರ ಜಾರಿಗೆ ವಿಸ್ತೃತ ವರದಿ ಸಿದ್ಧಪಡಿಸಲಾಗುತ್ತಿದೆಎಂದು ರಾಹುಲ್ ಪಾಂಡ್ವೆ ಹೇಳಿದರು.
ಗ್ರಾಹಕರಿಗೆ ಉತ್ತಮ ಮತ್ತು ಗುಣಮಟ್ಟದವಿದ್ಯುತ್ ಪೂರೈಕೆ, 2024-25ನೇ ಸಾಲಿನ ವೇಳೆಗೆ”ಎಟಿ’ ಮತ್ತು “ಸಿ’ ನಷ್ಟ 12ರಿಂದ 15ರ ವರೆಗೆಕಡಿಮೆ ಮಾಡುವುದು ಮತ್ತು ಎಸಿಎಸ್, ಎಆರ್‌ಆರ್ ಅಂತರವನ್ನು ಶೂನ್ಯಕ್ಕೆ ಇಳಿಸುವುದು ಈಯೋಜನೆ ಮುಖ್ಯ ಉದ್ದೇಶಗಳಾಗಿವೆ ಎಂದರು.ಈ ನಿಟ್ಟಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ,ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮತ್ತುಮೇಲ್ದರ್ಜೆಗೇರಿಸುವುದು. ಅತಿ ಹೆಚ್ಚು ವಿದ್ಯುತ್‌ನಷ್ಟ ಇರುವ ಪ್ರದೇಶಗಳಲ್ಲಿ ಕೇಬಲ್ ಅಳವಡಿಕೆ.ಹಳೆಯ ಹಾಗೂ ಸವಕಳಿ ವಿದ್ಯುತ್ ವಾಹಕಗಳನ್ನುಬದಲಾವಣೆ ಮಾಡಲಾಗುತ್ತದೆ.
ಗುಣಮಟ್ಟದವಿದ್ಯುತ್ ಪೂರೈಕೆ ಹೆಚ್ಚುವರಿಯಾಗಿ 11 ಕೆ.ವಿ.ವಿದ್ಯುತ್ ಮಾರ್ಗಗಳ ಅಳವಡಿಕೆ ಕಾಮಗಾರಿಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.ಗ್ರಾಮೀಣ ಪ್ರದೇಶ ಮತ್ತು ಹೊಲ-ಗದ್ದೆಗಳಲ್ಲಿವಿದ್ಯುತ್ ಸ್ಪರ್ಶದಿಂದ ಆಸ್ತಿ ಮತ್ತು ಪ್ರಾಣ ಹಾನಿತಡೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಪ್ರತಿ μàಡರ್ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯಶುರು ಮಾಡಲಾಗಿದೆ. ಈಗಾಗಲೇ ಶೇ.60ರಷ್ಟುಸಮೀಕ್ಷೆ ಮುಗಿದಿದೆ. ಮನೆ ಮುಂದೆ ಹಾಯ್ದುಹೋಗುವ ಸರ್ವೀಸ್ ವೈರ್‌ಗಳಿಗೆ ಪ್ಲಾ Âಸ್ಟಿಕ್ ಪೈಪ್‌ಗಳನ್ನು ಹಾಕಲಾಗುತ್ತದೆ. ಇದಕ್ಕಾಗಿ ಟೆಂಡರ್‌ಕರೆಯಲಾಗಿದೆ. ಜತೆಗೆ ಎಲ್ಲೆಲ್ಲಿ ಕಬ್ಬಿಣದ ವಿದ್ಯುತ್‌ಕಂಬಗಳು ಇವೆ. ಅವುಗಳ ತೆರವಿಗೂ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.