ಕುಸ್ತಿ ಪಂದ್ಯ ಗೆದ್ದ ಸೊಲ್ಲಾಪುರ ಪೈಲ್ವಾನ್
Team Udayavani, Sep 16, 2017, 9:35 AM IST
ಸುರಪುರ: ವೇಣುಗೋಪಾಲ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯ ಶುಕ್ರವಾರ ದೇಗುಲ ಆವರಣದಲ್ಲಿ ಅಪಾರ ಜನಸ್ತೋಮದ ಮಧ್ಯೆ ನಡೆಯಿತು.
ವಿಜಯಪುರ, ಬೆಳಗಾವಿ, ಚಡಚಣ, ಜಳಕಿ ಜತ್ತ, ಇಂಡಿ, ಸೊಲ್ಲಾಪುರ, ಹುಲಿಜಂತಿ, ಚಾಂದಕವಟೆ, ಕೊಲ್ಲಾಪುರ, ತಾಳಿಕೋಟೆ, ಇಳಕಲ್, ಜೇವರ್ಗಿ, ಬೆಳಗಾವಿ, ಶಹಾಪುರ, ಯಾದಗಿರಿ ಹಾಗೂ ಇನ್ನಿತರ ಜಿಲ್ಲೆಗಳ ನೂರಕ್ಕೂ ಹೆಚ್ಚು ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದರು.
500 ರಿಂದ 5 ಸಾವಿರ ರೂ. ವರೆಗಿನ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಕೊಲ್ಲಾಪುರದ ಪೈಲವಾನ್ ಹಾಗೂ ಜೇವರ್ಗಿ ಪೈಲವಾನ್ ನಡುವೆ ನಡೆದ ಕುಸ್ತಿ ಪೋಟಿ ನೋಡುಗರ ಗಮನ ಸೆಳೆಯಿತು.
ಸೊಲ್ಲಾಪುರದ ಪೈಲವಾನ್ ಸೂರ್ಯ ಹಾಗೂ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಪೈಲವಾನ್ ಹಣಮಂತರಾಯ ನಡುವೆ ನಡೆದ ಕಡಗದ ಕುಸ್ತಿ ತುರುಸಿನಿಂದ ಕೂಡಿತ್ತು. ಇಬ್ಬರು ಸಮಬಲದ ಹೋರಾಟಗಾರರಾಗಿದ್ದರು.
ಸೊಲ್ಲಾಪುರದ ಪೈಲವಾನ್ ತನ್ನ ಬಿಗಿ ವರಸೆಗಳಿಂದ ಗೋಗಿ ಪೈಲವಾನ್‌ನನ್ನು ಸೋಲಿಸಿ ಐದು ತೊಲಿ ಬೆಳ್ಳಿ ಕಡಗವನ್ನು ತನ್ನದಾಗಿಸಿಕೊಂಡ. ಬೆಳ್ಳಿ ಕಡಗ ಗೆದ್ದ ಪೈಲವಾನ್‌ನನ್ನು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರತರಲಾಯಿತು.
ರಾಜಾ ಕೃಷ್ಣಪ್ಪ ನಾಯಕ ಪ್ರಶಸ್ತಿ ಪತ್ರ, ಕಪ್ ನೀಡಿ ಸನ್ಮಾನಿಸಿದರು. ರಾಜಾ ಲಕ್ಷ್ಮೀನಾರಾಯಣ ನಾಯಕ, ರಾಜಾ ಪಿಡ್ಡ ನಾಯಕ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಕೃಷ್ಣ ದೇವರಾಯ ನಾಯಕ, ನಾಗಪ್ಪ ಡೊಣ್ಣಿಗೇರಿ, ಮರೆಪ್ಪ ಡೊಣ್ಣಿಗೇರಿ, ಗೋಪಾಲ ಡೊಣ್ಣಿಗೇರಿ, ಮೂಖಪ್ಪ ಡೊಣ್ಣಿಗೇರಿ, ಶರಣು ಕಲಬುರ್ಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.