ಶೀಘ್ರವೇ ಹೈಟೆಕ್ ಸಿಟಿ ಬಸ್ ನಿಲ್ದಾಣ ನಿರ್ಮಾಣ: ಡಿಸಿ
Team Udayavani, Sep 2, 2017, 10:22 AM IST
ಕಲಬುರಗಿ: ಬಹುದಿನಗಳ ಸಾರ್ವಜನಿಕರ ಬೇಡಿಕೆಯಂತೆ ನಗರದ ಸೂಪರ್ ಮಾರುಕಟ್ಟೆಯ ಸಿಟಿಬಸ್ ನಿಲ್ದಾಣ ಹಾಗೂ ಅದರ ಪಕ್ಕದಲ್ಲಿರುವ ಗ್ರಾಮೀಣ ಬಸ್ ನಿಲ್ದಾಣಗಳನ್ನು ಹೈಟೆಕ್ ಆಗಿ ನಿರ್ಮಿಸಿ ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಶುಕ್ರವಾರ ಉಭಯ ಬಸ್ ನಿಲ್ದಾಣ ಪ್ರದೇಶವನ್ನು ವೀಕ್ಷಿಸಿದ ಅವರು, ಹೈಟೆಕ್ ಬಸ್ ನಿಲ್ದಾಣಕ್ಕಾಗಿ ಒಟ್ಟು 15 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ 10 ಕೋಟಿಗಳನ್ನು ಹಾಗೂ ಎಚ್ ಕೆಆರ್‌ಡಿಬಿ ಯಿಂದ 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದರು.
ಈಗಾಗಲೇ ಅನುದಾನ ಲಭ್ಯವಾಗಿದ್ದು, ಕೂಡಲೇ ಕಾಮಗಾರಿ ಆರಂಭವಾಗಲಿದೆ. ಸಿಟಿ ಬಸ್ ನಿಲ್ದಾಣದ ಕಟ್ಟಡವನ್ನು ಎರಡು ಅಂತಸ್ತಿಗೆ ವಿಸ್ತರಣೆ ಮಾಡಲಾಗಿದೆ. ಸೂಪರ್ ಮಾರ್ಕೆಟ್ ನಲ್ಲಿ ಸಿಟಿ ಬಸ್ ನಿಲ್ದಾಣಕ್ಕಾಗಿ ಈಗಾಗಲೇ 1.36 ಎಕರೆ ಭೂಮಿ ಲಭ್ಯವಿದೆ. ಇದೇ ಪ್ರದೇಶದಲ್ಲಿ ಅಂದರೆ ಬಿ.ಎಸ್.ಎನ್.ಎಲ್. ಕಚೇರಿ ಪಕ್ಕದಲ್ಲಿ 10 ಗುಂಟೆ ಭೂಮಿ ಹೆಚ್ಚುವರಿಯಾಗಿ ಬೇಕೆಂಬ ಬೇಡಿಕೆ ಕೆ.ಆರ್.ಟಿ.ಸಿ. ಸಂಸ್ಥೆಯವರದ್ದಾಗಿದೆ. 10 ಗುಂಟೆ ಭೂಮಿಯನ್ನು ನೀಡಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಬಹಳಷ್ಟು ಭೂಮಿ ಲಭ್ಯವಿದ್ದು, ಅದು ಅತಿಕ್ರಮಣವಾಗುತ್ತಿದೆ. ಸೂಪರ್ ಮಾರ್ಕೆಟ್ ಪ್ರದೇಶದ ಸಂಪೂರ್ಣ ಆಸ್ತಿಯನ್ನು ಮರು ಸರ್ವೇ ಕೈಗೊಂಡು ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂ ಧಿಸಿದ ಅ ಧಿಕಾರಿಗಳಿಗೆ
ಜಿಲ್ಲಾಧಿಕಾರಿಗಳು ಸೂಚಿಸಿದರು.
ಸದ್ಯದ ಸಿಟಿ ಬಸ್‌ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್‌ನಿಲ್ದಾಣದ ಮಧ್ಯದಿಂದ ಎಸ್.ಬಿ.ಐ. ಬ್ಯಾಂಕ್‌ವರೆಗೆ ರ್‍ಯಾಂಪ್ ನಿರ್ಮಿಸಿಕೊಂಡು ಎಸ್.ಬಿ.ಐ. ಬ್ಯಾಂಕ್ ಮುಂದಿನ ರಸ್ತೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಎರಡು ಮಹಡಿಯ ಬಸ್ ನಿಲ್ದಾಣ ನಿರ್ಮಿಸಿದಂತೆ ಆಗುವುದು. ಇದರಿಂದ ಬಸ್ ಸಂಚಾರ ಸುಗಮವಾಗುವುದು. ನೂತನ ಬಸ್‌ನಿಲ್ದಾಣ ನಿರ್ಮಿಸಲು ಟೆಂಡರ್ ಕರೆದು ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಇಂಜಿನಿಯರ್ ಪಿ. ಮೂರ್ತಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ಜಾಧವ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮೆಹಬೂಬ್‌ಸಾಬ್, ಸಹಾಯಕ ಕಾರ್ಯ
ನಿರ್ವಾಹಕ ಇಂಜಿನಿಯರ್ ಶಾಹೀನ್ ಮತ್ತಿತರ ಅ ಧಿಕಾರಿಗಳು ಈ ಸಂದರ್ಭದಲ್ಲಿದ್ದರು. 38 ಮಳಿಗೆ ನಿರ್ಮಾಣ ಕಲಬುರಗಿ ನಗರದಲ್ಲಿರುವ ಮಾಂಸ ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸಲು ಸೂಪರ್ ಮಾರ್ಕೆಟ್ ಪ್ರದೇಶದ ಸದ್ಯದ ಮಟನ್ ಮಾರ್ಕೆಟ್ ಹತ್ತಿರ 94.6 ಲಕ್ಷ ರೂ. ವೆಚ್ಚದಲ್ಲಿ 38 ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 30 ಮಟನ್, 4 ಫಿಶ್ ಹಾಗೂ 4 ಚಿಕನ್ ಮಾರಾಟ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಈಗಿರುವ ಮಟನ್ ಮಾರ್ಕೆಟ್ ಹತ್ತಿರ
6000 ಚದರ ಅಡಿ ಪ್ರದೇಶ ಲಭ್ಯವಿದೆ. ಈ ಹಿಂದೆ ಚಪ್ಪಲ್ ಬಜಾರ್ ಹತ್ತಿರ ಹಳೆಯ ಮಟನ್ ಮಾರ್ಕೆಟ್ ನಿರ್ಮಿಸಲು ಒಂದು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಕಾರಣಾಂತರಗಳಿಂದ ಕಟ್ಟಡ ಪೂರ್ಣಗೊಂಡಿಲ್ಲ. ಈ ಕಟ್ಟಡ ಪೂರ್ಣಗೊಳಿಸಲು ಒಂದು ಕೋಟಿ ರೂ. ಕಾಯ್ದಿರಿಸಲಾಗಿದೆ.
ಪಿ. ಸುನೀಲಕುಮಾರ ಮಹಾನಗರ ಪಾಲಿಕೆ ಆಯುಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.