ರಾಸಾಯನಿಕ ವಿಧಾನದಲ್ಲಿ ಬಿತ್ತನೆ ಮಾಡಿ
Team Udayavani, Jun 27, 2017, 2:50 PM IST
ಕಲಬುರಗಿ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ, ಹೆಸರು, ಉದ್ದು, ತೊಗರಿ ಬಿತ್ತನೆ ಮಾಡುವಾಗ ರೈತರು ಜೈವಿಕ ಅಥವಾ ರಾಸಾಯನಿಕ ವಿಧಾನಗಳನ್ನು ಅಳವಡಿಸಿಕೊಂಡು ಬೀಜೋಪಚಾರ ಮಾಡಿದ ಬಳಿಕವೇ ಬಿತ್ತನೆ ಮಾಡಿ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞ ಡಾ| ಜಹೀರ್ ಅಹಮದ್ ಹೇಳಿದ್ದಾರೆ.
ರಾಷಿಯ ಆಹಾರ ಭದ್ರತೆ ಯೋಜನೆ ಅಡಿ ಚಿಂಚೋಳಿ ತಾಲೂಕಿನ ಸುಂಠಾಣ ಮತ್ತು ಹುಲಸಗೂಡ ಗ್ರಾಮಗಳಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಬಿಜೋಪಚಾರ ಮಾಡಿ ಅವರು ಮಾತನಾಡಿದರು. ದ್ವಿದಳ ಧಾನ್ಯ ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನಿಂದ ಉದ್ಭವವಾಗುವ ರೋಗಗಳು ಬೀಜ ಮೊಳಕೆ ಒಡೆಯುವ ಹಂತ,
-ಕವಲು ಕಾಂಡಗಳ ರಚನೆ ಹಾಗೂ ಕಾಯಿ ಆಗುವ ಹಂತದಲ್ಲಿ ರೋಗಗಳು ಉದ್ಭವಗೊಂಡು ಬೇರು ವ್ಯಾಪ್ತಿಯಲ್ಲಿ ಆವರಿಸಿ ನಿಧಾನವಾಗಿ ನೇಟೆ ರೋಗ ಭಾದಿಸುವ ಲಕ್ಷಣಗಳು ಇರತ್ತವೆ ಎಂದು ತಿಳಿಸಿದ್ದಾರೆ. ಆದರಿಂದ ರೈತರು ಪ್ರತಿ ಎಕರೆಗೆ ಬೆಕಾಗುವ ಬೀಜಕ್ಕೆ ಟ್ರೈಕೋಡರ್ಮಾ 20 ಗ್ರಾಂ ಪಿಎಸ್‌ಬಿ,
-200 ಗ್ರಾಂ ರೈಜೋಬಿಯಂ 200 ಗ್ರಾಂ ಉಪಚರಿಸಿ ಬಿತ್ತನೆ ಮಾಡಬೇಕು. ಆಥಾವ ತೇವಾಂಶ ಹೆಚ್ಚಾಗಿರುವ ಹೊಲಗಳಲ್ಲಿ ಸೂಕ್ತ ಬಸಿ ಕಾಲುವೆ ನಿರ್ಮಿಸಿ ಮೆಟಾಲಕ್ಸಿಲ್ 4 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಬೀಚೋಪಚರಿಸಿ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ವಿಷಯ ತಜ್ಞ ದೀಪಕ ಸದಾನಂದೆ ಹಾಗೂ ಕ್ಷೇತ್ರ ಸಹಾಯಕ ಸೈದಪ್ಪ ನಾಟೀಕಾರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.