ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ
Team Udayavani, Nov 7, 2017, 11:15 AM IST
ಚಿಂಚೋಳಿ: ಮನೆಗಳ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಸಮಾರಂಭದಲ್ಲಿ ಕುರ್ಚಿ ಟೇಬಲ್ ಬಿಸಾಡಿರುವುದರಿಂದ ಉದ್ರಿಕ್ತ ವಾತಾವರಣ
ಉಂಟಾಗಿದ್ದ ಘಟನೆ ತಾಲೂಕಿನ ಅಣವಾರ ಗ್ರಾಮದಲ್ಲಿ ನಡೆದಿದೆ.
ಅಣವಾರ ಗ್ರಾಮದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 11:00ಕ್ಕೆ ಡಾ| ಬಿ.ಆರ್.ಅಂಬೇಡ್ಕರ ವಸತಿ ಯೋಜನೆ ಅಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಡಾ| ಉಮೇಶ ಜಾಧವ ಅವರು ಭಾಗವಹಿಸಬೇಕಾಗಿತ್ತು. ಆದರೆ ಅವರು ಭಕ್ತ ಕನಕದಾಸರ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 2:00ಕ್ಕೆ ಆಗಮಿಸಿದ್ದರಿಂದ ಕೆಲ ಬಿಜೆಪಿ ಕಾರ್ಯಕರ್ತರು ಅಣವಾರ ಗ್ರಾಪಂ ಅಧಿಕಾರ ಬಿಜೆಪಿ ವಶದಲ್ಲಿ ಇದೆ. ಹಕ್ಕು ಪತ್ರಗಳನ್ನು ನಾವು ವಿತರಣೆ ಮಾಡುತ್ತೇವೆ. ಶಾಸಕರು ವಿತರಣೆ ಮಾಡುವಂತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು.
ಇದರಿಂದಾಗಿ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಲ್ಲದೇ ಕುರ್ಚಿ ಮತ್ತು ಧ್ವನಿವರ್ಧಕ ಬಿಸಾಡಿದಾಗ ಕಲ್ಯಾಣ ಮಂಟಪದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಚಿಂಚೋಳಿ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ತಮ್ಮ ಮನೆಯಲ್ಲಿ ಹಕ್ಕು ಪತ್ರ ಇಟ್ಟುಕೊಂಡು ಯಾರಿಗೂ ಕೊಡುವುದಿಲ್ಲ ಎಂದು ಪಟ್ಟುಹಿಡಿದಾಗ ಇನ್ನು ಹೆಚ್ಚಿನ ಗದ್ದಲ
ನಡೆಯಿತು. ತಾಪಂ ಅಧಿಕಾರಿ ಶಿವಾಜಿ ಡೋಣಿ, ಸರಕಾರದಿಂದ ಹಕ್ಕು ಪತ್ರ ಕೊಡಬೇಕಾಗಿದೆ. ಹಕ್ಕು ಪತ್ರಗಳನ್ನು ಕೊಡುವಂತೆ ಮನವೊಲಿಸಿದರು ಸಹ ಅಧ್ಯಕ್ಷರು ಯಾರ ಮಾತಿಗೆ ಬೆಲೆ ಕೊಡದೇ ಅಧಿಕಾರಿಗಳನ್ನೆ ತರಾಟೆಗೆ ತೆಗೆದುಕೊಂಡರು. ಪಿಎಸ್‌ಐ ಜಿ.ಎಸ್. ರಾಘವೇಂದ್ರ ಅಧ್ಯಕ್ಷರ ಮನೆಯಲ್ಲಿಟ್ಟಿದ್ದ ಹಕ್ಕು ಪತ್ರಗಳನ್ನು ತಂದು
ತಾಪಂ ಅಧಿಕಾರಿಗೆ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ| ಉಮೇಶ ಜಾಧವ ಮಾತನಾಡಿ, ಬಡವರಿಗಾಗಿ ಬಂದ ಮನೆಗಳನ್ನು ನೀಡುವುದರಲ್ಲಿ ರಾಜಕೀಯ ಬೇಡ. ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇದೆ. ಆಗ ನಮ್ಮ ನಿಮ್ಮ ಶಕ್ತಿ ಜನರ ಮುಂದೆ ತೋರಿಸೋಣ ಎಂದು ಹೇಳಿದರು.
ನಮ್ಮ ತಾಲೂಕಿನಲ್ಲಿ ಬಡವರಿಗಾಗಿ 3 ಸಾವಿರ ಮನೆಗಳನ್ನು ಕಷ್ಟಪಟ್ಟು ಮಂಜೂರಿ ಮಾಡಿಸಿದ್ದೇನೆ. ರಾಜ್ಯದಲ್ಲಿಯೇ ನಮ್ಮ ತಾಲೂಕು 4ನೇ ಸ್ಥಾನದಲ್ಲಿದೆ. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು ಎಂದು ತಿರುಗೇಟು ನೀಡಿದರು.
ಆರ್. ಗಣಪತರಾವ, ಅಬ್ದುಲ್ ಬಾಸೀತ್, ಎಪಿಎಂಸಿ ಉಪಾಧ್ಯಕ್ಷ ರೇವಣಸಿದ್ದಪ್ಪ ಪೂಜಾರಿ, ಲಕ್ಷ್ಮಣ ಆವಂಟಿ, ಸುಭಾಶ ಗಂಗನಪಳ್ಳಿ ಭಾಗವಹಿಸಿದ್ದರು.·ಸಂಗಯ್ಯ ಸ್ವಾಮಿ ಸ್ವಾಗತಿಸಿದರು. ವೀರಶೆಟ್ಟಿ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.