1ರಿಂದ ಎಸ್ಸೆಸ್ಸೆಲ್ಸಿ ಪಿಯು ತರಗತಿ ಶುರು

Team Udayavani, Dec 29, 2020, 4:43 PM IST

1ರಿಂದ ಎಸ್ಸೆಸ್ಸೆಲ್ಸಿ ಪಿಯು ತರಗತಿ ಶುರು

ಕಲಬುರಗಿ: ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತಪ್ರೌಢ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪೂರ್ವಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರಗತಿಗಳನ್ನುಜನವರಿ 1ರಿಂದ ಪ್ರಾರಂಭಿಸಲಾಗುವುದು ಎಂದುಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರಾಜಾ ಪಿ. ತಿಳಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯವರು ನೀಡಿರುವ ಮಾರ್ಗಸೂಚಿಗಳ ಅನುಸಾರವೇಶಾಲೆಗಳನ್ನು ಪುನರ್‌ ಪ್ರಾರಂಭಿಸಲಾಗುತ್ತಿದೆ. ಜನವರಿ 10ರಂದು ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿ ಪ್ರಾರಂಭಿಸಿ ನಂತರ ಜನವರಿ 15ರಿಂದ 11ನೇ ತರಗತಿಪ್ರಾರಂಭೋತ್ಸವದ ಕುರಿತು ನಿರ್ಧರಿಸಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ತರಗತಿಗಳನ್ನು ಬೆಳಗ್ಗೆ 10ರಿಂದಮಧ್ಯಾಹ್ನ 12:30ರ ವರೆಗೆ 45 ನಿಮಿಷ ಅವ ಧಿಯಮೂರು ಅವ ಧಿಯಲ್ಲಿ ವಾರದ ಆರು ದಿನಗಳಲ್ಲಿತರಗತಿ ನಡೆಸಲಾಗುವುದು. ಪ್ರತಿ ತರಗತಿಯಲ್ಲಿಗರಿಷ್ಠ 20 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದು. ಶಿಕ್ಷಕರು ಜ.1ಕ್ಕೂ ಮುನ್ನ ಆರ್‌ಟಿ-ಪಿಸಿಆರ್‌ ಪರೀಕ್ಷೆಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿ ಬಂದರೆ ಮಾತ್ರ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದರು.

ವಿದ್ಯಾಗಮ ಪುನರಾರಂಭ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 6ರಿಂದ 9 ತರಗತಿ ವರೆಗಿನವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನುಜನವರಿ 1ರಿಂದ ಪುನರಾರಂಭಿಸಲಾಗುತ್ತಿದೆ.ಈ ತರಗತಿಗಳ ಅನುಭವದ ಆಧಾರದ ಮೇಲೆಜ.14ರಿಂದ 1ರಿಂದ 5ನೇ ತರಗತಿ ಪ್ರಾರಂಭೋತ್ಸವದಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು. 8 ಮತ್ತು 9ನೇ ತರಗತಿ ಪ್ರೌಢ ಶಾಲೆಗಳಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 2ರಿಂದ ಸಂಜೆ 4:30ರ ವರೆಗೆ ವಿದ್ಯಾಗಮಕಾರ್ಯಕ್ರಮ ನಡೆಯಲಿದೆ. 6ರಿಂದ 9ನೇ ತರಗತಿ ಮಕ್ಕಳು ಇರುವ ಸ್ಥಳದಲ್ಲೇ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಬಹುದಾಗಿದೆ ಎಂದರು.

1ರಿಂದ 5ನೇ ತರಗತಿ ಪ್ರಾಥಮಿಕ ಶಾಲೆಗಳಲ್ಲಿ1ರಿಂದ 3ನೇ ತರಗತಿಯವರೆಗಿನ ಮಕ್ಕಳುಸೋಮವಾರ ಮತ್ತು 4, 5ನೇ ತರಗತಿ ಮಕ್ಕಳು ಮಂಗಳವಾರ ಬಳಿಕ ದಿನ ಬಿಟ್ಟು ದಿನ ಈ ತರಗತಿಗಳವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ. 1ರಿಂದ 7 ಮತ್ತು 1ರಿಂದ 8ನೇ ತರಗತಿ ಹಿರಿಯಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನಮಕ್ಕಳಿಗೆ ಸೋಮವಾರ ಮತ್ತು 6 ರಿಂದ 8ನೇ ತರಗತಿಮಕ್ಕಳಿಗೆ ಮಂಗಳವಾರ ತದನಂತರ ದಿನ ಬಿಟ್ಟುದಿನ ಈ ತರಗತಿಗಳ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ ಎಂದರು.

ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಲಭ್ಯವಿರುವಭೌತಿಕ ಸೌಲಭ್ಯಗಳೊಂದಿಗೆ ಶೌಚಾಲಯ, ಶಾಲಾಮೈದಾನ ಸ್ವಚ್ಛಗೊಳಿಸಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ತರಗತಿಗಳನ್ನು ಆರಂಭಿಸಲಾಗುವುದು. ಮಕ್ಕಳು ಶಾಲೆಗೆ ಮತ್ತುವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಮುನ್ನ ಪೋಷಕರ ಅನುಮತಿ ಪತ್ರ ತರುವುದುಕಡ್ಡಾಯವಾಗಿದೆ. ಶಾಲೆಗೆ ಹಾಜರಾಗಲು ಬಯಸದವಿದ್ಯಾರ್ಥಿಗಳು ಆನ್‌ಲೈನ್‌ ಅಥವಾ ಪರ್ಯಾಯ ವಿಧಾನ ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾದ್ಯಂತ ಮೂರು ಸಾವಿರ ಶಾಲೆಗಳಿದ್ದು, 40 ಸಾವಿರಕ್ಕೂ ಅಧಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಪ್ರತಿ ದಿನ ಶಿಕ್ಷಕರು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು

ಅವಲೋಕಿಸಿ ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲು ಸಮನ್ವಯತೆ ಸಾಧಿಸಬೇಕೆಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು. ಶಾಲೆಯಲ್ಲಿ ಬಿಸಿ ನೀರು ಕೊಡುವ ವ್ಯವಸ್ಥೆ ಮಾಡಲುಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು. ಶಾಲೆಯ ಪ್ರಾರಂಭೋತ್ಸವದ ಕುರಿತು ಮುಖ್ಯ ಶಿಕ್ಷಕರು ಹಳ್ಳಿಗಳಲ್ಲಿ ಡಂಗೂರ ಬಾರಿಸಿ ಪ್ರಚಾರಕಾರ್ಯ ಕೈಗೊಳ್ಳಬೇಕು. ಶಿಕ್ಷಕರು ಡಿ.31ರ ವರೆಗೆ ಮಕ್ಕಳ ಮನೆ-ಮನೆಗೆ ಭೇಟಿ ನೀಡಿ, ಪೋಷಕರ ಒಪ್ಪಿಗೆ ಪತ್ರ ಸಮೇತ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆತಿಳಿಸಬೇಕು. ಶಾಲೆಯಲ್ಲಿ ಮಧ್ಯಾಹ್ನದ ಉಪಹಾರಬದಲು ಆಹಾರಧಾನ್ಯ ವಿತರಿಸುತ್ತಿರುವುದನ್ನು ಮುಂದುವರಿಸಲಾಗುವುದು. ವಸತಿ ಶಾಲೆಗೆ ಬರುವ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ವರ್ಗ ಕಳೆದ 72 ಗಂಟೆಯಲ್ಲಿ ಪಡೆಯಲಾದ ಕೋವಿಡ್ ನೆಗೆಟಿವ್‌ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಡಿಡಿಪಿಐ ಎಸ್‌. ಪಿ. ಬಾಡಂಗಡಿ ಮತ್ತು ಡಿಎಚ್‌ಒ ಡಾ| ರಾಜಶೇಖರ ಮಾಲಿ ಇದ್ದರು.

ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಮತ್ತು ಸೋಂಕಿನಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಪ್ರತಿದಿನ 15ರಿಂದ 20 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಮ್ಸ್‌ ಹಾಗೂ ಇಎಸ್‌ಐ ಆಸ್ಪತ್ರೆಗಳನ್ನು ನಾನ್‌ ಕೋವಿಡ್‌ ಆಸ್ಪತ್ರೆಗಳೆಂದು ಘೋಷಿಸಲಾಗಿದ್ದು, ನಾಗರಿಕರು ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. -ಡಾ| ರಾಜಾ ಪಿ., ಸಿಇಒ, ಜಿ.ಪಂ

ಟಾಪ್ ನ್ಯೂಸ್

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Bhargavastra: ಡ್ರೋನ್‌ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ

Bhargavastra: ಡ್ರೋನ್‌ ದಾಳಿ ತಡೆಗೆ ಸೇನಾಗೆ ಭಾರ್ಗವಾಸ್ತ್ರ

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ… ಆಯುಕ್ತರ ಪಿಎ ಸೇರಿ ಐವರ ಬಂಧನ

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Obesity: ಬಿಎಂಐ ಬೊಜ್ಜಿನ ನಿಖರತೆ ನೀಡುವುದಿಲ್ಲ… ವರದಿ

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Gopan Swami: ಗುರು ಸಮಾಧಿ ತೆರೆಯಲು ಕೇರಳ ಹೈಕೋರ್ಟ್‌ ಅಸ್ತು

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.