ಕೋಲಿ ಎಸ್‌ಟಿ ಸೇರ್ಪಡೆ ಕಡತ ದೆಹಲಿಗೆ ರವಾನೆ
Team Udayavani, Mar 4, 2017, 3:51 PM IST
ಶಹಬಾದ: ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಸತತ ಪ್ರಯತ್ನ ನಡೆಯುತ್ತಿದ್ದು, ಇತ್ತೀಚೆಗೆ ಕೆಲವು ಸ್ಪಷ್ಟೀಕರಣಕ್ಕಾಗಿ ದೆಹಲಿಯಿಂದ ಕಡತ ರಾಜ್ಯಕ್ಕೆ ಬಂದಿತ್ತು. ಅವಶ್ಯಕ ಸ್ಪಷ್ಟೀಕರಣ ನೀಡಿ, ಮತ್ತೆ ದೆಹಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ಮಾಜಿ ಸಚಿವ, ಶಾಸಕ ಬಾಬುರಾವ್ ಚಿಂಚನಸೂರ ಸತತ ಪ್ರಯತ್ನದಲ್ಲಿದ್ದು, ಸಮಾಜ ಎಸ್‌ಟಿಗೆ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ವಿಜಯಕುಮಾರ ಚಿಂಚನಸೂರ ಹೇಳಿದರು.
ಸಮೀಪದ ಭಂಕೂರ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ತೊನಸನಳ್ಳಿಯ ಕೊಟ್ಟೂರೇಶ್ವರ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಬಿಗರ ಚೌಡಯ್ಯ ಬಸವಾದಿ ಶರಣರ ಕಾಲದ ಒಬ್ಬ ಕ್ರಾಂತಿಕಾರಿ ವಚನಕಾರರಾಗಿದ್ದು, ಸಮಾಜದ ಓರೆಕೋರೆಗಳನ್ನು ತಮ್ಮ ವಚನಗಳ ಮೂಲಕ ದಿಟ್ಟವಾಗಿ ತಿಳಿಸಿದ್ದಾರೆ ಎಂದರು.
ಮುಗುಳನಾಗಾವದ ಅಭಿವನ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಜ್ಯ ಕೋಲಿ ಸಮಾಜದ ಗೌರವ ಅಧ್ಯಕ್ಷ ತಿಪ್ಪಣ್ಣ ಕಮಕನೂರ, ಬಿಜೆಪಿ ಮುಖಂಡ ರಾಜಗೋಪಾಲರೆಡ್ಡಿ, ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ, ಸಮಾಜದ ಯಾದಗಿರಿ ಜಿಲ್ಲಾ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿದರು.
ಲಕ್ಷ್ಮೀಕಾಂತ ಕಂದಗೋಳ ಅಧ್ಯಕ್ಷತೆ ವಹಿಸಿದ್ದರು. ತಾಪಂ ಪ್ರತಿಪಕ್ಷದ ನಾಯಕ ಮಲ್ಲಣ್ಣ ಸಣಮೋ, ತಾಪಂ ಸದಸ್ಯೆ ವಿಜಯಲಕ್ಷ್ಮೀ ಚವ್ಹಾಣ, ಶಶಿಕಾಂತ ಪಾಟೀಲ, ಕಿರಣಕುಮಾರ ಜಡಗಿಕರ್, ರಾಮಲಿಂಗ ಸರಡಗಿ ಇದ್ದರು. ನಿಂಗಣ್ಣ ನಂದಿಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಿರಗೂಂಡ ನಿರೂಪಿಸಿದರು. ಭೀಮರಾಯ ತಮರಾವತಿ ವಂದಿಸಿದರು. ಇದಕ್ಕೂ ಪೂರ್ವ ಚಂದ್ರಕಾಂತ ಪಾಟೀಲ ಮಹದ್ವಾರದಿಂದ ಅಂಬಿಗರ ಚೌಡಯ್ಯ ಮಂಟಪದವರೆಗೆ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.