ರಾಜ್ಯಮಟ್ಟದ ಖೋಖೋ ಪಂದ್ಯ ಇಂದು
Team Udayavani, Oct 30, 2017, 11:37 AM IST
ಚಿತ್ತಾಪುರ: ಪಟ್ಟಣದ ರಾಯಲ್ ಗ್ರೌಂಡ್‌ನಲ್ಲಿ (ಅಮರಾವತಿ ಮೈದಾನ) ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಖೋ-ಖೋ ಪಂದ್ಯಾವಳಿ ಅ.30 ರಂದು ಸಂಜೆ 5:30 ಕ್ಕೆ ನಡೆಯಲಿದೆ ಎಂದು ಶ್ರೀ ಸಂಜೀವಿನಿ ಆಂಜನೇಯ ಖೋಖೋ ಕ್ಲಬ್ ಅಧ್ಯಕ್ಷ ನಾಗೇಶ ಹಲಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 20 ಜಿಲ್ಲೆಗಳ ತಂಡಗಳ ಜತೆಗೆ ಮಹಾರಾಷ್ಟ್ರದ ಸೊಲ್ಲಾಪುರ ತಂಡಗಳು ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಕಲಬುರಗಿ, ಧಾರವಾಡ, ಬಾಗಲಕೋಟೆ,
ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 21,501 ರೂ. ಬಹುಮಾನ, ಕಪ್‌ನ್ನು ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ನೀಡಲಿದ್ದಾರೆ. ಎರಡನೇ ಸ್ಥಾನ ಪಡೆದ ತಂಡಕ್ಕೆ 11,501 ರೂ. ಬಹುಮಾನ, ಕಪ್
ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 6001 ರೂ. ಬಹುಮಾನ, ಕಪ್ ನೀಡಲಾಗುವುದು. ಉತ್ತಮ ಆಟಗಾರರಿಗೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಪಂದ್ಯಾವಳಿ ಆಡಲು ಮೈದಾನ ಸಿದ್ಧಗೊಳಿಸಲಾಗಿದೆ. ಹೈಟೆಕ್ ಮೈದಾನದಂತೆ ಖೋಖೋ ಆಟವಾಡಲು ಮ್ಯಾಟ್ ಬಳಸಲಾಗಿದೆ. ಜತೆಗೆ ಸುತ್ತಲೂ ಕಂಬಗಳನ್ನು ನೆಡಲಾಗಿದ್ದು. ಪ್ರೇಕ್ಷಕರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಹೊನಲು-ರಾತ್ರಿ ಪಂದ್ಯಾವಳಿ ಆಗಿರುವುದರಿಂದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಅಶ್ವಥ ರಾಠೊಡ, ಕೋಚ್ ಹಾಗೂ ತೀರ್ಪುಗಾರರಾಗಿ ಮಹಾಂತೇಶ
ಕೊಡದೂರ, ವಿಶ್ವನಾಥ ಕುಂಬಾರ, ದೇವಿಂದ್ರ ದೋರೆ, ವೀರಭದ್ರ ಹುಮನಾಬಾದ, ಜಗದೀಶ ಮೂಡಬೂಳಕರ್, ಅಂಬಣ್ಣ ಕಾಶಿ, ವೆಂಕಟೇಶ ರೆಡ್ಡಿ ಅಲ್ಲೂರ, ವಿಷ್ಣು ಗುರುಮಿಠಕಲ್, ವಿರೇಶ ಮಾಕಾಪ, ಮಹಾವೀರ ಭೀಮಳ್ಳಿ, ಮರೆಪ್ಪ ಬೋಮ್ಮನಳ್ಳಿಕರ್, ಕ್ಲಬ್‌ನ ವ್ಯವಸ್ಥಾಪಕರಾದ ಅಂಬರೀಶ, ಪ್ರವೀಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.