ಸಮ್ಮಿಶ್ರ ಸರ್ಕಾರದಿಂದ ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ?
Team Udayavani, Jul 27, 2018, 1:10 PM IST
ಆಲಮಟ್ಟಿ: ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣೆ ತುಂಬಿ ಕೆಲವು ದಿನಗಳಾದರೂ ಸರ್ಕಾರದಿಂದ ಬಾಗಿನ ಅರ್ಪಣೆ ಯಾವಾಗ ಎಂಬ ಪ್ರಶ್ನೆ ಇಲ್ಲಿಯ ಜನರನ್ನು ಕಾಡುತ್ತಿದೆ. ರಾಜ್ಯದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿಗೆ ಜೀವ ಜಲವಾಗಿರುವ ಕೃಷ್ಣೆ ಹಾಗೂ ಕಾವೇರಿ ನದಿಗಳು ರಾಜ್ಯದ ಎರಡು ಕಣ್ಣುಗಳು ಎಂದು ಹೇಳುವ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ. ಕೃಷ್ಣೆ ತುಂಬಿದ್ದರೂ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆಯಾಗುತ್ತಿಲ್ಲ, ಅದೇ ದಕ್ಷಿಣ ಕರ್ನಾಟಕದ ಕಾವೇರಿ ನದಿ ತುಂಬಿದ ಕೆಲ ದಿನಗಳಲ್ಲಿಯೇ ಈಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಂಪತಿಯೊಂದಿಗೆ ಬಾಗಿನ ಅರ್ಪಿಸುತ್ತಾರೆ. ಅಲ್ಲದೇ ಈ ಹಿಂದೆ ಆಡಳಿತ ನಡೆಸಿರುವ ಮುಖ್ಯಮಂತ್ರಿಗಳೂ ಕೂಡ ಇದೇ ಸಂಪ್ರದಾಯ ಅನುಸರಿಸಿರುವುದು ನಾಡಿನ ಜನತೆಗೆ ಗೊತ್ತಿರುವ ವಿಷಯ. ಆದರೆ ಉತ್ತರ ಭಾಗದ ಜೀವನಾಡಿ ಹಾಗೂ ಕಾವೇರಿ ನದಿ ನೀರಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವ ಶಾಸ್ತ್ರಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಾದರೆ ಮೀನ-ಮೇಷ ಎಣಿಸುವುದು ಏಕೆ?
ಕೃಷ್ಣೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಳೇಶ್ವರ ಉಗಮವಾಗಿ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯಿಂದ ರಾಜ್ಯವನ್ನು ಪ್ರವೇಶ ಮಾಡಿ ಲಕ್ಷಾಂತರ ಎಕರೆ ಜಮೀನಿಗೆ ಹಾಗೂ ಕೋಟ್ಯಂತರ ಜನ-ಜಾನುವಾರುಗಳಿಗೆ ಜೀವ ಜಲವಾಗಿದ್ದರೂ ಕೂಡ ಆಳುವ ಸರ್ಕಾರಗಳಿಗೆ ಕೃಷ್ಣೆ ಕಾಣುತ್ತಿಲ್ಲವೇಕೆ? ಎನ್ನುವದು ಈ ಭಾಗದ ಜನರ ಪ್ರಶ್ನೆ.
ಉತ್ತರ ಕರ್ನಾಟಕ ಭಾಗದಲ್ಲಿ ಹರಿದಿರುವ ಕೃಷ್ಣೆಗೆ ರಾಜ್ಯದಲ್ಲಿಯೇ ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದಲ್ಲಿ ಬಸವಸಾಗರ ಜಲಾಶಯ ಹಾಗೂ ಹಿಪ್ಪರಗಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ. ಏಷ್ಯಾ ಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆಗಳಲ್ಲಿಯೇ ದ್ವಿತೀಯ ಸ್ಥಾನದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನವಾಗಿರುವ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಸರ್ಕಾರದಿಂದ ಬಾಗಿನ ಅರ್ಪಿಸಲು ಇನ್ನೂವರೆಗೆ ದಿನ ನಿಗದಿ ಮಾಡದಿರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ ಎನ್ನುತ್ತಾರೆ ಪ್ರಗತಿ ಪರ ರೈತ ಮಹಾದೇವಪ್ಪ ಫತ್ತೆಪುರ.
6 ಲಕ್ಷ ಹೆಕ್ಟೇರ್ ನೀರಾವರಿ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಸುಮಾರು 6.22 ಲಕ್ಷ ಹೆಕ್ಟೇರ್ ಪ್ರದೇಶ ಹನಿ ನೀರಾವರಿ, ಏತ ನೀರಾವರಿ, ಭೂಮಟ್ಟದ ಮೂಲಕವಾಗಿ ನೀರಾವರಿಗೊಳಪಡಲಿದೆ. ಸುಮಾರು 7 ಜಿಲ್ಲೆಗಳ ನಗರ, ಪಟ್ಟಣ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಂದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಆಳುವ ಸರ್ಕಾರಗಳು ಈ ಭಾಗದ ಜನಪ್ರತಿನಿಧಿಗಳ ಸೌಮ್ಯಸ್ವಭಾವವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಈ ಭಾಗದ ಎಲ್ಲ ವಿಚಾರದಲ್ಲಿಯೂ ಮಲತಾಯಿ ಧೋರಣೆ ಅನುಸಿರಿಸುತ್ತಿವೆ. ಇತ್ತೀಚೆಗೆ ಕಾವೇರಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿಗಳು ಕೃಷ್ಣೆ ತುಂಬಿದ್ದರೂ ಬಾಗಿನ ಅರ್ಪಣೆಯಾಗುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗುತ್ತದೆ ಎನ್ನುತ್ತಾರೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ.
ವಿದ್ಯುತ್ ಘಟಕ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಬಲ ಭಾಗದಲ್ಲಿರುವ ಕರ್ನಾಟಕ ವಿದ್ಯುತ್ ಉತ್ಪಾದನಾ ಘಟಕದಿಂದ ನಿತ್ಯ 290 ಮೆ.ವ್ಯಾ.ವಿದ್ಯುತ್‌ನ್ನು ಜಲ ವಿದ್ಯುದಗಾರದಿಂದ ಉತ್ಪಾದಿಸಲಾಗುತ್ತಿದೆ ಮತ್ತು ಕೂಡಗಿಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಶಾಖೋತ್ಪನ್ನ ಘಟಕಕ್ಕೆ ನೀರನ್ನು ಆಲಮಟ್ಟಿಯ ಪಾರ್ವತಿಕಟ್ಟೆ ಸೇತುವೆ ಹತ್ತಿರ ನಿರ್ಮಿಸಿರುವ ಕೊಳವೆ ಮಾರ್ಗದ ಮುಖ್ಯಸ್ಥಾವರದಿಂದ ಪೂರೈಸಲಾಗುತ್ತಿದೆ. ಇನ್ನು ನಾರಾಯಣಪುರದ ಬಸವಸಾಗರ ಜಲಾಶಯ ವ್ಯಾಪ್ತಿಯಲ್ಲಿರುವ ಖಾಸಗಿ ಸಂಸ್ಥೆಯ ಮುರ್ಡೇಶ್ವರ ಜಲವಿದ್ಯುತ್ ಉತ್ಪಾದನಾ ಘಟಕದಿಂದ ವಿದ್ಯುತ್‌ನ್ನು ಉತ್ಪಾದಿಸಲಾಗುತ್ತಿದೆಯಲ್ಲಯದೇ ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳು ಸೇರಿದಂತೆ ಹಲವಾರು ವಿದ್ಯುತ್ ಘಟಕಗಳಿಗೆ ನೀರು ಪೂರೈಸಿ ನಾಡಿನ ಜನರಿಗೆ ಬೆಳಕು ನೀಡುತ್ತಿರುವ ಕೃಷ್ಣೆಗೆ ಬಾಗಿನ ಅರ್ಪಿಸಲೂ ಕೂಡ ಆಳುವ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ತರವಲ್ಲಿ ಎಂಬುವುದು ಇಲ್ಲಿನ ಜನರ ಆಭಿಪ್ರಾಯವಾಗಿದೆ.
ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.