ಕುತಂತ್ರ-ದ್ವೇಷ ರಾಜಕಾರಣ ನಿಲ್ಲಿಸಿ: ಶಾಸಕ ತೇಲ್ಕೂರ
Team Udayavani, Aug 6, 2018, 10:17 AM IST
ಚಿಂಚೋಳಿ: ಸೇಡಂ ವಿಧಾನಸಭೆ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಕಂಡಿದ್ದೇನೆ. ಅಭಿವೃದ್ಧಿಯಲ್ಲಿ ರಾಜಕೀಯ ಕುತಂತ್ರ ಬೇಡ, ದ್ವೇಷ ರಾಜಕಾರಣ ನಿಲ್ಲಿಸಬೇಕೆಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು. ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ರವಿವಾರ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ನಾನು ಮೊದಲ ಬಾರಿಗೆ ಸೇಡಂ ತಾಲೂಕಿನ ಶಾಸಕನಾಗಿದ್ದೇನೆ. ಹಿಂದಿನ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಂತೆ ನಾನು ಯಾವುದೇ ಜಾತಿ ರಾಜಕಾರಣ ಮಾಡುವುದಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ದೀನ ದಲಿತರ ಮತ್ತು ರೈತರ ಏಳಿಗೆಗೋಸ್ಕರ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಸೇಡಂ ಮತಕ್ಷೇತ್ರದಲ್ಲಿ ಸಾಕಷ್ಟು ಸಿಮೆಂಟ್ ಕಂಪನಿಗಳಿದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಅವರಿಗೆ ಉದ್ಯೋಗ ಸಿಗಬೇಕು. ರೈತರ ಆದಾಯ ಹೆಚ್ಚಳ ಆಗಬೇಕೆಂಬ ಉದ್ದೇಶಕ್ಕಾಗಿ ಸೇಡಂ ಪಟ್ಟಣದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಬೃಹತ್ ಕೃಷಿ ಮೇಳ ಮತ್ತು ಉದ್ಯೋಗ ಮೇಳ ನಡೆಸುತ್ತೇನೆ. ಇದರಲ್ಲಿ 300ಕ್ಕಿಂತ ಹೆಚ್ಚು ಕಂಪನಿಗಳನ್ನು ಆಹ್ವಾನಿಸುತ್ತೇನೆ ಎಂದರು.
ನೀವು ನನಗೆ ಕೆಲಸ ತೋರಿಸಿ, ನಾನು ಮಾಡಿ ತೋರಿಸುತ್ತೇನೆ. ಸುಲೇಪೇಟ ಗ್ರಾಮದಲ್ಲಿ ಮುಂದಿನ ತಿಂಗಳು ಕೆಡಿಪಿ ಸಭೆ ನಡೆಸಿ ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ಕೊಡಿಸುತ್ತೇನೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಸರಕಾರ ಉರುಳಿ ಹೋಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ. ಸೇಡಂ ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ
ಪಡಿಸುವುದೇ ನಮ್ಮ ಮೊದಲ ಗುರಿಯಾಗಿದೆ ಎಂದರು.
ಶರಣಪ್ಪ ತಳವಾರ, ದಯಾನಂದ ರೆಮ್ಮಣಿ, ಪರ್ವತರೆಡ್ಡಿ ಸೇಡಂ, ಡಾ| ವಿಶ್ವನಾಥ ಪವಾರ, ವಿಷ್ಣುರಾವ್ ಬಸೂದೆ, ಅತೀಶ ಪವಾರ, ಜಿಪಂ ಸದಸ್ಯ ಶಿವಶರಣಪ್ಪ ಶಂಕರ, ನಾಗಪ್ಪ ಕೊಳ್ಳಿ, ಬಂಡೆಪ್ಪ, ಶಿವಕುಮಾರ ನಿಂಗದಳ್ಳಿ, ಲಕ್ಷ್ಮಣ
ಆವಂಟಿ, ಚಂದ್ರಶೇಖರ ಗುತ್ತೇದಾರ, ರವಿ ಬಂಟನಳ್ಳಿ, ಮುಕುಂದ ದೇಶಪಾಂಡೆ, ಓಂಪ್ರಕಾಶ ಪಾಟೀಲ, ಮುಜಿಬ್ ಪಟೇಲ್ ಇದ್ದರು. ಮಹೇಶ ಬೆಳಮಗಿ ಸ್ವಾಗತಿಸಿದರು, ಶರಣು ಕುಂಬಾರ ನಿರೂಪಿಸಿದರು, ನಾಗೇಶ ಬಸೂದೆ ವಂದಿಸಿದರು.
ಬಿಜೆಪಿ ಕಾರ್ಯಕರ್ತರು ನೂತನ ಶಾಸಕ ರಾಜಕುಮಾರ ಪಾಟೀಲ ಅವರನ್ನು ಸುಲೇಪೇಟ ಗ್ರಾಮದಲ್ಲಿ ಬಸವೇಶ್ವರ ವೃತ್ತದಿಂದ ವೀರಭದ್ರೇಶ್ವರ ದೇವಾಲಯವರೆಗೆ ಪಟಾಕಿ ಸಿಡಿಸಿ ಅದ್ಧೂರಿ ಮೆರವಣಿಗೆ ನಡೆಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲರ ಗುರು ಮಲ್ಲಿಕಾರ್ಜುನ ಖರ್ಗೆ ವರನ್ನು ಭಾರಿ ಮತಗಳಿಂದ ಸೋಲಿಸಬೇಕಾಗಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ.
ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.