ಆರಂಭವಾಗದ ಶಾಲೆ : ಕಳೆ ಕೀಳುವ- ಹತ್ತಿ ಬಿಡಿಸುವ ಕೆಲಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು
ಪೆನ್ಸಿಲ್ ಹಿಡಿಯುವ ಕೈಯಲ್ಲಿ ಕುರ್ಪಿ
Team Udayavani, Nov 14, 2020, 4:55 PM IST
ಜೇವರ್ಗಿ: ಹೊರವಲಯದಲ್ಲಿ ಟಂಟಂ ವಾಹನದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು.
ಜೇವರ್ಗಿ: ಕೋವಿಡ್ ಮಹಾಮಾರಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಿದ್ದು, ತರಗತಿ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅಕ್ಷರಾಭ್ಯಾಸ ಮಾಡಬೇಕಿದ್ದ ಮಕ್ಕಳು ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಕೈಯಲ್ಲಿ ಪೆನ್ಸಿಲ್ ಹಿಡಿದು ಅ, ಆ, ಇ, ಈ ಬರೆಯಬೇಕಿದ್ದ ಮಕ್ಕಳು ಕೈಯಲ್ಲಿ ಕುರ್ಪಿ ಹಿಡಿದು ಕಳೆ ಕೀಳುತ್ತಿರುವ ದೃಶ್ಯ ಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕಂಡುಬರುತ್ತಿದೆ. ಕೂಲಿ ಹಣದ ಆಸೆಗೆ ಖುದ್ದು ಪಾಲಕರೇ ಮಕ್ಕಳನ್ನು ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದಾರೆ.
ಕೋವಿಡ್ ಆತಂಕ ಇದ್ದರೂ ಟಂಟಂ, ಜೀಪ್, ಟ್ರ್ಯಾಕ್ಟರ್‌ಗಳಲ್ಲಿ ಕುರಿ ಹಿಂಡಿನಂತೆ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ನಿತ್ಯ ದಿನಬೆಳಗಾದರೆ ಸಾಕು ನೂರಾರು ವಿದ್ಯಾರ್ಥಿಗಳು ಕಳೆ ಕೀಳಲು, ಹತ್ತಿ ಬಿಡಿಸಲು ಹೋಗಿ ನೂರಾರು ರೂ. ತರುವ ಮೂಲಕ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ. ಆದರೆ, ಮಕ್ಕಳ ಭವಿಷ್ಯ ಕಮರಿ ಹೋಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಪೋಷಕರು ಬಡವರು. ಅವರು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಾರೆ. ಶಾಲೆ ನಡೆಯುತ್ತಿದ್ದಾಗ ಮಕ್ಕಳ ಊಟ ಶಾಲೆಗಳಲ್ಲಿ ನಡೆಯುತ್ತಿತ್ತು. ಮಕ್ಕಳು ಬೆಳಗ್ಗೆ ಶಾಲೆಗೆ ಹೋದರೆಮರಳುವಾಗ ಸಂಜೆಯಾಗುತ್ತಿತ್ತು. ಹೀಗಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿ, ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಈಗ ಮಕ್ಕಳು ಮನೆಯಲ್ಲಿಯೇ ಇರುವುದುಪೋಷಕರಿಗೆ ದೊಡ್ಡ ಸಮಸ್ಯೆಯಾಗಿದೆ. ಶಾಲೆಗಳು ಆರಂಭವಾಗದೇ ಇರುವುದರಿಂದ ಬಹುತೇಕ ಮಕ್ಕಳು ಓದುವುದನ್ನೇ ಮರೆತಿದ್ದಾರೆ.
ತಾಲೂಕಿನಲ್ಲಿ ನೂರಾರು ಜನ ತೆಲಂಗಾಣ, ಆಂಧ್ರ ಮೂಲದ ರೈತರು ಈ ಭಾಗದ ರೈತರ ಜಮೀನುಗಳನ್ನು ಲೀಜ್ ಪಡೆದು ಕೃಷಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ರೇವನೂರ, ಜನಿವಾರ, ಕೆಲ್ಲೂರ, ಹರವಾಳ, ಮುದಬಾಳ, ಅವರಾದ, ಹರನೂರ,ಮುದಬಾಳ.ಕೆ, ಮುದಬಾಳ ಬಿ, ಇಜೇರಿ, ಸಿಗರಥಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜಮೀನು ಲೀಜ್ ಪಡೆದು ಹತ್ತಿ ಹಾಗೂ ಮೆಣಸಿನಕಾಯಿ ಕೃಷಿ ಮಾಡಿದ್ದಾರೆ. ಹತ್ತಿ, ಮೆಣಸಿನಕಾಯಿ ಬಿಡಿಸಲು ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಗಂಭಿರವಾಗಿ ಕಾಡುತ್ತಿದೆ.
ಕಾರ್ಮಿಕರ ಸಮಸ್ಯೆಯಿಂದ ದುಪ್ಪಟ್ಟು ಕೂಲಿ ಹಣದ ಆಮೀಷ ಒಡ್ಡಲಾಗುತ್ತಿದೆ. ಅವರು ಕೊಡುವ ಕೂಲಿ ಆಸೆಗೆ ಕೆಲ ಜನ ಪಾಲಕರು ತಮ್ಮ ಜೊತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕೂಲಿ ಹಣದ ಜೊತೆಗೆ ಹೊಲಕ್ಕೆ ಹೋಗಿ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ ಮಾಡಿದ್ದಾರೆ. ಶಾಲೆಗೆ ಹೋಗಿ ಮಕ್ಕಳು ಪುಸ್ತಕ ಹಿಡಿದು ಓದಬೇಕಾದ ಸಮಯದಲ್ಲಿ ಪಾಲಕರ ದುರಾಸೆಯಿಂದ ಮುಳ್ಳು, ಕೆಸರಿನಲ್ಲಿ ಕಳೆ ಕೀಳುವುದು, ಹತ್ತಿ, ಮೆಣಸಿನಕಾಯಿ ಬಿಡಿಸುವ ಕಾಯಕದಲ್ಲಿ ನಿರತರಾಗುವಂತಾಗಿದೆ.
–ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.