ಸೂಲಹಳ್ಳಿ ಬಲಭೀಮೇಶ್ವರ ಜಾತ್ರೆ: ಪಲ್ಲಕ್ಕಿ ಉತ್ಸವ
Team Udayavani, Sep 3, 2018, 11:28 AM IST
ವಾಡಿ: ಸೂಲಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಬಲಭೀಮೇಶ್ವರ ಜಾತ್ರೆ ಸಂಭ್ರಮದಿಂದ ನಡೆಯಿತು. ಭಕ್ತರು
ಹಳ್ಳದ ನೀರಿಗೆ ನೈವೇದ್ಯ ಹರಿಬಿಟ್ಟರು. ನಂತರ ನಡೆದ ಅನ್ನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು.
ಗ್ರಾಮದ ಅಗಸಿ ಬಾಗಿಲಿಂದ ವಾದ್ಯ-ಮೇಳಗಳೊಂದಿಗೆ ಹೊರಟ ಪಲ್ಲಕ್ಕಿ ಮೆರವಣಿಗೆ ನೂರಾರು ಜನ ಭಕ್ತರ ಎರಡು
ಕಿ.ಮೀ ಪಾದಯಾತ್ರೆಗೆ ಸಾಕ್ಷಿಯಾಯಿತು. ದೇವಸ್ಥಾನಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ಹಾಕಿದ ಬಳಿಕ ವಿಶೇಷ ಪೂಜೆ ನಡೆದವು.
ದೇವಸ್ಥಾನಕ್ಕೆ ಹೊಂದಿಕೊಂಡೇ ಹರಿಯುವ ಹಳ್ಳದತ್ತ ಜಮಾಯಿಸಿದ್ದ ಮಹಿಳಾ ಭಕ್ತರು, ತಂದಿದ್ದ ನೈವೇದ್ಯವನ್ನು
ಹಳ್ಳದ ನೀರಿಗೆ ಬಾಗೀನ ರೂಪದಲ್ಲಿ ಹರಿಬಿಟ್ಟು ಭಕ್ತಿ ಸಮರ್ಪಿಸಿದರು. ಸಕಾಲಕ್ಕೆ ಮಳೆ ಬೆಳೆಯಾಗಿ ರೈತರು ಸಂತಸದಿಂದ ಇರಲಿ ಎಂದು ಪ್ರಾರ್ಥಿಸಿದರು.
ನೂರು ಮನೆಯ ಅಡುಗೆ ಭಕ್ತರಿಗೆ ಪ್ರಸಾದ: ಜಾತ್ರೆಗೆಂದು ಮನೆಯಿಂದ ತರಲಾಗಿದ್ದ ನೂರಾರು ಜನ ಭಕ್ತರ ರೊಟ್ಟಿ ಬುತ್ತಿ ಹಾಗೂ ನೈವೇದ್ಯವೇ ಇಲ್ಲಿ ಪ್ರಸಾದವಾಗಿ ಬಡಿಸಿದ್ದು ವಿಶೇಷವಾಗಿತ್ತು. ಅರಿಶಿಣ ಮಿಶ್ರಣದ ಹಳದಿ ರೊಟ್ಟಿಗಳು, ಬಿಳಿ ಜೋಳದ ರೊಟ್ಟಿ, ವಿವಿಧ ಬಗೆಯ ಅನ್ನ, ವಿವಿಧ ರೀತಿಯ ತರಕಾರಿ ಪಲ್ಲೆ, ಖಾರದ ಹಿಂಡಿ, ಗೋಧಿಯಿಂದ ಸಿದ್ದಪಡಿಸಲಾದ ಸಿಹಿ ಸಜ್ಜಕ, ರೊಟ್ಟಿ ಮತ್ತು ಬೆಲ್ಲದಿಂದ ಮಾಡಿದ ಮಾಲ್ದಿ ಸ್ವೀಟ್, ಹೀಗೆ ಭಕ್ತರೆಲ್ಲರ ಅಡುಗೆಯನ್ನು ಮಿಶ್ರಣ ಮಾಡಿ ದಾಸೋಹ ಮಾಡಿದ್ದು ಜಾತ್ರೆಯಲ್ಲಿನ ವಿಶೇಷವಾಗಿತ್ತು.
ದೊಡ್ಡಯ್ಯಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಅಶೋಕ ಸಗರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿನಾಥ ಇಂದೂರ, ಕಮರವಾಡಿ ಗ್ರಾಪಂ ಅಧ್ಯಕ್ಷ ಮರಿಗೌಡ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಮುಖಂಡರಾದ ಸಿದ್ದಣ್ಣಗೌಡ ಪೊಲೀಸ್ ಪಾಟೀಲ, ಪಂಡಿತಪ್ಪಗೌಡ ಮಾಲಿ ಪಾಟೀಲ, ಶ್ರೀಮಂತ ಸಾಹು, ಶಿವರಾಜ ಪಾಟೀಲ, ಭೀಮಶಾ ಜಿರೊಳ್ಳಿ, ರವಿ ನಾಯಕ, ಮಲ್ಲಿನಾಥ ಸಾಹು, ಹಣಮಂತರಾಯ ನಾಯಕೋಡಿ, ಬಸವರಾಜ ಹಡಪದ, ಶರಣಪ್ಪ ಸಿರೂರ, ಹಣಮಂತ ಮಡಿವಾಳ, ವೀರಣ್ಣ ರಾವೂರಕರ ಹಾಗೂ ದೌಲತರಾವ ಚಿತ್ತಾಪುರಕರ ಅವರನ್ನು ಧರ್ಮ ಸಭೆಯಲ್ಲಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.