ಶರಣರು ಮಾನವತಾವಾದದ ಪ್ರತಿಪಾದಕರು
Team Udayavani, Jul 18, 2017, 12:37 PM IST
ಕಲಬುರಗಿ: ಜಾತಿ, ಮತ. ಪಂಗಡ ಹಾಗೂ ಮೌಡ್ಯಗಳನ್ನು ತೊರೆದು ಕಾಯಕನಿಷ್ಠೆಯಿಂದ ದುಡಿದು ಅನುಭಾವದಿಂದ ನಿಜದ ಬದುಕು
ಅರಿಯಬೇಕೆನ್ನುವ ಮಾನವತಾವಾದವನ್ನು 12ನೇ ಶತಮಾನದಲ್ಲಿ ಶರಣರು ಬಿತ್ತಿದ್ದಾರೆ ಎಂದು ಹಿರಿಯ ಉಪನ್ಯಾಸಕ ಚಂದ್ರಕಾಂತ ನಿರಗುಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನ್ಯೂಮಾಕಾ ಲೇಔಟ್ ಬಡಾವಣೆಯಲ್ಲಿ ಈರಣ್ಣ ಬೆಣ್ಣೆಶಿರೂರ್ ಮನೆಯಲ್ಲಿ ಜ್ಞಾನಿ ಶ್ರೀಗುರು ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಶರಣ ಹಡಪದ ಅಪ್ಪಣ್ಣನವರ 883ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು
ಮಾತನಾಡಿದರು. ಇವತ್ತು ಆಳುವವರು ತಮ್ಮ ಇಚ್ಛೆಗೆ ಅನುಸಾರವಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಸ್ವಾರ್ಥ, ಪಟ್ಟಭದ್ರ ಹಿತಾಸಕ್ತಿಗಳು ಇಲ್ಲದ ಮೌಡ್ಯತೆ, ಕಂದಾಚಾರಗಳಲ್ಲಿ ನಮ್ಮನ್ನು ಸಿಲುಕಿಸಿ ಭಯದಿಂದ ಬದುಕುವ ಅನಿವಾರ್ಯತೆಗೆ
ಕೊಂಡೊಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹಡಪದ ಸಮಾಜದ ಮುಖಂಡರಾದ ಶಾಂತಪ್ಪ ಕಟ್ಟಿಮನಿ ಕಮಲಾಪುರ ಮಾತನಾಡಿ, ಹಡಪದ ಅಪ್ಪಣ್ಣನವರ ಉತ್ತರಾಧಿಕಾರಿಗಳಾದ ನಾವು ಇಂದು ನಗರ ಹಳ್ಳಿಗಳಲ್ಲಿ ಹರಿದು ಹಂಚಿಹೋಗಿ ಅಸಂಘಟಿತರಾಗಿದ್ದೇವೆ. ಇದು ನಮ್ಮ ಸಮಾಜ
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿಯುವಿಕೆಗೆ ಮುಖ್ಯ ಕಾರಣ ಎಂದರು. ವಕೀಲ ರಾಜಕುಮಾರ ಹಲ್ಲೂರ ಮಾತನಾಡಿ, ಜಾತಿ, ಧರ್ಮಗಳು ಇಂದು ನಮ್ಮ ದೇಶದ ಅಭಿವೃದ್ಧಿಗೆ ತೊಡಕಾಗಿ ಕಾಡುತ್ತಿವೆ ಎಂದು ಹೇಳಿದರು. ಮಲ್ಲಿನಾಥ ಹನ್ನೂರ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷರಾದ ಎಸ್.ಕೆ ತೆಲ್ಲೂರ, ನಾಗಭೂಷಣ್, ಶಿವಕಾಂತ ಸೊನ್ನ, ಪ್ರಕಾಶ ಕಟ್ಟಿಮನಿ, ಈರಣ್ಣ ಬೆಣ್ಣೆಶಿರೂರ, ಶಾಂತಪ್ಪ ಕೋಡ್ಲಿ, ಚಂದ್ರಕಾಂತ ಮಾದನ ಹಿಪ್ಪರಗಿ, ರಾಜು ಹನ್ನೂರ, ಮಹಾರುದ್ರಪ್ಪ ಮರತೂರ, ಭೀಮರಾವ್ ಹೆಮನೂರ, ಮಯೂರ ಹೆಮನೂರ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.