ಅನುಮಾನವಾಗೇ ಉಳಿದಿದೆ ಶಾಸ್ತ್ರೀಜಿ ಸಾವು: ಪರಮೇಶ್ವರ್
Team Udayavani, Jan 12, 2018, 10:24 AM IST
ಕಲಬುರಗಿ: ತಾಷ್ಕೆಂಟ್ ಒಪ್ಪಂದಕ್ಕೆಂದು ರಷ್ಯಾಕ್ಕೆ ಹೋಗಿದ್ದಾಗ ಜ.10ರಂದು ಒಪ್ಪಂದಕ್ಕೆ ಸಹಿ ಹಾಕಿ ರಾತ್ರಿ ಭಾರತದಲ್ಲಿರುವ ತಮ್ಮ ಪತ್ನಿಯೊಂದಿಗೆ ಮಾತನಾಡಿ ನಡೆದ ಘಟನೆ ಕುರಿತು ಹೇಳಿ ಮಲಗಿದವರು ಪುನಃ ಬೆಳಗ್ಗೆ ಏಳಲೇ ಇಲ್ಲ. ಹಾಗೆ ಅವರು ಸಾವನ್ನಪ್ಪಿರುವುದು ಇನ್ನು ಅನುಮಾನದಲ್ಲಿಯೇ ಇದೆ ಎಂದು ಕೆಪಿಸಿಸಿ (ಐ) ಅಧ್ಯಕ್ಷ ಡಾ| ಜಿ.ಪರಮೇಶ್ವರ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ. ಲಾಲಬಹಾದ್ದೂರ ಶಾಸ್ತ್ರೀ ಅವರ ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅವರು ಸಹಜವಾಗಿಯೇ ಸತ್ತರೋ ಅಥವಾ ಅವರನ್ನು ಯಾರಾದರೂ ಏನಾದರೂ ಮಾಡಿದರೆ ಗೊತ್ತಾಗಿಲ್ಲ. ಆದರೆ, ಅವರು ಅನುಸರಿಸಿದ ಜೀವನ ಕ್ರಮ ಇಡೀ ಜಗತ್ತಿಗೆ ಮಾದರಿಯಾಗಿದೆ. ಜೈ ಜವಾನ್ ಮತ್ತು ಜೈ ಕಿಸಾನ ಎನ್ನುವ ಅವರ ಘೋಷ್ಯವಾಕ್ಯ ನಿಜಕ್ಕೂ ಅವರ ಆಲೋಚನೆಗಳನ್ನು ತೋರಿಸುತ್ತದೆ ಎಂದು ಹೇಳಿದರು.
ಶಾಸ್ತ್ರೀಜಿ ನೈತಿಕತೆ, ಪ್ರಾಮಾಣಿಕತೆ ಮತ್ತು ಸರಳ ರಾಜಕೀಯ ನಡೆಯುವಕರಿಗೆ ಮಾದರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಹಿರಿಯರು ಯುವಕರಿಗೆ ಕಲಿಸಿಕೊಡಬೇಕು ಎಂದರು.
ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಹಿಂದೂತ್ವದ ಹೆಸರಿನಲ್ಲಿ ಒಂದು ಸಮುದಾಯದ ಒಲೈಕೆ ಮಾಡಲಾಗುತ್ತಿದೆ. ಆ. 14ರಂದು ಪಾಕಿಸ್ತಾನ ಸ್ವತಂತ್ರ್ಯಗೊಂಡಿತು. ಧ್ವಜಾರೋಹಣ ಮಾಡಿ ಇಸ್ಲಾಮಿಕ್ ರಾಷ್ಟ್ರದ ಘೋಷಣೆ ಮಾಡಲಾಗುತ್ತದೆ. ಆದರೆ, 15ರಂದು ನಮ್ಮಲ್ಲಿ ಧ್ವಜಾರೋಹಣ ಮಾಡಿ ಭಾರತ ರಾಷ್ಟ್ರ ಅಂತೇವೆಯೇ ವಿನಹಃ ಹಿಂದೂರಾಷ್ಟ್ರ ಅನ್ನುವುದಿಲ್ಲ. ಅಷ್ಟರಮಟ್ಟಿಗೆ ನಾವು ಜಾತ್ಯತೀತವಾಗಿ ಎಲ್ಲ ಸಮುದಾಯಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಈ ಬಿಜೆಪಿಯವರು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಇದನ್ನು ಕಾಂಗ್ರೆಸ್ ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಲಾಲ ಬಹಾದ್ದೂರ ಶರ್ಮಾ ಹೆಸರಿದ್ದ ಅವರು ತಮ್ಮ ಜನಾಂಗದ ಹೆಸರಿನಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲದೆ ಲಾಲಬಹಾದ್ದೂರ ಶಾಸ್ತ್ರೀ ಎಂದು ಹೆಸರು ಬದಲಿಸಿಕೊಂಡದ್ದು ನೈತಿಕ ಪ್ರಜ್ಞೆಯ ಉದಾಹರಣೆ. ಅಂತಹ ಸಾಕಷ್ಟು ಉದಾಹರಣೆಗಳಿಗೆ ಅವರು ಸಾಕ್ಷಿ ಪ್ರಜ್ಞೆಯಾಗಿ
ನಿಲ್ಲುತ್ತಾರೆ. ಅವರ ಪ್ರಾಮಾಣಿಕತೆ ಅವರು ನಿರ್ವಹಿಸಿದ ಹುದ್ದೆಗಿಂತ ಎತ್ತರಕ್ಕೆ ಬೆಳೆದಿದೆ. ಅದು ಇಂದಿನಯುವಕರಿಗೆ ಮೈಲುಗಲ್ಲು ಎಂದರು.
ಮಾಜಿ ಕೇಂದ್ರ ಸಚಿವ ಕೆ.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶಾಸಕರಾದ ಬಿ.ಆರ್. ಪಾಟೀಲ, ಅಜಯಸಿಂಗ್, ಡಾ| ಉಮೇಶ ಜಾಧವ್, ಇಕ್ಬಾಲ್ ಅಹಮದ್ ಸರಡಗಿ ಹಾಗೂ ಪಕ್ಷದ ಯಾದಗಿರಿ, ಬೀದರ ಅಧ್ಯಕ್ಷರು, ಕಲಬುರಗಿ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಪಂ ಸದಸ್ಯರು, ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು ಇದ್ದರು.
ನಾಚಿಕೆಗೇಡಿನ ಸಂಗತಿ ನಮ್ಮದು ಜಾತ್ಯತೀತ ಮತ್ತು ಲೋಕತಂತ್ರ ದೇಶ. ಜನರ ಅಗತ್ಯಕ್ಕೆ ತಕ್ಕಂತೆ ನ್ಯಾಯಯುತವಾಗಿ ಸಂವಿಧಾನವನ್ನು ಹಲವಾರು ಬಾರಿ ತಿದ್ದುಪಡಿ ಮಾಡಿ ಅನುಕೂಲ ಮಾಡಿಕೊಡಲಾಗಿದೆ.
ಕಲಂಗೆ 371ಕ್ಕೆ (ಎ)ನಿಂದ (ಜೆ) ವರೆಗೆ ತಿದ್ದುಪಡಿ ಮಾಡಲಾಗಿದೆ. ಅದನ್ನು ಬಿಟ್ಟು ಒಬ್ಬ ಕೇಂದ್ರ ಸಚಿವರು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುತ್ತಾರೆ. ಅದಕ್ಕಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಇದೆಂಥಹ ಮಾತು. ಅಲ್ಲದೇ ಅಂಬೇಡ್ಕರ್ ಸ್ಮೃತಿ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಡಾ| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.