ಶಿಥಿಲಾವಸ್ಥೆ ಕಚೇರಿ ಸ್ವತ್ಛಗೊಳಿಸಿದ ತಹಶೀಲ್ದಾರ್
ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂ. ಅನುದಾನ ದೊರಕಿಸುವುದು ಮುಖ್ಯವಾಗಿದೆ.
Team Udayavani, Feb 15, 2021, 4:44 PM IST
ಕಲಬುರಗಿ: ಶಿಥಿಲಾವಸ್ಥೆಯ 180 ವರ್ಷಗಳ ಹಿಂದಿನ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ರಾಶಿಗಟ್ಟಲೇ ಇದ್ದ ಕಸವನ್ನು ತಹಶೀಲ್ದಾರರೇ ಮುಂದೆ ನಿಂತು ಸಿಬ್ಬಂದಿಯೊಂದಿಗೆ ಸ್ವತ್ಛಗೊಳಿಸಿದರು. ನಗರದ ಹೃದಯ ಭಾಗ ಸೂಪರ್ ಮಾರ್ಕೆಟ್ ದಲ್ಲಿರುವ ಕಚೇರಿ ಬಳಿ ವಿಶಾಲವಾದ ಜಾಗವಿದೆ.
ಹಳೆಯ ಕಟ್ಟಡ ಹಾಗೂ ಸೂಕ್ತ ನಿರ್ವಹಣೆ ಇಲ್ಲದಿದ್ದಕ್ಕೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿತ್ತು. ಈಚೆಗೆ ಕಟ್ಟಡ ಮೇಲ್ಛಾವಣಿ ಮಹಿಳಾ ಸಿಬ್ಬಂದಿ ಮೇಲೆ ಕುಸಿದು ಬಿದ್ದಿತ್ತು. ಕಳೆದ ಫೆ. 8ರಂದು ಶಿಗ್ಗಾಂವಿಯಿಂದ ವರ್ಗಾವಣೆಯಾಗಿ ಕಲಬುರಗಿ ತಹಶೀಲ್ದಾರ್ ಆಗಿ ಕಾರ್ಯಭಾರ ವಹಿಸಿಕೊಂಡಿರುವ ಪ್ರಕಾಶ ಕುದರಿ ಕಚೇರಿ ಹಾಗೂ ಆವರಣದಲ್ಲಿನ ಕಸದ ರಾಶಿ ಹಾಗೂ ಯಾವುದೇ ಸಂದರ್ಭದಲ್ಲಿ ಆಪತ್ತು ಎದುರಾಗುವುದನ್ನು ಅರಿತು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಕಚೇರಿ ಆವರಣದಲ್ಲೇ ತಹಶೀಲ್ದಾರ್ ವಸತಿಗೃಹವಿದೆ. ಆದರೆ ಏಳೆಂಟು ವರ್ಷಗಳಿಂದ ಬಳಕೆ ಮಾಡದಿದ್ದಕ್ಕೆ ಪಾಳು ಬಿದ್ದಿದೆ. ಈಗ ಗೃಹವನ್ನು ಸ್ವತ್ಛಗೊಳಿಸಿ ಬಳಕೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬರೀ ಕಚೇರಿ ಆವರಣ ಹಾಗೂ ಕಟ್ಟಡ ಸcತ್ಛಗೊಳಿಸಿದರೆ ಸಾಲದು. ಬಹಳ ದಿನಗಳಿಂದ ಇತ್ಯರ್ಥಗೊಳ್ಳದೇ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವುದು, ಒಟ್ಟಾರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಶ್ರಮಿಸಲಾಗುವುದು ಎಂದು ತಹಶೀಲ್ದಾರ್ ಕುದುರೆ ಈ ಸಂದರ್ಭದಲ್ಲಿ ತಿಳಿಸಿದರು.
ಕಚೇರಿ ಬಾಳಿಕೆ ಕುರಿತಾಗಿ ಲೋಕೋಪಯೋಗಿ ಇಲಾಖೆಯಿಂದ ವರದಿ ಪಡೆದು ನೆಲಸಮ ಮಾಡುವ ಸಂಬಂಧ ಇಲಾಖೆ ಹಿರಿಯ ಅ ಧಿಕಾರಿಗಳೊಂದಿಗೆ
ಹಾಗೂ ಜನಪ್ರತಿನಿ ಗಳೊಂದಿಗೆ ಚರ್ಚಿಸಲಾಗುವುದು. ನೆಲಸಮಗೊಳಿಸಲು ಪ್ರಾಚ್ಯ ವಸ್ತು ಇಲಾಖೆ ಅನುಮತಿ ನೀಡುತ್ತದೆಯೋ ಎನ್ನುವುದನ್ನು ಕಾಯ್ದು ನೋಡಬೇಕು. ತಹಶೀಲ್ದಾರ್ ಕಚೇರಿಯ ಮಿನಿ ವಿಧಾನಸೌಧ ಬೇರೆಡೆ ಹೊಸದಾಗಿ ನಿರ್ಮಿಸಲು ಮೂರ್ನಾಲ್ಕು ಕಡೆ ಸ್ಥಳ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದ ಎನ್‌ಸಿಸಿ ಕಚೇರಿ ಸ್ಥಳಾಂತರ ಆಗುತ್ತಿರುವುದರಿಂದ ಈ ಸ್ಥಳದಲ್ಲೇ ತಹಶೀಲ್ದಾರ್ ಕಚೇರಿ ನಿರ್ಮಾಣವಾಗಬೇಕು. ಇಲ್ಲವೇ ಈಗಿರುವ ತಹಶೀಲ್ದಾರ್ ಕಚೇರಿ ಆವರಣದಲ್ಲೇ ಕಚೇರಿ ಸ್ಥಾಪನೆಯಾದರೆ ಸೂಕ್ತ ಎನ್ನುವುದು ಸಾರ್ವಜನಿಕರ ಹಾಗೂ ತಮ್ಮ ಅಭಿಪ್ರಾಯವಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಮಿನಿ ವಿಧಾನಸೌಧಕ್ಕೆ ಜಾಗ ಶೋಧ
ಕಲಬುರಗಿ ತಹಶೀಲ್ದಾರ್ ಕಚೇರಿ ಒಳಗೊಂಡ ಮಿನಿ ವಿಧಾನಸೌಧ ನಿರ್ಮಾಣದ ಸ್ಥಳ ಶೋಧನೆ ಕಾರ್ಯ ನಡೆದಿದೆ. ಈಗಿರುವ ಸ್ಥಳದಲ್ಲೇ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸಿ ಕಲಬುರಗಿ ಪಾಲಿಕೆ ಕಚೇರಿಯಂತೆ ಆಧುನಿಕ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಿಸಲು ನೀಲಿ ನಕ್ಷೆ ರೂಪಿಸಲಾಗುತ್ತಿದೆ. ಬಸ್ ಡಿಪೋಗಳನ್ನು ನಗರಾಚೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಬಸ್ ಡಿಪೋದ ಸ್ಥಳದಲ್ಲಿ ಇಲ್ಲವೇ ಡಿಸಿ ಕಚೇರಿ ಪಕ್ಕ ಸ್ಥಳಾಂತರಗೊಳ್ಳುವ ಎನ್‌ಸಿಸಿ ಕಚೇರಿ ಸ್ಥಳದಲ್ಲಿ ಮಿನಿ ವಿಧಾನಸೌಧ ಕಚೇರಿ ಸ್ಥಾಪನೆಗಾಗಿ ಜಾಗ ಶೋಧಿಸಲಾಗಿದೆ. ಇವುಗಳಲ್ಲಿ ಯಾವುದು ಸೂಕ್ತ ಎನ್ನುವ ಕುರಿತು ಚರ್ಚೆ ನಡೆದಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂ. ಅನುದಾನ ದೊರಕಿಸುವುದು ಮುಖ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.