ಪ್ರತಿ ತಿಂಗಳು ಗ್ರಾಹಕರ ಕುಂದುಕೊರತೆ ಸಭೆ ನಡೆಸಿ
Team Udayavani, Feb 12, 2019, 8:11 AM IST
ಕಲಬುರಗಿ: ಗ್ರಾಹಕರ ಹಾಗೂ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಜೆಸ್ಕಾಂ ಅಧಿಕಾರಿಗಳು ಪತ್ರಿ ತಿಂಗಳಿಗೊಮ್ಮೆ ಗ್ರಾಹಕರ ಕೊಂದು ಕೊರತೆ ಸಭೆ ನಡೆಸುವಂತೆ ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ ಮೀನಾ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಲಬುರಗಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ 2017-18ನೇ ಸಾಲಿನ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ 2019-20ನೇ ಅವಧಿಯ ಕಂದಾಯ ಬೇಡಿಕೆ ಮತ್ತು ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ತಿಂಗಳು ಕೈಗೊಂಡ ಗ್ರಾಹಕರ ಸಭೆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಬಹು ಮುಖ್ಯವಾಗಿ ನೀರು ಸರಬರಾಜು ಮಂಡಳಿಯಿಂದ ಜೆಸ್ಕಾಂಗೆ ಬರಬೇಕಾಗಿರುವ 2 ಕೋಟಿ ರೂ.ಗಳು ಬಾಕಿ ಹಣವನ್ನು ಜೆಸ್ಕಾಂ ಅಧಿಕಾರಿಗಳು ಕೂಡಲೇ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಈಗ ಜೆಸ್ಕಾಂ ಸೇರಿದಂತೆ ಎರಡು ಕಡೆ ಗ್ರಾಹಕರ ಅವಹಾಲು ಅಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರು ಕಂಪನಿಗಳ ಸಭೆ ನಡೆಸಿದ ಬಳಿಕ ಅಯೋಗ ಸಭೆ ನಡೆಸಿ ದರ ಪರಿಷ್ಕರಣೆ ಬಗ್ಗೆ ತೀರ್ಮಾನ ಕೈಗೊಂಡು ಸೂಕ್ತ ಆದೇಶವಿರುವ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್. ರಾಗಪ್ರೀಯ ಮಾತನಾಡಿ, ಜೆಸ್ಕಾಂನಲ್ಲಿ 2019-20ನೇ ಸಾಲಿಗಾಗಿ ನಿರೀಕ್ಷಿಸುತ್ತಿರುವ 968.41 ಕೋಟಿ ರೂ.ಗಳ ಕಂದಾಯ ಕೊರತೆ ಸರಿಪಡಿಸಲು ವಿದ್ಯಚ್ಛಕ್ತಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಾವರಿ ಪಂಪ್‌ಸೆಟ್‌ಗಳು ಹಾಗೂ ಐಟಿ ಇಂಡಸ್ಟ್ರೀಗಳ ಗ್ರಾಹಕರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಗ್ರಾಹಕರಿಂದ ಪ್ರತಿ ಯೂನಿಟ್‌ಗೆ 98 ಪೈಸೆ ದರ ಹೆಚ್ಚಳ, ನೀರಾವರಿ ಪಂಪ್‌ಸೆಟ್‌ಗಳಿಂದ 1.35 ರೂ., ಐಟಿ ಇಂಡಸ್ಟ್ರೀಗಳಿಂದ 85 ಪೈಸೆ ದರಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಗ್ರಾಹಕರ ಸ್ನೇಹಿ ಉಪಕ್ರಮಗಳು, ಸುಧಾರಣೆ ಕೆಲಸಗಳು ಹಾಗೂ ಗ್ರಾಹಕರಿಗೆ ಒದಗಿಸುವ ಸೇವೆಗಳ ಗುಣಮಟ್ಟ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹಾನಿ ತಡೆಯಲು ಅವಶ್ಯಕ ಕಡೆಗಳಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಸಲಾಗಿದೆ. ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯಡಿಯಲ್ಲಿ 158 ಸರ್ಕಾರಿ ಮತ್ತು ನಿಗಮದ ಕಚೇರಿಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಘಟಕ ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 11.75 ಲಕ್ಷ ಎಲ್.ಇ.ಡಿ. ದೀಪಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಪರಿವರ್ತಕಗಳ ದುರಸ್ತಿಗಾಗಿ 28 ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ವಿದ್ಯುಚ್ಛಕ್ತಿ ದರ ಹೆಚ್ಚಳ ಮಾಡಬಾರದು. ನಿರಂತರ ಜ್ಯೋತಿ ಯೋಜನೆ ಸರಿಯಾದ ರೀತಿಯಲ್ಲಿ ವಿದ್ಯುಚ್ಛಕ್ತಿ ಗ್ರಾಹಕರಿಗೆ ತಲುಪುತ್ತಿಲ್ಲ. ಜೆಸ್ಕಾಂನಿಂದ ಉಚಿತ ಸಹಾಯವಾಣಿ ಸಂಖ್ಯೆಗೆ ವಿದ್ಯುತ್ ನಿಲುಗಡೆಯಾದಾಗ ಕರೆ ಮಾಡಿದ್ದಲ್ಲಿ ಯಾರು ಸ್ವೀಕರಿಸುವುದಿಲ್ಲ. ಬೇರೆ ಬೇರೆ ಅನ್ಯ ಮಾರ್ಗಗಳಿಂದ ವಿದ್ಯುತ್ ಸೋರಿಕೆ ಆಗುವುದನ್ನು ಜೆಸ್ಕಾಂ ಅಧಿಕಾರಿಗಳು ತಡೆಯಬೇಕು. ವಿದ್ಯುತ್ ವ್ಯತ್ಯಯದ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೆಟ್ಟು ಹೋಗಿರುವ ಟ್ರಾನ್ಸ್‌ಫಾರ್ಮರ್ ಬದಲಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಚ್.ಡಿ. ಅರುಣಕುಮಾರ, ಎಚ್.ಎಂ. ಮಂಜುನಾಥ, ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಹೀರಾಸಿಂಗ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಡಾ| ಪಾಂಡುರಂಗ ಬಿ. ನಾಯಕ, ಜಿ. ಕಲ್ಪನಾ, ಸಲಹಾ ಸಮಿತಿ ಸದಸ್ಯ ದೀಪಕ ಗಾಲಾ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರಾದ ಅಪ್ಪಾರಾವ್, ಜಗದೀಶ, ಶಾಂತಗೌಡರು, ಭೀಮ ಶೇಖರ, ಬಸ್ವಂತರಾವ, ಸಿದ್ದು ಸುಬೇದಾರ, ಕಲ್ಯಾಣರಾವ, ಸುಭಾಷ ಚಂದ್ರ, ಉಮಾಪತಿ, ಚಂದ್ರಶೇಖರ ಅಹವಾಲು ಸಲ್ಲಿಸಿದರು.
ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ
ಬರಗಾಲದಿಂದ ಎಲ್ಲ ಪರಿಸ್ಥಿತಿ ಕೈ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಜೆಸ್ಕಾಂ ವಿದ್ಯುತ್ ದರ ಏರಿಕೆಗೆ ಸಲ್ಲಿಸಿರುವ ಪ್ರಸ್ತಾವನೆ ಅವೈಜ್ಞಾನಿಕವಾಗಿದೆ. ಜೆಸ್ಕಾಂ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಆಗುತ್ತಿರುವ ನಷ್ಟ ಸರಿದೂಗಿಸಿಕೊಳ್ಳಲು ಗ್ರಾಹಕರ ಮೇಲೆ ಹೊರೆ ಹೊರಿಸಲು ಮುಂದಾಗಿರುವುದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ದರ ಪರಿಷ್ಕರಣೆ ಮಾಡಬಾರದು. ಜತೆಗೆ ಕಂಪನಿ ಸಲ್ಲಿಸಿರುವ ಬೆಲೆ ಏರಿಕೆ ಬೇಡಿಕೆ ತಿರಸ್ಕರಿಸಬೇಕು ಎಂದು ವಿದ್ಯುಚ್ಛಕ್ತಿ ಆಯೋಗಕ್ಕೆ ರೈತರು-ಗ್ರಾಹಕರು ಅಹವಾಲು ಮಂಡಿಸಿದರು. ಅಧಿಕಾರಿಗಳು ಮಾಡುವ ತಪ್ಪನಿಂದಾಗಿ ಉಂಟಾಗುವ ಹಾನಿಯನ್ನು ಜನರ ಮೇಲೆ ಹಾಕಲು ಹೊರಟಂತಿದೆ. ಹೀಗಾಗಿ ದರ ಏರಿಸಲು ಅನುಮತಿ ನೀಡಬಾರದು ಎಂದು ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಆಯೋಗಕ್ಕೆ ಒತ್ತಾಯಿಸಿದರೆ ಎಚ್ಕೆಸಿಸಿಐ, ರೈಲ್ವೆ, ಎಫ್ಕೆಸಿಸಿಐ, ಕಾಸಿಯಾ, ಕೈಗಾರಿಕೋದ್ಯಮಿಗಳ ಸಂಘ, ರೈತರು ಹೀಗೆ ಹಲವು ತಮ್ಮ ಆಕ್ಷೇಪಣೆ ಸಲ್ಲಿಸಿ, ನಿರಂತರವಾಗಿ ಗುಣಮಟ್ಟದ ವಿದ್ಯುತ್ ನೀಡಲ್ಲ. ಗ್ರಾಹಕರ ದೂರುಗಳಿಗೆ ಸ್ಪಂದಿಸಲ್ಲ. ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಸ್ಪಂದಿಸಲ್ಲ. ಸೋರಿಕೆ ಹಾಗೂ ಕಳ್ಳತನ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಮೊದಲು ಸರಿಪಡಿಸುವಂತೆ ಆಗ್ರಹಿಸಲಾಯಿತು.
ಯೂನಿಟ್‌ಗೆ 98 ಪೈಸೆ ಹೆಚ್ಚಳಕ್ಕೆ ಕೋರಿಕೆ
ಸಭೆ ಆರಂಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್.ರಾಗಪ್ರೀಯ ಮಾತನಾಡಿ, ಜೆಸ್ಕಾಂನಲ್ಲಿ ನಿರೀಕ್ಷಿಸುತ್ತಿರುವ 968.41 ಕೋಟಿ ರೂ.ಗಳ ಕಂದಾಯ ಕೊರತೆ ಸರಿದೂಗಿಸಲು ನೀರಾವರಿ ಪಂಪ್‌ಸೆಟ್ ಹೊರತುಪಡಿಸಿ ಉಳಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 98 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಿ ಆದೇಶಿಸಬೇಕು ಎಂದು ಆಯೋಗಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.