ಉನ್ನತ ವ್ಯಾಸಂಗದ ಲಾಭ ಪಡೆಯಿರಿ
Team Udayavani, Mar 31, 2018, 11:55 AM IST
ಕಲಬುರಗಿ: ಗುರುಪಾದೇಶ್ವರ ಪದವಿ ಪೂರ್ವ ಕಾಲೇಜು ನೀಡುತ್ತಿರುವ ಸಿಇಟಿ ಮತ್ತು ನೀಟ್ ತರಬೇತಿ ಹಾಗೂ ಮಾರ್ಗದರ್ಶನದಿಂದ ಹೆಚ್ಚು ಅಂಕ ಪಡೆದು ಉಚಿತ ಸೀಟು ಪಡೆಯುವಂತೆ 2016ರಲ್ಲಿ ನೀಟ್ ಪರೀಕ್ಷೆಯಲ್ಲಿ ಅಂಗವಿಕಲ ಕೋಟಾದಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿ ಶಿವಾನಂದ ಸೊನಾವನೆ ಸಲಹೆ ನೀಡಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿನ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷಾರ್ಥಿಗಳನ್ನು ಕುರಿತು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಸತತವಾಗಿ ಓದಿದರೆ ಮಾತ್ರ ಮೆಡಿಕಲ್ ಸೀಟು ಪಡೆಯಲು ಸಾಧ್ಯ. ನನಗೆ ಮಾರ್ಗದರ್ಶನ ಮಾಡುತ್ತಿರುವ ಕಾಲೇಜಿನ ಸಂಸ್ಥಾಪಕ ಅಂಬಲಗಿ ಅವರ ಮಾರ್ಗದರ್ಶನ ಪಡೆದು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು, ವಿಶೇಷವಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೆರಳಬೇಕೆಂದು ಹೇಳಿದರು.
ಉದ್ಯಮಿ ಸುರೇಶ ಮಹಾಗಾಂವಕರ ಭಗವಾನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಸಂಸ್ಥೆ ವರದಾನವಾಗಿದೆ ಎಂದರು. ಉಪನ್ಯಾಸಕ ಶಿವಕುಮಾರ ಗೋಣಗಿಕರ ಮಹಾವೀರನ ಕುರಿತು ಉಪನ್ಯಾಸ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಎಂ.ಬಿ.ಅಂಬಲಗಿ ಮಾತನಾಡಿ, ಸಿಇಟಿ, ನೀಟ್ ತರಬೇತಿ ಪಡೆಯುತ್ತಿರುವವರಿಗೆ ಸಹಕರಿಸುವ ಭರವಸೆ ನೀಡಿದರು. ಸಂಸ್ಥೆಯಿಂದ ಶಿವಾನಂದ ಸೊನಾವನೆ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪವಿತ್ರರೆಡ್ಡಿ, ಉಪನ್ಯಾಸಕರಾದ ಶೃತಿ ಮಹಾಜನ, ರೂಪಾ ಸಣ್ಣಮನಿ, ಜಗದೇವಿ ಹಿರೇಮಠ, ಪಲ್ಲವಿ ಮಠ, ರಾಚಪ್ಪ ರೊಳೆ, ಕೈಲಾಸ ಹಳ್ಳಿಕರ, ಶಾಂತಯ್ಯ ಹಿರೇಮಠ ಹಾಗೂ ಇತರರಿದ್ದರು. ಭಾಗ್ಯಶ್ರೀ ನಿರೂಪಿಸಿ, ಸ್ವಾಗತಿಸಿದರು, ಶಾಂತಯ್ಯ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.