ತಾಂಡಾಗಳು ಸಾರಾಯಿ ಮುಕ್ತವಾಗಲಿ
Team Udayavani, Feb 5, 2018, 11:11 AM IST
ವಾಡಿ: ಕಳ್ಳಬಟ್ಟಿ ಸಾರಾಯಿ ದಂಧೆಯಿಂದ ತಾಂಡಾಗಳು ಮುಕ್ತವಾಗಬೇಕು. ಲಂಬಾಣಿಗರ ಆರ್ಥಿಕ ಪ್ರಗತಿಗಾಗಿ ಕಸೂತಿ ಕೇಂದ್ರ ತೆರೆದು, ಶಾಲೆಯುಕ್ತ ತಾಂಡಾಗಳನ್ನಾಗಿ ಪರಿವರ್ತಿಸಲು ಸರಕಾರ ಮುಂದಾಗಬೇಕು ಎಂದು ಬಂಜಾರಾ ಸೇವಾ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಶಿವರಾಮ ಪವಾರ ಒತ್ತಾಯಿಸಿದರು. ಪಟ್ಟಣದ ಸೇವಾಲಾಲ ನಗರದ ಭವನದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀಸೇವಾಲಾಲ ಮಹಾರಾಜರ 279ನೇ ಜಯಂತ್ಯುತ್ಸವದ
ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಬಂಜಾರಾ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸೇವಾಲಾಲ ಜಯಂತಿಯನ್ನು ಸರಕಾರಿ ಆಚರಣೆಯನ್ನಾಗಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಸ್ಮರಿಸಿದರು.
ಸಾಕಷ್ಟು ತಾಂಡಾಗಳಲ್ಲಿ ಲಂಬಾಣಿ ಜನರು ಉಪಜೀವನ ನಡೆಸಲಾಗದೆ ಪರದಾಡುತ್ತಿದ್ದಾರೆ. ಅವರಿಗಾಗಿ ಗುಡಿ ಕೈಗಾರಿಕೆ ತೆರೆಯಬೇಕು. ಕಸೂತಿ ಕೇಂದ್ರ ಆರಂಭಿಸಬೇಕು. ಒಕ್ಕಲುತನ ಸೌಲಭ್ಯ ಒದಗಿಸಿಕೊಡಬೇಕು. ಕಳೆದ
ಹಲವು ವರ್ಷಗಳಿಂದ ಬೇಡಿಕೆ ಎತ್ತುತ್ತಿದ್ದರೂ ಸರಕಾರಗಳು ಮಾತ್ರ ನಿರ್ಲಕ್ಷ ವಹಿಸಿವೆ ಎಂದು ದೂರಿದ ಶಿವರಾಮ ಪವಾರ, ವಾಡಿ ಪಟ್ಟಣದ ಹೊರ ವಲಯದ ಸೇವಾಲಾಲ ನಗರ ಸಮೀಪವಿರುವ ರೈಲು ನಿಲ್ದಾಣಕ್ಕೆ ಸೇವಾಲಾಲ
ನಿಲ್ದಾಣ ಎಂದು ನಾಮಕರಣ ಮಾಡಬೇಕು. ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ ಹೆಸರಿಡಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಫೆ. 15ರಂದು ಸೇವಾಲಾಲ ಮಹಾರಾಜರ 279ನೇ ಜಯಂತ್ಯುತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ಏರ್ಪಡಿಸಲಾಗಿದೆ. ವಿವಿಧ ತಾಂಡಾಗಳ ಲಂಬಾಣಿ ಜನರು ಪಾಲ್ಗೊಳ್ಳಲಿದ್ದಾರೆ. ಜಗದಂಬಾ ಮಾತೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಶ್ರೀ ಜೇಮಸಿಂಗ್ ಮಹಾರಾಜ, ಬಳಿರಾಮ ಮಹಾರಾಜ, ಶ್ರೀ ಸೋಮಶೇಖರ ಸ್ವಾಮೀಜಿ ಚಿತ್ತಾಪುರ, ಶ್ರೀ ಮುನೀಂದ್ರ ಸ್ವಾಮೀಜಿ, ಸೈಯ್ಯದ್ ನುಶ್ರತ್ ಶಹಾ ಚಿಸ್ತಿ, ಫಾದರ್ ಡೇವಿಡ್, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಉಮೇಶ ಜಾಧವ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಮಾಜಿ ಸಚಿವರಾದ ರೇವುನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಸುಭಾಶ ರಾಠೊಡ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಜಯಂತ್ಯುತ್ಸವದ ಅಧ್ಯಕ್ಷ ಗಣೇಶ ಚವ್ಹಾಣ, ಮುಖಂಡರಾದ ರವಿ ಚವ್ಹಾಣ, ರಮೇಶ ಕಾರಬಾರಿ, ರಾಮಚಂದ್ರ ರಾಠೊಡ, ವಿಠ್ಠಲ ನಾಯಕ, ನೀಲಸಿಂಗ ಚವ್ಹಾಣ, ಶಂಕರಸಿಂಗ್ ರಾಠೊಡ, ವಿಠuಲ ರಾಠೊಡ, ಚಂದ್ರಾಮ ಚವ್ಹಾಣ, ತುಕಾರಾಮ ರಾಠೊಡ, ಪ್ರಕಾಶ ನಾಯಕ, ಹಣಮಂತ ಚವ್ಹಾಣ ಸೇರಿದಂತೆ ವಿವಿಧ ತಾಂಡಾಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೋಹನ ಕಾರಬಾರಿ ಬಂಜಾರಾ ಜನಾಂಗ ಬೆಳೆದುಬಂದ ಸಂಕ್ಷಿಪ್ತ ಮಾಹಿತಿ ಓದಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.