ಹಿಂಬಡ್ತಿ ವಿರೋಧಿಸಿ ಶಿಕ್ಷಕರ ಪ್ರತಿಭಟನೆ
Team Udayavani, Jul 10, 2021, 4:58 PM IST
ಅಫಜಲಪುರ: ಪದವಿ, ಸ್ನಾತ್ತಕೋತ್ತರ ಪದವಿ ಮುಗಿಸಿದ ಶಿಕ್ಷಕರನ್ನು 1ರಿಂದ 5ನೇ ತರಗತಿ ವರೆಗೆ ಸಿಮಿತಗೊಳಿಸಿದ್ದನ್ನು ವಿರೋ ಧಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ಪಟ್ಟಣದ ಬಿಇಒ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಸಂಘದ ತಾಲೂಕು ಅಧ್ಯಕ್ಷ ಗಾಂ ಧಿ ದಫೇದಾರ ಮಾತನಾಡಿ, 2017ರಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳನ್ನು ಬದಲಾಯಿಸಿ 1ರಿಂದ 5ನೇ ತರಗತಿ ಹಾಗೂ 6ರಿಂದ 8ನೇ ತರಗತಿ ಎಂದು ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಎರಡು ಭಾಗ ಮಾಡಿದ್ದಾರೆ.
1ರಿಂದ 5ನೇ ತರಗತಿಗಳಿಗೆ ಬೋಧಿ ಸುವ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಹಾಗೂ 6ರಿಂದ 8ನೇ ತರಗತಿಗೆ ಪಾಠ ಮಾಡುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರೆಂದು ಕರೆಯಲಾಗಿತ್ತು. 2017ರ ಸಿ ಮತ್ತು ಆರ್ ಬದಲಾವಣೆಗೂ ಮುನ್ನ 1ರಿಂದ 8ನೇ ತರಗತಿಗಳಿಗೆ ಸುಮಾರು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರೇ ಕಾರ್ಯ ನಿರ್ವಹಿಸಿದ್ದರು.
ಎಲ್ಲ ಶಿಕ್ಷಕರು ಪದವಿ, ಸ್ನಾತಕ ಪದವಿ ಮುಗಿಸಿದ್ದಾರೆ. ಈಗ ಇವರಿಗೆಲ್ಲ ಹಿಂಬಡ್ತಿ ನೀಡಿದ್ದರಿಂದ ಬಹಳಷ್ಟು ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರ ಇನ್ನೊಮ್ಮೆ ಯೋಚಿಸಿ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ಮ್ಯಾಳೇಶಿ, ಗುರುಶಾಂತಯ್ಯ ಸ್ವಾಮಿ, ಶಿವಾನಂದ ಪೂಜಾರಿ, ಕಲಾವತಿ ಮುಜಗೊಂಡ, ಬಾಳಾಸಾಹೇಬ ಹೊಳೆಮನಿ, ಮಹೇಶ ಅಂಜುಟಗಿ, ಸಂಜು ಬಗಲಿ, ನವಿನಗೌಡ, ಮಹಾನಂದ ಸರಸಂಬಾ, ಜಗದೇಶ ಕಲಶೇಟ್ಟಿ, ವಿಠuಲ ಮಿರಗಿ, ರಹಿಂ ಸಿಪಾಯಿ, ಸಿದ್ದು ಮ್ಯಾಳೇಶಿ, ಸದಾಶಿವ ಹೊಸಮನಿ, ಭಿಮಣ್ಣ ಬದನಿಕಾಯಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.