ವೈಭವದ ಮರುಳಸಿದ್ದೇಶ್ವರ ಸ್ವಾಮಿ ತೈಲಾಭಿಷೇಕ


Team Udayavani, Apr 22, 2018, 4:12 PM IST

22-April-22.jpg

ಬಳ್ಳಾರಿ: ರಾಜ್ಯದ ಬೇರೆಲ್ಲೂ ಕಾಣಸಿಗದ ವಿಶಿಷ್ಟ ಆಚರಣೆಯಾದ ಶ್ರೀಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ ಪ್ರಸಿದ್ಧ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಶನಿವಾರ ವಿಜೃಂಭಣೆಯಿಂದ  ನಡೆಯಿತು. ಉಜ್ಜಯಿನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ರಾಜ ದೇಶೀಕೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ತೈಲಾಭಿಷೇಕಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಪ್ರತಿವರ್ಷ ವೈಶಾಖ ಶುದ್ಧ ಷಷ್ಠಿಯಂದು ನಡೆಯುವ ಶಿಖರ ತೈಲಾಭಿಷೇಕ ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿದೆ. ಜರಿಮಲೆಯ ಪಾಳೆಗಾರರ ವಂಶಸ್ಥರು ಪ್ರತಿವರ್ಷವೂ ಶಿಖರ ತೈಲಾಭಿಷೇಕಕ್ಕೆ ತೈಲ ಕಳಿಸುವುದು ಸಂಪ್ರದಾಯ. ಅದೇ ರೀತಿ ಈ ಬಾರಿಯೂ ಸಹ ಜರಿಮಲೆ ವಂಶಸ್ಥರು ಕಳುಹಿಸಿದ್ದ ತೈಲ ತುಂಬಿದ ಕುಂಭವನ್ನು ಹೊತ್ತು ತಂದಿದ್ದ ಭಕ್ತರನ್ನು ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಂಡು ದೇವಸ್ಥಾನದ ಪ್ರಾಂಗಣಕ್ಕೆ ಕರೆ ತರಲಾಯಿತು. ಕುಂಭವನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆಯಲಾಯಿತು.

ನಂತರ ಕುಂಭವನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಸಿ ತೈಲವನ್ನು ಗೋಪುರಕ್ಕೆ ಸುರಿಯಲಾಯಿತು. ಈ ಸಂದರ್ಭದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ನಂತರ ಭಕ್ತರು ತಂದ ತೈಲವನ್ನು ಶಿಖರಕ್ಕೆ ಎರೆಯಲಾಯಿತು. ತಮ್ಮ ಬೇಡಿಕೆಗಳು ಈಡೇರಿದಲ್ಲಿ ಸ್ವಾಮಿಯ ಶಿಖರಕ್ಕೆ ತೈಲ ಎರೆಯುವುದಾಗಿ ಭಕ್ತರು ಹರಕೆ ಹೊತ್ತಿರುತ್ತಾರೆ. ಬೇಡಿಕೆ ಈಡೇರಿದ ಸಾವಿರಾರು ಭಕ್ತ ಸಮೂಹ ಕಾಣಿಕೆಯಾಗಿ ಅರ್ಪಿಸಿದ ತೈಲದಿಂದ ಗೋಪುರಕ್ಕೆ ಮಜ್ಜನ ಮಾಡಲಾಯಿತು.

ನೆರೆದ ಭಕ್ತ ಸಮೂಹ ಬಾಳೆಹಣ್ಣನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ನಾಡಿನ ಅನೇಕ ಮಠಾಧೀಶರು, ಶಿವಾಚಾರ್ಯರು ಉಪಸ್ಥಿತರಿದ್ದರು. ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಎಣ್ಣೆಯ ಜಿಡ್ಡಿನಂಶದಿಂದ ದೇವಸ್ಥಾನದ ಶಿಲಾಗೋಪುರ ಶಿಥಿಲಗೊಳ್ಳದೆ ಸುರಕ್ಷಿತವಾಗಿರುತ್ತದೆ ಎಂಬ ವೈಜ್ಞಾನಿಕ ಕಾರಣವೂ ಈ ಆಚರಣೆಯ ಹಿಂದಿದೆ. ಬೆಳಗ್ಗೆಯಿಂದಲೇ ರಾಜ್ಯ ಹೊರರಾಜ್ಯಗಳ ಭಕ್ತರು ದೇವಾಲಯಕ್ಕೆ ಆಗಮಿಸಿ ಮರುಳಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರಲ್ಲದೆ ಜಗದ್ಗುರು ಶ್ರೀಸಿದ್ದಲಿಂಗ ರಾಜ ದೇಶೀಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1-jagga

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.