ಸಮಾಜ ಸಮೃದ್ಧಿ ಮಠಗಳ ಗುರಿ
Team Udayavani, Mar 24, 2017, 3:50 PM IST
ಜೇವರ್ಗಿ: ಅನ್ನ ದಾಸೋಹ, ಶಿಕ್ಷಣ ದಾಸೋಹ, ಧರ್ಮ ದಾಸೋಹ ಎನ್ನುವ ತ್ರಿವಿಧ ದಾಸೋಹಗಳ ಮೂಲಕ ಸಮಾಜವನ್ನು ಸರ್ವಾಂಗೀಣವಾಗಿ ಸಮೃದ್ಧಿಗೊಳಿಸುವುದೇ ವೀರಶೈವ ಧರ್ಮದ ಪ್ರತಿಯೊಂದು ಮಠದ ಪರಮ ಗುರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.
ತಾಲೂಕಿನ ಸುಕ್ಷೇತ್ರ ಶಖಾಪುರ ತಪೋವನಮಠದಲ್ಲಿ ಸದ್ಗುರು ವಿಶ್ವರಾಧ್ಯರ ಮತ್ತು ಮಾತೋಶ್ರೀ ಬಸವಾಂಬೆ ತಾಯಿಯವರ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೀರಶೈವ ಮಠಗಳಲ್ಲಿ ಜಾತಿ, ವರ್ಣ, ವರ್ಗಗಳ ಭೇದ ಎಣಿಸದೇ, ತಮ್ಮ ತಮ್ಮ ಶಕ್ತಾನುಸಾರ ಬಡ ಮಕ್ಕಳನ್ನು ಇರಿಸಿಕೊಂಡು ಅವರ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುವುದನ್ನು ಕಾಣುತ್ತೇವೆ. ಈ ಪರಂಪರೆಯಲ್ಲಿ ಶಖಾಪುರ ತಪೋವನ ಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಕೂಡ ಬರುತ್ತಾರೆ.
ಇವರು ನೂರಾರು ಬಡ ಮಕ್ಕಳನ್ನು ಮಠದಲ್ಲಿ ಇರಿಸಿಕೊಂಡು ಅವರಿಗೆ ಅನ್ನ ಆಶ್ರಯ, ವಿದ್ಯೆ, ಧರ್ಮ, ಸಂಸ್ಕಾರ ನೀಡಿ ದೇಶದ ಸತøಜೆಗಳನ್ನು ನಿರ್ಮಿಸುವ ಕೈಂಕರ್ಯ ನಿರಂತರವಾಗಿ ಮಾಡುತ್ತಿದ್ದಾರೆ ಎಂದರು. ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
ತಪೋವನ ಮಠದ ಪೀಠಾಧಿಧಿ ಪತಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಪ್ರಭಾವತಿ ಧರ್ಮಸಿಂಗ್ ಧರ್ಮಸಭೆ ಉದ್ಘಾಟಿಸಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಸಿದ್ಧಾಂತ ಶಿಖಾಮಣಿ ಪಾರಾಯಣ ಧ್ವನಿಸುರುಳಿ ಬಿಡುಗಡೆ, ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ತಪೋವನ ಕುಸುಮ ತತ್ವಪದ ಧ್ವನಿಸುರುಳಿ, ವಿಶ್ವ ವಚನಾಮೃತ ಗ್ರಂಥ ಬಿಡುಗಡೆ ಮಾಡಿದರು. ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಮಳಖೇಡದ ಹಜರತ್ ಸೈಯದ್ ಶಹಾ ಇದ್ದರು.
ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಗೈರು ಹಾಜರಾದ ಮಾಜಿ ಮುಖ್ಯಮಂತ್ರಿ ಎನ್ .ಧರ್ಮಸಿಂಗ್ ಅವರ ಪರವಾಗಿ ಅವರ ಧರ್ಮಪತ್ನಿ ಪ್ರಭಾವತಿ ಧರ್ಮಸಿಂಗ್ ಅವರಿಗೆ ವಿಶ್ವಬಸವಾಂಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 51 ಸಾಧಕರನ್ನು ಸನ್ಮಾನಿಸಲಾಯಿತು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲಯ್ಯ ಹಿರೇಮಠ, ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ಧೇವಾಡಗಿ, ದಂಡಪ್ಪ ಸಾಹು ಕುಳಗೇರಾ, ರೇವಣಸಿದ್ಧಪ್ಪ ಸಂಕಾಲಿ, ಮಹಾದೇವಪ್ಪ ದೇಸಾಯಿ, ರಮೇಶ ಬಾಬು ವಕೀಲ, ಮಲ್ಲಿನಾಥಗೌಡ ಯಲಗೋಡ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ ಹಾಗೂ ಮತ್ತಿತರರು ಭಾಗವಹಿಸಿದ್ದರು. ಮುಖಂಡ ರಾಜಶೇಖರ ಸೀರಿ ಸ್ವಾಗತಿಸಿದರು, ಪಾಳಾದ ಗುರುಮೂರ್ತಿ ಶಿವಾರ್ಚಾರು ನಿರೂಪಿಸಿ, ವಂದಿಸಿದರು.
ರಥೋತ್ಸವ: ಸದ್ಗುರು ವಿಶ್ವರಾಧ್ಯರ ಹಾಗೂ ಮತೋಶ್ರೀ ಬಸವಾಂಬೆ ತಾಯಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಅದ್ಧೂರಿ ಜೋಡು ರಥೋತ್ಸವ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.