ಜಿಲ್ಲೆಯಲ್ಲಿ ಇನ್ನೂ ಚೇತರಿಕೆ ಕಾಣದ ಬಟ್ಟೆ ವ್ಯಾಪಾರ
Team Udayavani, Jun 29, 2020, 8:47 AM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಲಾಕ್‌ಡೌನ್ ಸಡಿಲಿಕೆಗೊಂಡಿದ್ದರೂ ಬಟ್ಟೆ ವ್ಯಾಪಾರ ಚೇತರಿಸಿಕೊಂಡಿಲ್ಲ. ಜನತೆ ತಮ್ಮ ನಿತ್ಯದ ಕಾರ್ಯ, ವ್ಯಾಪಾರ-ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಬಟ್ಟೆ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.
ಮೇ-ಜೂನ್ ತಿಂಗಳು ಮದುವೆ ಸೀಜನ್ ಮತ್ತು ರಂಜಾನ್ ಹಬ್ಬಕ್ಕೆಂದು ದೊಡ್ಡ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಸಾಕಷ್ಟು ಪ್ರಮಾಣದ ಬಟ್ಟೆ ಸಂಗ್ರಹಿಸಿದ್ದರು. ಆದರೆ, ಸೀಜನ್ ಆರಂಭವಾಗುವ ವೇಳೆಗೆ ಲಾಕ್‌ಡೌನ್ ಜಾರಿ ಘೋಷಣೆಯಾಗಿ ಅಂಡಿಗಗಳು ಮುಚ್ಚುವಂತೆ ಆಗಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಮಾಡಿ ಒಂದು ತಿಂಗಳು ಕಳೆಯುತ್ತಿದ್ದರೂ ಬಟ್ಟೆ ವ್ಯಾಪಾರವಾಗುತ್ತಿಲ್ಲ. ಮೂರು ತಿಂಗಳು ಲಾಕ್ ಡೌನ್‌ದಿಂದಾಗಿ ಜನರ ಬಳಿ ಹಣವಿಲ್ಲದ ಕಾರಣ ಅಂಗಡಿಗಳತ್ತ ಸುಳಿಯುತ್ತಿಲ್ಲ. ಕಲಬುರಗಿ ಮಹಾನಗರದಲ್ಲೇ ಸಣ್ಣ ಪುಟ್ಟ ಮತ್ತು ದೊಡ್ಡ ಅಂಗಡಿಗಳು ಸೇರಿ ಅಂದಾಜು ನಾಲ್ಕು ಬಟ್ಟೆ ಅಂಗಡಿಗಳಿವೆ. ಸಣ್ಣ ಅಂಗಡಿಗಳಿಗೆ ಜನರು ಹೋಗುತ್ತಿದ್ದರೂ, ಅದು ಅಷ್ಟಕ್ಕಷ್ಟೆ. ದೊಡ್ಡ-ದೊಡ್ಡ ಅಂಗಡಿಗಳಿಗೆ ಬರುವವರ ಸಂಖ್ಯೆ ತೀರ ವಿರಾಳವಾಗಿದೆ.
ಕೆಲ ಕಡೆಗಳಲ್ಲಿ ಮದುವೆಗಳು ನಡೆಯುತ್ತಿದ್ದರೂ, ಸಮಾರಂಭದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ ಇರುವುದರಿಂದ ಬಟ್ಟೆ ಖರೀದಿಸುವ ಗೋಜಿಗೆ ಯಾರೂ ಗೊತ್ತಿಲ್ಲ. ಶಾಲಾ-ಕಾಲೇಜುಗಳ ಆರಂಭ ಇನ್ನೂ ನಿರ್ಧಾರವಾಗದೇ ಇರುವುದರಿಂದ ಮಕ್ಕಳ ಸಮವಸ್ತ್ರಗಳನ್ನು ಕೇಳುವರಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಕಳೆದ ಬಾರಿ ಮಳೆ ಚೆನ್ನಾಗಿ ಫಸಲು ಬಂದು ರೈತರು, ಜನರ ಕೈಯಲ್ಲಿ ಹಣವಿತ್ತು. ಮಧ್ಯಮ ವರ್ಗ, ಮೇಲ್ವರ್ಗದವರೂ ನೋಟ್‌ಬ್ಯಾನ್ ನಂತರದ ಮೂರು ವರ್ಷಗಳ ಬಳಿಕ ಸುಧಾರಣೆ ಹಂತಕ್ಕೆ ಬಂದಿದ್ದರು. ಹಲವರ ಕೈಯಲ್ಲಿ ಹಣವು ಹರಿದಾಡುತ್ತಿತ್ತು. ಹೀಗಾಗಿ ಈ ವರ್ಷ ಉತ್ತಮ ವ್ಯಾಪಾರವಾಗಲಿದೆ ಎಂಬ ಆಶಾಭಾವ ಜಾಸ್ತಿ ಇತ್ತು. ಮದುವೆ ಹಾಗೂ ರಂಜಾನ್ ಸೀಜನ್‌ಗೆಂದು ಮೊದಲೇ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಅಷ್ಟರಲ್ಲೇ ಲಾಕ್ ಡೌನ್ ಘೋಷಣೆಯಾಗಿತ್ತು. ಇದರಿಂದ ಸಾಕಷ್ಟು ಬಟ್ಟೆಗಳ ಸಂಗ್ರಹ ಉಳಿದಿದೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿ ಬಟ್ಟೆ ತರಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕವೂ ವ್ಯಾಪಾರ ನಿಂತು ಹೋಗಿದೆ ಎಂದು ವ್ಯಾಪಾರಿಗಳು ಪೇಚಾಡುತ್ತಿದ್ದಾರೆ.
ಪ್ರತಿಷ್ಠಿತ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಆರು ತಿಂಗಳ ಮೊದಲೇ ಅರ್ಡರ್ ಕೊಟ್ಟು ತರಿಸಿಕೊಳ್ಳಬೇಕು. ಲಾಕ್ ಡೌನ್‌ಗಿಂತ ಮುಂಚೆ ಆರ್ಡರ್ ನೀಡಿದ ವಸ್ತಗಳು ಈಗ ಬರಲು ಶುರು ಆಗಿವೆ. ಆದರೆ, ಈ ಹಿಂದೆ ತರಿಸಿಕೊಂಡ ಬಟ್ಟೆಗಳು ಮಾರಾಟವಾಗದೆ ಉಳಿದುಕೊಂಡಿವೆ. ನಷ್ಟದಲ್ಲೇ ಕೆಲಸಗಾರರ ಸಂಬಳ ನೀಡುತ್ತಿದ್ದೇವೆ. ಅಲ್ಲದೇ ವಿದ್ಯುತ್ ಬಿಲ್ ಕಟ್ಟುತ್ತಿದ್ದೇವೆ. –ರಾಮಕೃಷ್ಣ ಸುತ್ರಾವೆ, ಮಾಲೀಕರು, ಬಟ್ಟೆ ಅಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.