ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ
Team Udayavani, Feb 17, 2017, 2:59 PM IST
ಶಹಾಬಾದ: ನಮ್ಮ ಸರ್ಕಾರ ಬಂದ ಮೇಲೆ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕೆಲ್ಲ 371ನೇ(ಜೆ) ಕಲಂ ಜಾರಿಗೆ ಬಂದಿರುವ ಕಾರಣದಿಂದ ಎಂದು ಗೃಹ ಖಾತೆ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು. ನಗರದಲ್ಲಿ ಗುರುವಾರ ನಗರದ ಪೊಲೀಸ್ ಠಾಣೆ ಮತ್ತು ಪೊಲೀಸ್ ಉಪಾಧಿಧೀಕ್ಷಕರ ಕಚೇರಿ ಕಟ್ಟಡ ನಿರ್ಮಾಣದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು 371ನೇ(ಜೆ) ಕಲಂ ಜಾರಿಗೆ ತರಲು ಪ್ರಯತ್ನಿಸದಿದ್ದರೆ ಈ ಭಾಗ ಅಭಿವೃದ್ಧಿಯಾಗುತ್ತಿರಲಿಲ್ಲ. ಈ ಭಾಗದಲ್ಲಿ ಖರ್ಗೆ ಅವರು ಮಾಡಿರುವ ಜನಪರ ಕೆಲಸಗಳನ್ನು ಮುಂದಿನ ಪೀಳಿಗೆ ಸ್ಮರಿಸುತ್ತದೆ ಎಂದು ಹೇಳಿದರು. ಈಗಾಗಲೇ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ನಗರ ಪೊಲೀಸ್ ಠಾಣೆ ಮತ್ತು ಪೊಲೀಸ್ ಉಪಾಧೀಕ್ಷಕರ ಕಚೇರಿ ಕಟ್ಟಡದ ನಿರ್ಮಾಣ ಮಾಡಲಾಗುತ್ತಿದೆ.
ಅದರ ಜತೆಗೆ ನಗರದ ಪೊಲೀಸರಿಗೆ 24 ವಸತಿ ಗೃಹ ನಿರ್ಮಾಣ ಮಾಡಲು ಸುಮಾರು 5 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ಹೇಳಿದರು. ರಾಜ್ಯದ 174 ತಾಲೂಕುಗಳಲ್ಲಿ ಮಾತ್ರ ಅಗ್ನಿಶಾಮಕ ಠಾಣೆ ಸ್ಥಾಪಿಸಲಾಗಿದೆ. ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ ನಗರದಲ್ಲಿ ಒಂದು ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡಲು ಸದನದಲ್ಲಿ ಮಂಜೂರಾತಿ ಪಡೆದು ಕ್ರಮ ಕೈಗೊಳ್ಳುತ್ತೇನೆ.
ಎಚ್ ಕೆಆರ್‌ಡಿಬಿಗೆ 1500 ಕೋಟಿ ರೂ. ಅನುದಾನ ನೀಡುವಂತೆ ಸಚಿವ ಸಂಪುಟದಲ್ಲಿ ಮನವೊಲಿಸುತ್ತೇನೆ. ನಗರದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು. ಪೊಲೀಸರಿಗೆ ಸರಿಯಾದ ಮನೆಗಳಿಲ್ಲ. ಇನ್ನೂ ಹಳೆ ಕಾಲದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ ಪೊಲೀಸರಿಗೆ 11000 ಸಾವಿರ ಮನೆ ಕಟ್ಟಿಕೊಡಲು ಮುಂದಾಗಿದೆ.
ಈಗಾಗಲೇ 4000 ಮನೆ ನಿರ್ಮಾಣವಾಗುತ್ತಿವೆ. 11000 ಸಾವಿರ ಮನೆ ಕಟ್ಟಲು ಸುಮಾರು1818 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಪೊಲೀಸ್ ಠಾಣೆಗಳಿಗೆ ನೀಡಲು ಸುಮಾರು 1000 ವಾಹನ ಖರೀದಿ ಮಾಡಲಾಗಿದೆ. ರಾಜ್ಯದ ಸಾವಿರಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಕಂಪ್ಯೂಟರ್, ಟೆಲಿಫೋನ್, ವೈರಲೆಸ್Õ, ವಾಹನ ಒದಗಿಸಿಕೊಟ್ಟ ಏಕೈಕ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.
ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈಗಾಗಲೇ 11.30 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ. ಅಲ್ಲದೇ ಅಲ್ಪಸಂಖ್ಯಾತರ 2 ಹಾಸ್ಟೆಲ್, ಸಿಸಿ ರಸ್ತೆ,ಚರಂಡಿ ಕಾಮಗಾರಿಗೆ ಸುಮಾರು 3 ಕೋಟಿ ರೂ. ಸೇರಿದಂತೆ ಎಚ್‌ಕೆಆರ್‌ಡಿಬಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಲ್ಲಿ ಒಟ್ಟಾರೆ 14 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಜನರ ಕಣ್ಣಿಗೆ ಕಾಣುತ್ತಿವೆ. ಭರವಸೆ ನೀಡುವ ಕಾಲ ಹೋಗಿದೆ. ಈಗ ಏನ್ನಿದ್ದರೂ ಕೆಲಸ ಮಾಡಿ ತೋರಿಸುವ ಕಾಲ. ಆದರೆ ಪ್ರಧಾನಮಂತ್ರಿ ಮೋದಿ ಮನ ಕಿ ಭಾತ್ ಹೇಳುವ ಬದಲು ಕಾಮಕಿ ಭಾತ್ ಹೇಳುವ ಕೆಲಸ ಮಾಬೇಕು. ಪ್ರಧಾನ ಮಂತ್ರಿ ಅವರ ನೋಟು ಅಪನಗಧಿ ಕರಣದಿಂದಾಗಿ ನಮ್ಮ ದೇಶದ ಆರ್ಥಿಕತೆ ಬುಡಮೇಲಾಗಿದೆ. ನೋಟು ಬಂದಿಯಿಂದ ದೇಶದ ಬಡಜನರಿಗೆ ಎಲ್ಲಿಲ್ಲದ ತಾಪತ್ರಯವಾಗಿದೆ.
ಬೆವರು ಸುರಿಸಿ ದುಡಿದ ಹಣವನ್ನು ಬ್ಯಾಂಕಿನಿಂದ ಸಲೀಸಾಗಿ ತೆಗೆದುಕೊಳ್ಳುವ ಸ್ವಾತಂತ್ರ ಅವರಿಗಿಲ್ಲ. ದೇಶದಲ್ಲಿ ಎಟಿಎಂನಿಂದ ಹಣ ತೆಗೆಯಲು ಹೋಗಿ 175 ಜನರು ಸತ್ತಿದ್ದಾರೆ. ದೇಶದಲ್ಲಿ ಶೇ. 65ರಷ್ಟು ಜನ ರೈತರಿದ್ದಾರೆ. ಅವರು ದುಡ್ಡಿನಿಂದಲೇ ವ್ಯವಹಾರ ಮಾಡುತ್ತಾರೆ. ಅವರ ಮೇಲೂ ಪರಿಣಾಮ ಬೀರಿದೆ. ಮೋದಿ ಸರ್ಕಾರ ಬಡವರ ಪರವಾಗಿಲ್ಲ. ಶ್ರೀಮಂತರ ಪರವಾಗಿದೆ. ಆ
ದ್ದರಿಂದ ಮತದಾರರು ಇನ್ನು ಮುಂದೆ ಜಾಗೂರಕತೆಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಇಕ್ಬಾಲ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ, ನಗರಸಭೆ ಸದಸ್ಯರಾದ ಗೀತಾ ಸಾಹೇಬಗೌಡ ಬೋಗುಂಡಿ, ನಗರಸಭೆ ಸದಸ್ಯ ಗಿರೀಶ ಕಂಬಾನೂರ,
ಪೊಲೀಸ್ ಮಹಾನಿರ್ದೇಶಕ ಟಿ. ಸುನೀಲಕುಮಾರ, ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿ ಶಶಿಕುಮಾರ ಎನ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ವಿಜಯಕುಮಾರ ರಾಮಕೃಷ್ಣ, ಕುಮಾರ ಚವ್ಹಾಣ, ಹಾಷಮಖಾನ, ಅಜೀತಕುಮಾರ ಪಾಟೀಲ, ಡಿವೈಎಸ್‌ಪಿ ಮಹೇಶ ಮೇಗಣ್ಣನವರ್, ಸಿಪಿಐ ಅಸ್ಲಾಂ ಭಾಷಾ, ಡಾ| ಅಹ್ಮದ್ ಪಟೇಲ್, ನಿಂಗಣ್ಣ ಸಂಗಾವಿಕರ್, ಬಾಬಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.