ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Mar 15, 2017, 3:27 PM IST
ಕಲಬುರಗಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಬಾಕಿಯಿರುವ ಪಿಂಚಣಿ, ವಿವಾಹ, ವೈದ್ಯಕೀಯ ಸೌಲಭ್ಯದ ಹಣವನ್ನು ಯಾವುದೇ ಷರತ್ತಿಲ್ಲದೇ ಕಾರ್ಮಿಕರಿಗೆ ಒದಗಿಸಬೇಕು. ನೋಂದಣಿ ನವೀಕರಣಸೌಲಭ್ಯಗಳ ವಿತರಣೆಗೆ ಸುವ್ಯವಸ್ಥಿತ ಕಚೇರಿ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಬೇಕು. ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೌಲಭ್ಯಗಳ ಅರ್ಜಿಗಳಿಗೆ ಸಮರ್ಪಕ ಹಣ ನೀಡಿ 30 ದಿನದೊಳಗೆ ಸೌಲಭ್ಯದ ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು.
ನಿಯಮ 39 ರಂತೆ 50 ವರ್ಷ ತುಂಬಿದ ಮಹಿಳೆ ಮತ್ತು 55 ತುಂಬಿದ ಪುರುಷರು ಈಗಾಗಲೇ ಪಿಂಚಣಿಗೆ ಸಲ್ಲಿಸಿರುವ ಅರ್ಜಿ ಪರಿಶೀಲಿಸಿ, ಅರ್ಜಿ ಸಲ್ಲಿಸಿದ ದಿನದಿಂದಲೇ ಹಿಂಬಾಕಿ ಸಮೇತ ಪಿಂಚಣಿ 3000 ರೂ.ಗಳನ್ನು ಹೆಚ್ಚಿಸಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. 2015 ರ ಮೇ 18 ರ ಅಧಿಸೂಚನೆಯಂತೆ 60 ವರ್ಷ ತುಂಬಿದ ದಿನದಿಂದ ಫಲಾನುಭವಿಗಳಿಗೆ ಬಾಕಿ ಸಹಿತ ಪಿಂಚಣಿ ಮಂಜೂರು ಮಾಡಬೇಕು.
ಕಲ್ಯಾಣ ಮಂಡಳಿಯಿಂದ ಫಲಾನುಭವಿಗಳಿಗೆ ಸಲಕರಣೆ ಸಹಾಯಧನ ನೀಡಲು ಇರುವ ತರಬೇತಿ ನೀಡುವಾಗ ತರಬೇತಿಯನ್ನು ಹಂತ, ಹಂತವಾಗಿ ನೀಡಬೇಕು. ತರಬೇತಿ ಸಮಯದಲ್ಲಿ ಟಿಎ, ಡಿಎ ಸಹಿತ ಸ್ಟೈಫಂಡ್ ನೀಡಬೇಕು. ಜಿಲ್ಲೆಯಲ್ಲಿ ಪರಿಶೀಲನೆ ನೆಪದಲ್ಲಿ ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ, ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಓದುವಾಗಲೇ ಶೈಕ್ಷಣಿಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಸರ್ಕಾರದ ಅನುದಾನದಿಂದ ಜಾರಿಗೊಳಿಸಲು ಸಚಿವರೊಂದಿಗೆ ಚರ್ಚಿಸಬೇಕು. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಅವಲಂಬಿತರನ್ನು ಒಳಗೊಂಡಂತೆ ಆರ್‌ಸಿಐವೈನ್ನು ಜಾರಿಗೊಳಿಸುವಂತೆ, ಈಗಿರುವ 30 ಲಕ್ಷ ರೂ.ಗಳ ಮಿತಿಯನ್ನು ಒಂದು ಕೋಟಿ ರೂ. ಗಳಿಗೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ ತರುವಂತೆ, ವಲಸೆ ಕಾರ್ಮಿಕರು ಕಲ್ಯಾಣ ಮಂಡಳಿ ಸೌಲಭ್ಯ ಪಡೆಯಲು ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್)ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ನಾಗಯ್ಯಸ್ವಾಮಿ, ಬಾಬು ಹೂವಿನಹಳ್ಳಿ, ದೇವಿಂದ್ರ ಕಟ್ಟಿಮನಿ ಹಾಗೂ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.