ಅಪ್ಪನ ಗುಡಿಗೆ ಭಕ್ತಸಾಗರ
Team Udayavani, Aug 28, 2018, 10:49 AM IST
ಕಲಬುರಗಿ: ಹಿಂದುಗಳ ಪವಿತ್ರ ಮಾಸ ಶ್ರಾವಣ ಮಾಸದ ನಡುವಿನ ಸೋಮವಾರ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಮಹಾದಾಸೋಹಿ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಾಸ್ಥಾನಕ್ಕೆ ನಾಡಿನ ಮೂಲೆ-ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂದು ಮಹಾಪುರುಷ ಶರಣಬಸವೇಶ್ವರರ ದರ್ಶನ ಪಡೆಯಿತು.
ಮಹಾನಗರದ ಎಲ್ಲ ರಸ್ತೆಗಳು ಶರಣನ ಗುಡಿಯೆಡೆಗೆ ಎನ್ನುವಂತೆ ಭಕ್ತರು ಆಗಮಿಸಿ ದರ್ಶನ ಪಡೆದರು. ಅದರಲ್ಲೂ ಜಿಟಿಜಿಟಿ ಮಳೆ ಲೆಕ್ಕಿಸದೇ ಭಕ್ತರು ಸೋಮವಾರ ಬೆಳಗಿನ ಜಾವದಿಂದಲೇ ಶರಣನ ದರ್ಶನ ಪಡೆಯುತ್ತಿರುವುದು ಅದರಲ್ಲೂ ಉದ್ದನೆ ಸಾಲು ಇದ್ದರೂ ಸರದಿಯಲ್ಲಿ ನಿಂತಿರುವುದು ಕಂಡು ಬಂತ್ತು.
ಶರಣಬಸವೇಶ್ವರ ಮಹಾರಾಜ್ ಕೀ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು. ಗ್ರಾಮೀಣ ಭಾಗದಿಂದ ತಮಗೆ ಅನುಕೂಲವಾದ ವಾಹನಗಳಿಂದ ಆಗಮಿಸಿದ್ದರೆ ಇನ್ನೂ ಕೆಲವರು ಪಾದಯಾತ್ರೆ ಮೂಲಕ ಅದರಲ್ಲೂ ಭಜನೆ ಮೂಲಕ
ಆಗಮಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ಮಹಾನಗರದ ಭಕ್ತರೂ ಮನೆಯಿಂದಲೇ ನೇವೈದ್ಯ ಕಾಯಿ ಕರ್ಪೂರ ತಂದು ಅರ್ಪಿಸಿದರು. ಕೆಲವರು ದೀಡ ನಮಸ್ಕಾರ ಹಾಕಿದರೆ, ಇನ್ನೂ ಕೆಲವರು ತಮ್ಮ ಹರಕೆ ತೀರಿಸಿದರು. ನಡುವಿನ ಸೋಮವಾರ ಹಿನ್ನೆಲೆಯಲ್ಲಿ ಶರಣನ ಸನ್ನಿಧಿಯಲ್ಲಿ ಜಾತ್ರೆಯಂತೆ ವಾತಾವತಣ ಕಂಡು ಬಂತು.
ಅಂಗಡಿ ಮುಂಗಟ್ಟುಗಳು, ಮಕ್ಕಳಿಗೆ ಆಟಿಕೆ ಸಾಮಗ್ರಿಗಳು ಎಲ್ಲವು ಇದ್ದವು. ಸಂಜೆ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ ಸನ್ನಿಧಾನದಲ್ಲಿ ಮಹಾದಾಸೋಹ ಸಂಸ್ಥಾನದಲ್ಲಿ ಶ್ರಾವಣ ಮಾಸದ ಉಪನ್ಯಾಸ ಮಾಲಿಕೆಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.